(1) ಮಾಲೀಕ ಮತ್ತು ಬಾಡಿಗೆದಾರನ ನಡುವೆ ಲಿಖಿತದಲ್ಲಿ ಒಪ್ಪಂದ ಮಾಡಿಕೊಂಡ ಅಂಥ ಅವಧಿಗಾಗಿ, ಕಟ್ಟಡವನ್ನು ಪೂರ್ಣವಾಗಿ ಭಾಗಶ: ಬಾಡಿಗೆಗೆ ಕೊಡಲು ನ್ಯಾಯಾಲಯದ ಅನುಮತಿಯನ್ನು ಕೋರಿ, 37ನೇ ಪ್ರಕರಣದ (1)ನೇ ಉಪಪ್ರಕರಣದ ಅಡಿಯಲ್ಲಿ ಅಧಿಕಾರ ವ್ಯಾಪ್ತಿಯನ್ನುಳ್ಳ ನ್ಯಾಯಾಲಯಕ್ಕೆ ಮಾಲೀಕನು ಅರ್ಜಿಯ ನ್ನು ಸಲ್ಲಿಸಬಹುದು.
(2) ನ್ಯಾಯಾಲಯ ವು, ಉಪನಿಯಮ (1)ರ ಅಡಿಯಲ್ಲಿ ಅರ್ಜಿಯನ್ನು ಪರಿಗಣಿಸಿದ ತರುವಾಯ ಮತ್ತು ತಾನು ಸೂಕ್ತವೆಂದು ಭಾವಿಸುವಂಥ ವಿಚಾರಣೆ ನಡೆಸಿದ ತರುವಾಯ, ಆದೇಶದಲ್ಲಿ ವಿಧಿಸಲಾಗುವ ನಿಬಂಧನೆಗಳು ಮತ್ತು ಷರತ್ತುಗಳ ಮೇಲೆ ಅನುಮತಿ ನೀಡಬಹುದು.
(3) (2)ನೇ ಉಪನಿಯಮದ ಅಡಿಯ ಲ್ಲಿ ಮಂಜೂರಾದ ಬಾಡಿಗೆಯ ಅವಧಿಯು ಮುಕ್ತಾಯ ವಾದ ದಿನಾಂಕದಿಂದ ಮೂರು ತಿಂಗಳ ಅವಧಿಯೊಳಗೆ ಮಾಲೀಕನು, ಬಾಡಿಗೆದಾರನನ್ನು ಹೊರಹಾಕುವುದಕ್ಕಾಗಿ, ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ನ್ಯಾಯಾಲಯಕ್ಕೆ ಅರ್ಜಿಸಲ್ಲಿಸಬಹುದು.