(1) ಮಂಡಲಿಯು, ಹದಿನಾಲ್ಕು ಸದಸ್ಯರನ್ನು ಒಳಗೊಂಡಿರತಕ್ಕುದು, ಅವರ ಪೈಕಿ ನಾಲ್ವರು ನಿಯೋಜಕರ ಪ್ರತಿನಿಧಿಗಳು ಹಾಗೂ ನಾಲ್ವರು ಸ್ವತಂತ್ರ ವೃತ್ತಿಯವರು ಮತ್ತು ಇಬ್ಬರು ಮಹಿಳಾ ಪ್ರತಿವಿಧಿಗಳಾಗಿರತಕ್ಕುದು.
(2) ನಿಯೋಜಕ ಮತ್ತು ನಿಯೋಜಿತರ ಪ್ರತಿಯೊಬ್ಬ ಪ್ರತಿನಿಧಿಯನ್ನು ಆ ಉದ್ದೇಶಕ್ಕಾಗಿ ರಾಜ್ಯ ಸರ್ಕಾರವು ಶಿಫಾರಸು ಮಾಡಬಹುದಾದಂಥ ನಿಯೋಜಕ ಮತ್ತು ನಿಯೋಜಿತರು ಸಂಸ್ಥೆಗಳೊಂದಿಗೆ ಸಮಾಲೋಚಿಸಿ ನೇಮಕ ಮಾಡತಕ್ಕುದು.