(1) ಯಾವುದೇ ಪ್ರದೇಶಕ್ಕೆ ಅಧಿನಿಯ ಮದ 4ನೇ ಅಧ್ಯಾಯವು ಅನ್ವಯವಾಗುವ ದಿನಾಂಕಕ್ಕೆ ಮೊದಲು, ಆ ಪ್ರದೇಶದಲ್ಲಿ ವ್ಯವಹಾರ ನಡೆಸುತ್ತಿದ್ದ ಮಧ್ಯವರ್ತಿ ಅಥವಾ ಎಸ್ಟೇಟ್ ಏಜೆಂಟನು, ಎರಡನೂ ರು ರೂಪಾಯಿಗಳ ನೋಂದಣಿ ಶುಲ್ಕದೊಡನೆ ನಮೂನೆ 8ರಲ್ಲಿ ಸಂಬಂಧಪಟ್ಟ ನಿಯ ಂತ್ರಣಾಧಿಕಾರಿಗೆ ನೋಂದಣಿಗಾಗಿ ಅರ್ಜಿಯನ್ನು ಸಲ್ಲಿಸತಕ್ಕದ್ದು.
(2) ಯಾವುದೇ ಪ್ರದೇಶಕ್ಕೆ ಅಧಿನಿಯ ಮದ 4ನೇ ಅಧ್ಯಾಯವು ಅನ್ವಯವಾಗುವ ದಿನಾಂಕದ ತುರವಾಯ ಆ ಪ್ರದೇಶದಲ್ಲಿ ದಳ್ಳಾ ಳಿ ವ್ಯವಹಾರವನ್ನು ಪ್ರಾರಂಭಿಸುವುದಕ್ಕೆ ಉದ್ದೇಶಿಸುವ ಯಾಮೊಬ್ಬ ವ್ಯಕ್ತಿಯು, ದಳ್ಳಾಳಿ ಅಥವಾ ಎಸ್ಟೇಟ್ ಏಜೆನ್ಸಿಯ ವ್ಯವಹಾರವನ್ನು ಪ್ರಾರಂಭಿಸುವುದಕ್ಕೆ ಮೊದಲು, ಎರಡುನೂರು ರೂಪಾಯಿಗಳ ನೋಂದಣಿ ಶುಲ್ಕದೊಡನೆ ನಮೂನೆ 8ರಲ್ಲಿ ಸಂಬಂಧಪಟ್ಟ ನಿಯಂತ್ರಣಾಧಿಕಾರಿಗೆ ನೋಂದಣಿಗಾಗಿ ಅರ್ಜಿಯನ್ನು ಸಲ್ಲಿಸತಕ್ಕದ್ದು.
(3) ನಿಯಂತ್ರಣಾಧಿಕಾರಿಯು, (1)ನೇ ಉಪನಿಯಮದ ಅಥವಾ ಸಂ ದರ್ಭಾನುಸಾರ (2)ನೇ ಉಪನಿಯಮದ ಅಡಿಯಲ್ಲಿ ನೋಂದಣಿಗಾಗಿನ ಅರ್ಜಿಯ ಬಗ್ಗೆ ಸತ್ಯಾಪನೆ ಮಾಡಿ ತರುವಾಯ ಮತ್ತು ಆ ಬಗ್ಗೆ ಮನದಟ್ಟು ಮಾಡಿಕೊಂಡ ತರುವಾಯ, ಮಧ್ಯವರ್ತಿಯನ್ನು ಅಥವಾ ಎಸ್ಟೇಟ್ ಏಜೆಂಟನನ್ನು ನೋಂದಾಯಿಸಬಹುದು ಮತ್ತು ಅವನಿಗೆ ನಮೂನೆ 9ರಲ್ಲಿ ಒಂದು ಪ್ರಮಾಣ ಪತ್ರ ನೀಡುಬಹು ದು.
(4) 3ನೇ ಉಪ ನಿಯ ಮದ ಅಡಿಯಲ್ಲಿ ನೀಡಲಾದ ನೋಂದಣಿ ಪ್ರಮಾಣ ಪತ್ರವು, ಅದನ್ನು ಯಾತಿಯ ದಿನಾಂಕದವರೆಗೆ, ನೀಡಿದ ದಿನಾಂಕದಿಂದ ಐದು ವರ್ಷಗಳ ಅವಧಿಯವೆರ ಗೆ ಅಥವಾ ರದ್ದಿ ಇವುಗಳಲ್ಲಿ ಯಾವುದು ಮೊದಲಿನದೋ ಆ ದಿನಾಂಕದವರೆಗೆ ಮಾನ್ಯವಾಗಿರತಕ್ಕದ್ದು. ಒಂದು ನೂರು ರೂಪಾಯಿಗಳ ನೋಂದಣಿ ನವೀಕರಣ ಶುಲ್ಕದೊಡನೆ, ಈ ಸಂಬಂಧದಲ್ಲಿ ನಮೂನೆ 8ರಲ್ಲಿ ಸಲ್ಲಿಸಲಾದ ಅರ್ಜಿಯ ಮೇಲೆ, ಅಷ್ಟೇ ಅವಧಿಗಾಗಿ ಅದನ್ನು ನವೀಕರಿಸಬಹುದು.
(5) ಯಾವುದೇ ಪ್ರದೇಶಕ್ಕೆ 4ನೇ ಅಧ್ಯಾಯವು ಅನ್ವಯವಾಗುವ ದಿನಾಂಕಕ್ಕೆ ಮೊದಲು, ಆ ಪ್ರದೇಶದಲ್ಲಿ ವ್ಯವಹಾರ ನಡೆಸುತ್ತಿದ್ದ ಮಧ್ಯವರ್ತಿ ಅಥವಾ ಎಸ್ಟೇಟ್ ಏಜೆಂಟನು ಸಲ್ಲಿಸಬೇಕೆಂದು ಅಗತ್ಯಪಡಿಸಲಾದ ವಿವರ ಪತ್ರವನ್ನು, ಅಂಥ ಅನ್ವಯದ ದಿನಾಂಕದಿ ಂದ ಮೂವತ್ತು ದಿನಗಳೊಳಗೆ, ನಮೂನೆ 10ರಲ್ಲಿ, ನಿಯಂತ್ರಣಾಧಿಕಾರಿಗೆ ಸಲ್ಲಿಸತಕ್ಕದ್ದು.