ನಿಯಂತ್ರಣಾಧಿಕಾರಿಯು, ತನ್ನ ಅಧಿಕಾರ ವ್ಯಾಪ್ತಿಯಲ್ಲಿ 4ನೇ ಪ್ರಕರಣದ (2)ನೇ ಉಪ ಪ್ರಕರಣದ ಅಡಿಯ ಲ್ಲಿ ಮಾಲೀಕ ಮತ್ತು ಬಾಡಿಗೆದಾರನು, ಬಾಡಿಗೆ ಒಪ್ಪಂದದ ಪ್ರತಿಯನ್ನು ಸಲ್ಲಿಸುವುದಕ್ಕಾಗಿ ನಿಯಮಿಸಲಾದ ಪ್ರಾಧಿಕಾರಿಯಾಗಿರತಕ್ಕದ್ದು.
(1) 4ನೇಪ್ರಕರಣದ (2)ನೇ ಉಪಪ್ರಕರಣದ ಪರಂತುಕದ ಅಡಿಯಲ್ಲಿ ಮಾಲೀಕ ಮತ್ತು ಬಾಡಿಗೆದಾರನು ಸಲ್ಲಿಸಬೇಕಾದ ವಿವರಗಳು ನಮೂನೆ 1ರಲ್ಲಿ ಇರತಕ್ಕದ್ದು.
(2) (1)ನೇ ಉಪನಿಯ ಮದ ಅಡಿಯ ಲ್ಲಿ ವಿವರಗಳನ್ನು, ಸಂಬಂಧಪಟ್ಟ ಪ್ರದೇಶದಲ್ಲಿ ಅಧಿನಿಯಮದ ಉಪಬಂಧಗಳ ಜಾರಿ ದಿನಾಂಕದಿಂದ ತೊಂಬತ್ತು ದಿನಗಳೊಳಗೆ ಸಲ್ಲಿಸತಕ್ಕದ್ದು: ಪರಂತು, ನಿಯಂತ್ರಣಾಧಿಕಾರಿಯು, ಮಾಲೀಕ ಮತ್ತು ಬಾಡಿಗೆದಾರನಿಗೆ ಸಕಾಲದಲ್ಲಿ ವಿವರಗಳನ್ನು ಸಲ್ಲಿಸಲಾಗದಿದ್ದು ದಕ್ಕೆ ಸಾಕಷ್ಟು ಕಾರಣಗಳಿದ್ದುವೆಂದು ಆತನಿಗೆ ಮನವರಿಕೆಯಾದರೆ, ತೊಂಬತ್ತು ದಿನಗಳ ಅಂಥ ಅವಧಿಯು ಮುಕ್ತಾಯವಾದ ತರುವಾಯ ಆದರೆ, ಅರವತ್ತು ದಿನಗಳ ಹೆಚ್ಚಿನ ಅವಧಿಯೊಳಗೆ ವಿವರಗಳನ್ನು ಸಲ್ಲಿಸುವುದಕ್ಕೆ ಅವಕಾಶ ನೀಡಬಹುದು.
(3) 4ನೇ ಪ್ರಕರಣದ (2)ನೇ ಉಪಪ್ರಕರಣದ ಅಡಿಯಲ್ಲಿಯ ವಿವರಗಳನ್ನು,
(ಎ) ನಿಯಂತ್ರಣಾಧಿಕಾರಿಯ ವರ ಕಛೇರಿಯಲ್ಲಿ ಸ್ವತ: ಅಥವಾ ಸಂದೇಶವಾಹಕನ ಮೂಲಕ ಒಪ್ಪಿಸಿ ಸ್ವೀಕೃತಿ ಪತ್ರವನ್ನು ಪಡೆದುಕೊಳ್ಳುವ ಮೂಲಕ; ಅಥವಾ
(ಬಿ) ಸ್ವೀಕೃತಿ ಪತ್ರ ಸಹಿತವಾದ ನೋಂದಾಯಿತ ಅಂಚೆ ಮೂಲಕ, -ಸಲ್ಲಿಸತಕ್ಕದ್ದು.
ಆವರಣದ ಶೇಕಡಾ ಎಪ್ಪತ್ತೈದಕ್ಕೆ ಕಡಿಮೆಯ ಲ್ಲದಷ್ಟು ಭಾಗವನ್ನು ಈ ರೆ, ಅದನ್ನು ಸಾಕಷ್ಟು ನವೀಕರಿಸಲಾಗಿದೆ ಎಂದು ಲಾಗಿದ್ದ ಮುಂದಿನ ಮಾನದಂಡಕ್ಕನು ಸಾರ ಹೊಸದಾಗಿ ಕಟ್ಟ ಭಾವಿಸತಕ್ಕದ್ದು, ಎಂದರೆ,-
(ಎ) ಆವರಣದ ರಚನಾ ಗೋಡೆಗಳನ್ನು ಬದಲಾಯಿಸಿರುವುದು ಅಥವಾ ಪುನರ್ ನಿರ್ಮಿಸಿರುವುದು;
(ಬಿ) ಮುಖ್ಯದ್ವಾರ ಮತ್ತು ಇತರ ಬಾಗಿಲುಗಳನ್ನು ಬದಲಾಯಿಸಿರುವುದು; ಮತ್ತು, ವು ನವೀಕರಣದ ದಿನಾಂಕದಂದು ನಿರ್ಧರಿಸಲಾದಂತೆ ಆವರಣಗಳ (ಸಿ) ನವೀಕರಣದ ವೆಚ್ಚ ಮೌಲ್ಯದ ಶೇಕಡಾ ಎಪ್ಪತ್ತೈದರಷ್ಟನ್ನು ಮೀರಿರುವುದು.