ಮಂಡಲಿಯು, ಪ್ರತಿ ಹಣಕಾಸು ವರ್ಷವು ಮುಕ್ತಾಯವಾದ ದಿನಾಂಕದಿಂದ ಮೂರು ತಿಂಗಳೊಳಗೆ ಆ ವರ್ಷದಲ್ಲಿನ ಅದರ ಚಟುವಟಿಕೆಗಳನ್ನು ಕೊಡುವ ವಾರ್ಷಿಕ ವರದಿಯೊಂದಿಗೆ ಜಮೆಗಳು ಮತ್ತು ವೆಚ್ಚಗಳ ಲೆಕ್ಕ ಪರಿಶೋಧಿತ ವಿವರಣ ಪತ್ರವನ್ನು ರಾಜ್ಯ ಸರ್ಕಾರಕ್ಕೆ ಅನುಮೋದನೆಗಾಗಿ ಒಪ್ಪಿಸತಕ್ಕುದು, ರಾಜ್ಯ ಸರ್ಕಾರವು ಆ ವಿವರಣ ಪತ್ರ ಮತ್ತು ವರದಿಯನ್ನು ಅನುಮೋದಿಸಿದ ತರುವಾಯ, ಮಂಡಲಿಯು, ಅದು ಸೂಕ್ತ ಎಂದು ಭಾವಿಸಬಹುದಾದಂಥ ರೀತಿಯಲ್ಲಿ ಅದನ್ನು ಪ್ರಕಟಿಸುವಂತೆ ಮಾಡತಕ್ಕುದು. ಅಂಥ ಪ್ರತಿಯೊಂದು ವಿವರಣ ಪತ್ರವನ್ನು ಮತ್ತು ವರದಿಯನ್ನು ಅವು ಪ್ರಕಟವಾದ ತರುವಾಯ ಆದಷ್ಟು ಬೇಗ, ರಾಜ್ಯ ವಿಧಾನ ಮಂಡಲದ ಪ್ರತಿಯೊಂದು ಸದನದ ಮುಂದೆ ಇಡತಕ್ಕುದು.
Loading…