ನಿಯಂತ್ರಣಾಧಿಕಾರಿಯು, ಅಧಿನಿಯಮದ ಅಡಿಯಲ್ಲಿ ವಿಚಾರಣೆಯನ್ನು ನಡೆಸುವಾಗ, ತನ್ನ ಆದೇಶದಿಂದ ಬಾಧಿತನಾಗುವ ಲು ಒಂದು ಸೂಕ್ತ ಅವಕಾಶವನ್ನು ಕೊಡತಕ್ಕದ್ದು. ಸಂಭವವಿರುವ ಪಕ್ಷಕಾರರಿಗೆ ಅಹವಾಲನ್ನು ಹೇಳಿಕೊಳ್ಳ
Section 12ವಿಚಾರಣೆಗಳ ರಿಜಿಸ್ಟರು
ನಿಯ ಂತ್ರಣಾಧಿಕಾರಿಯು ಮಾಡಿದ ಪ್ರತಿಯೊಂದು ವಿಚಾರಣೆಯನ್ನು ಒಂದು ರಿಜಿಸ್ಟ ರಿನಲ್ಲಿ ನಮೂದಿಸತಕ್ಕದ್ದು, ಅದು ನಮೂನೆ 5 ರಲ್ಲಿರತಕ್ಕದ್ದು.
Section 13ಸಾಕ್ಷ್ಯವನ್ನು ದಾಖಲಿಸುವ ವಿಧಾನ
ನಿಯಂತ್ರಣಾಧಿಕಾರಿಯು, ತನ್ನ ಮುಂದೆ ನೀಡಿರುವ ಮೌಖಿಕ ಸಾಕ್ಷ್ಯದ ಒಂದು ಸಂಕ್ಷಿಪ್ತ ವಿವರಣೆಯನ್ನು ಸಿದ್ಧಪಡಿಸತಕ್ಕದ್ದು.
ಅಧಿನಿಯ ಮದ ಅಡಿಯ ಲ್ಲಿನ ಒಂದು ವಿಚಾರಣೆಯಲ್ಲಿ ನಿಯ ಂತ್ರಣಾಧಿಕಾರಿಯು ಹೊರಡಿಸಿದ ಅಂತಿಮ ಆದೇಶದಲ್ಲಿ, ಹೊರಡಿಸಿದ ಆದೇಶದ ಸಮರ್ಥನೆಗಾಗಿನ ಕಾರಣಗಳನ್ನು ಸಂಕ್ಷಿ ಪ್ತವಾಗಿ ತಿಳಿಸತಕ್ಕದ್ದು. ನಿಯಂತ್ರಣಾಧಿಕಾರಿಯು ಆದೇಶಕ್ಕೆ ಸಹಿ ಮಾಡತಕ್ಕದ್ದು ಮತ್ತು ಸಹಿಮಾಡಿದ ದಿನಾಂಕವನ್ನು ಅದು ಹೊಂದಿರತಕ್ಕದ್ದು.