(1) ಮಂಡಲಿಯು, ಈ ಅಧಿನಿಯಮದ ಉಪಬಲಂಧಗಳನ್ನು ಪರಿಣಾಮಕಾರಿಯಾಗಿಸುವುದಕ್ಕಾಗಿ ಅದು ಅವಶ್ಯ ಅಥವಾ ವಿಹಿತವೆಂದು ಪರ್ಯಾಲೋಚಿಸಬಹುದಾದಂಥ ಎಲ್ಲಾ ಕರಾರುಗಳನ್ನು ಮಾಡಿಕೊಳ್ಳಬಹುದು ಮತ್ತು ಅವುಗಳನ್ನು ನೆರವೇರಿಸಬಹುದು.
(2) ಈ ಅಧಿನಿಯಮದ ಮೇರೆಗೆ ಅಥವಾ ಅದರ ಯಾವುದೇ ಉದ್ದೇಶಕ್ಕಾಗಿ ಮಾಡಿಕೊಂಡ ಪ್ರತಿಯೊಂದು ಕರಾರನ್ನು ಮಂಡಲಿಯ ಪರವಾಗ?,-
(i) ವೆಲ್ ಫೇರ್ ಕಮೀಷನರನು, ಅಥವಾ
(1) ಅದು ನಿರ್ದಿಷ್ಟಪಡಿಸಬಹುದಾದಂಥ ಷರತ್ತುಗಳಿಗೊಳಪಟ್ಟು ಅದು ಅಧಿಕೃತಗೊಳಿಸಬಹುದಾದಂಥ ಮಂಡಲಿಯ ಸದಸ್ಯರು ಅಥವಾ ಅಧಿಕಾರಿಯು - ಮಾಡಿಕೊಳ್ಳತಕ್ಕುದು.
ಪರಂತು, ಹತ್ತು ಸಾವಿರ ರೂಪಾಯಿಗಳನ್ನು ಮೀರಿದ ವೆಚ್ಚವನ್ನು ಒಳಗೊಳ್ಳುವ ಯಾವುದೇ ಕರಾರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಪೂರ್ವ ಮಂಜೂರಾತಿಯನ್ನು ಪಡೆದುಕೊಳ್ಳತಕ್ಕುದು.