ಮಂಡಲಿಯು-
(ಕ) ಯಾವುದರ ಮೌಲ್ಯವು, ಪ್ರತಿಯೊಂದು ಸಂದರ್ಭದಲ್ಲಿ ಹತ್ತು ಸಾವಿರ ರೂಪಾಯಿಗಳನ್ನು ಮೀರುವುದಿಲ್ಲವೋ ಮಂಡಲಿಗೆ ಸೇರಿದ ಆ ಯಾವುದೇ ಚಿರಸ್ವತ್ತನ್ನು ಮಾರಾಟ ಅಥವಾ ವಿನಿಮಯದ ಮೂಲಕ ವಿಲೆ ಮಾಡಬಹುದು ಅಥವಾ ಮಂಡಲಿಗೆ ಸೇರಿದ ಯಾವುದೇ ಸ್ಥಿರ ಸ್ವತ್ತನ್ನು 12 ತಿಂಗಳುಗಳಿಗೆ ಮೀರಿದ ಯಾವುದೇ ಅವಧಿಗಾಗಿ ಬಾಡಗೆಗೆ ಕೊಡಬಹುದು.
(ಖ) ರಾಜ್ಯ ಸರ್ಕಾರದ ಮಂಜೂರಾತಿಯನ್ನು ಪಡೆದು ಮಂಡಲಿಗೆ ಸೇರಿದ ಇತರ ಚರ ಅಥವಾ ಸಿರ ಸ್ವತ್ತನ್ನು ಬಾಡಿಗೆಗೆ ಕೊಡಬಹುದು, ಮಾರಾಟ ಮಾಡಬಹುದು ಅಥವಾ ಅನ್ಯಥಾ ವಿಲೆ ಮಾಡಬಹುದು.