(1) ವೆಲ್ಫೇರ್ ಕಮೀಷನರನು ಅವನು ಯುಕ್ತವೆಂದು ಭಾವಿಸುವಂಥ ವಿಚಾರಣೆಗಳನ್ನು ಮಾಡಿದ ತರುವಾಯ ಮತ್ತು ಅವಶ್ಯವಿದ್ದರೆ, ಪರಿಶೀಲಕನಿಂದ ವರದಿಯನ್ನು ತರಿಸಿಕೊಂಡ ತರುವಾಯ, 3ನೇ ನಿಯಮದ ಮೂಲಕ ಅಗತ್ಯಪಡಿಸಿದಂಂತೆ ನಿಯೋಜಕನು ಸಂದಾಯ ಮಾಡಿಲ್ಲದಂಂಥ ನಿಯೋಜಿತರಿಂದ ವಸೂಲು ಮಾಡಿದ ಎಲ್ಲಾ ಜುಲ್ಮಾನೆಗಳನ್ನು ಅಥವಾ ಯಾವುದೇ ಭಾಗವನ್ನು ಅಥವಾ ನಿಯೋಜಕನು ಸಂದಾಯ ಮಾಡಿಲ್ಲದ ಅವನು ಹೊಂದಿರುವ ಸಂಂಚಯಗಳನ್ನು ಸಂದಾಯ ಮಾಡಲು ಯಾವನೇ ನಿಯೋಜಕನಿಗೆ ನೋಟೀಸನ್ನು ಜಾರಿ ಮಾಡಬಹುದು.
(2) ನವಿಯೋಜಕನು, ನೋಟೀಸನ್ನು ಸ್ವೀಕರಿಸಿದ ಹದಿನಾಲ್ಕು ದಿವಸಗಳೊಳಗೆ ಅದನ್ನು ಪಾಲಿಸತಕ್ಕದು.
(3) ಸಂದಾಯ ಮಾಡಿಲ್ಲದ ಸಂಚಯಗಳಿಗೆ ಕ್ಲೇಮುಗಳನ್ನು ಆಹ್ವಾನಿಸುವ ನೋಟೀಸಿನ ಖವಿವರಗಳು ನಮೂನೆ 'ಗ'ದಲ್ಲಿರತಕ್ಕುದು.