ಮಂಡಳಿಯು, ಈ ಮುಂದಿನ ಪ್ರಕಾರ್ಯಗಳನ್ನು ವಿರ್ವಹಿಸತಕ್ಕದ್ದು, ಎಂದರೆ:-
(1). ಮೋಟಾರು ಸಾರಿಗೆ ಮತ್ತು ಇತರೆ ತತ್ಸಂಬಂಧಿತ ಕಾರ್ಮಿಕರ ನೋಂದಣಿಯನ್ನು ಖಾತ್ರಿಪಡಿಸಿಕೊಳ್ಳುವುದು;
(2) ಯೋಜನೆಗಳ ರಚನೆ, ಪುನರವಲೋಕನ ಮತ್ತು ಅನುಷ್ಕಾನಕ್ಕಾಗಿ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸುಗಳನ್ನು ಮಾಡುವುದು;
(3) ಅಪಘಾತವಾದ ಪಕ್ಷದಲ್ಲಿ ಫಲಾನುಭವಿಗೆ ತ್ವರಿತ ನೆರವನ್ನು ಒದಗಿಸುವುದು;
(4) ಫಲಾನುಭವಿಯ ಸ್ವಾಭಾವಿಕ ಮರಣದ ಕಾರಣದಿಂದಾಗಿ ಶವಸಂಸ್ಕಾರ ಸಂಬಂಧವಾದ ವೆಚ್ಚಗಳನ್ನು ಸಂದಾಯ ಮಾಡುವುದು;
(5) ಫಲಾನುಭವಿಗಳ ಮಕ್ಕಳ ಶಿಕ್ಷಣಕ್ಕಾಗಿ ಹಣಕಾಸಿನ ನೆರವನ್ನು ನೀಡುವುದು;
(6) ಮಹಿಳಾ ಫಲಾನುಭವಿಗೆ ಪ್ರಸೂತಿ ಸೌಲಭ್ಯದ ಹಣ ಸಂದಾಯವನ್ನು ಮಾಡುವುದು;
(7) ಅರವತ್ತು ವರ್ಷಗಳ ವಯಸ್ಸನ್ನು ಪೂರ್ಣಗೊಳಿಸಿದ ಫಲಾನುಭವಿಗೆ ಪಿಂಚಣಿ ಸಂದಾಯ ಮಾಡುವುದು;
(8) ಇತರೆ ಕ್ಷೇಮಾಭಿವೃದ್ದಿ ಕ್ರಮಗಳು ಮತ್ತು ಸೌಲಭ್ಯಗಳ ಸುಧಾರಣೆಗಾಗಿ ಅವಕಾಶವನ್ನು ಕಲ್ಪಿಸುವುದು; ಮತ್ತು
(9) ಪ್ರತಿಯೊಬ್ಬ ಫಲಾನುಭವಿ / ಅರ್ಜಿದಾರನಿಗೆ ತನ್ನ ಅರ್ಜಿಯ ಸ್ಥಿತಿಗತಿಯನ್ನು ಕುರಿತು ಕಿರು ಸಂದೇಶ ಸೇವೆ (ಎಸ್ಎಂಎಸ್)ಗಳನ್ನು ಕಳುಹಿಸುವುದು.