ಪರಿಶೀಲಕನು ಅಧಿನಿಯಮದ ಉಪಬಂಧಗಳನ್ನು ಮತ್ತು ನಿಯಮಗಳ ಮತ್ತು ಅಧಿನಿಯಮದ ಮೇರೆಗೆ ಸರ್ಕಾರವು ಮಾಡಿದ ಯಾವುದೇ ಆದೇಶವನ್ನು ಕ್ರಮಬದ್ಧವಾಗಿ ಪಾಲಿಸಲಾಗುತ್ತಿದೆಯೋ ಎಂಬ ಬಗ್ಗೆ ಸ್ವತಃ ಮನದಟ್ಟು ಮಾಡಿಕೊಳ್ಳುವ ಉದ್ದೇಶಕ್ಕಾಗಿ ಅವಶ್ಯವಾಗಿರುವುದೆಂದು ಅವನಿಗೆ ಕಂಡು ಬರಬಹುದಾದಂ೦ಥ ಪರೀಕ್ಷೆಯನ್ನು ಮಾಡತಕ್ಕುದು, ವಿಶೇಷವಾಗಿ ಅವನು ಸ್ವತಃ ಮನದಟ್ಟು ಮಾಡಿಕೊಳ್ಳತಕ್ಕುದು ಮತ್ತು -
(1) ಈ ಅಧಿನಿಯಮದ ಉದ್ದೇಶಗಳನ್ನು ಕಾರ್ಯಗತಗೊಳಿಸುವುದಕ್ಕಾಗಿ ಅವನು ಅವಶ್ಯವೆಂದು ಭಾವಿಸುವಂಥ ಆವರಣ ಮತ್ತು ನಿಯಮಿಸಿದ ಯಾವುದೇ ರಿಜಿಸ್ಫರುಗಳು ದಾಖಲೆಗಳು ಮತ್ತು ನೋಟಿಸುಗಳ ಬಗ್ಗೆ ಅಂಥ ಪರೀಕ್ಷೆಯನ್ನು ಮಾಡತಕ್ಕುದು ಮತ್ತು ಸ್ಥಳದಲ್ಲಿಯೇ ಅಥವಾ ಅನ್ಯಥಾ ಯಾವನೇ ವ್ಯಕ್ತಿಯ ಸಾಕ್ಷ್ಯವನ್ನು ತೆಗೆದುಕೊಳ್ಳತಕ್ಕುದು; ಮತ್ತು
(1) ಈ ಅಧಿನಿಯಮದ ಉದ್ದೇಶಗಳನ್ನು ಕಾರ್ಯಗತಗೊಳಿಸುವುದಕ್ಕಾಗಿ ಅವಶ್ಯವಾಗಬಹುದಾದಂಥ ಇತರ ಅಧಿಕಾರಗಳನ್ನು ಚಲಾಯಿಸಬಹುದು.
ಪರಂತು, ಯಾವನೇ ವ್ಯಕ್ತಿ ಸ್ವಂತ ಅವನನ್ನು ಅಪರಾಧದಲ್ಲಿ ಸಿಕ್ಕಿಸಲು ಪ್ರವೃತ್ತನಾಗುವ ಯಾವುದೇ ಪ್ರಶ್ನೆಗೆ ಉತ್ತರಿಸಲು ಅಥವಾ ಯಾವುದೇ ಸಾಕ್ಷ್ಯವನ್ನು ಕೊಡಲು ಅಗತ್ಯಪಡಿಸತಕ್ಕುದಲ್ಲ.