(1) ಪ್ರತಿಯೊಂದು ಹಣಕಾಸು ವರ್ಷಕ್ಕಾಗಿ ಬಜೆಟ್ ಅಂದಾಜುಗಳನ್ನು ತಯಾರಿಸತಕ್ಕುದು ಮತ್ತು ಅವುಗಳನು ಹಿಂದಿನ ಹಣಕಾಸು ವರ್ಷದ ಡಿಸೆಂಬರ್ ಮೊದಲನೇ ದಿವಸದಂದು ಅಥವಾ ಅದಕ್ಕೆ ಮುಂಚೆ ಮಂಡಲಿಯ ಮುಂದೆ ಇಡತಕ್ಕುದು ಮತ್ತು ಮಂಡಲಿಯು ಅದನ್ನು ಅನುಮೋದಿಸಿ ತರುವಾಯ ಅದನ್ನು ಡಿಸೆಂಬರ್ 15 ರಂದು ಅಥವಾ ಅದಕ್ಕೆ ಮುಂಚೆ ರಾಜ್ಯ ಸರ್ಕಾರಕ್ಕೆ ಅನುಮೋದನೆಗಾಗಿ ಕಳುಹಿಸಿಕೊಡತಕ್ಕುದು. ರಾಜ್ಯ ಸರ್ಕಾರವು, ಅದು ಅವಶ್ಯಕವೆಂದು ಪರ್ಯಾಲೋಚಿಸುವಂಥ ತಿದ್ದುಪಡಿಗಳನ್ನು ಮತ್ತು ಬದಲಾವಣೆಗಳನ್ನು ಮಾಡಿದ ತರುವಾಯ ಬಜೆಟನ್ನು ಜನವರಿ 15ಕ್ಕೆ ಮುಂಚೆ ಅನುಮೋದಿಸತಕ್ಕುದು.
(2) ತಿದ್ದುಪಡಿ ಮಾಡಿದ ಅಥವಾ ಬದಲಾವಣೆ ಮಾಡಿದ ಮತ್ತು ಅನುಮೋದಿಸಿದ ಬಜೆಟ್ ಆ ಹಣಕಾಸು ವರ್ಷಕ್ಕಾಗಿ ಮಂಡಲಿಯ ಬಜೆಟ್ನ್ಮಾಗಿರತಕ್ಕದು ಮತ್ತು ಅದನ್ನು ಮಂಡಲಿಯ ಮೊಹರಿನೊಂದಿಗೆ ಮತ್ತು ಈ ಬಗ್ಗೆ ಕ್ರಮಬದ್ಧವಾಗಿ ಅಧಿಕೃತಗೊಳಿಸಿದ ಮಂಡಲಿಯ ಅಧಿಕಾರಿಗಳ ರುಜುವಿನೊಂದಿಗೆ ಹೊರಡಿಸತಕ್ಕುದು.
(3) ಅನುಮೋದಿತ ಬಜೆಟ್ಟಿನ ಒಂದು ಪ್ರಮಾಣಿತ ಪ್ರತಿಯನ್ನು ಫೆಬ್ರವರಿ 28ಕ್ಕೆ ಮುಂಚೆ, ಸರ್ಕಾರಕ್ಕೆ ಕಳುಹಿಸಿಕೊಡತಕ್ಕದು.