ಕ್ಲೇಮುಗಳ ಪ್ರಾಧಿಕಾರವು, ಆಕಸ್ಮಿಕ ಮರಣಕ್ಕೆ ತುತ್ತಾದ ಮೃತ ಕಾರ್ಮಿಕನ ಅಥವಾ ಅಪಘಾತದಿಂದ ಒಟ್ಮಾರೆ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದ ಕಾರ್ಮಿಕನ ಇಬ್ಬರು ಮಕ್ಕಳನ್ನು ಮೀರದ ಅವಲಂಬಿತ ಮಕ್ಕಳಿಗೆ ಪ್ರತಿವರ್ಷ ವಾರ್ಷಿಕ ಶೈಕ್ಷಣಿಕ ನೆರವನ್ನು, ಈ ಕೆಳಕಂಡಂತೆ ಮಂಜೂರು ಮಾಡಬಹುದು,-
ಕೋಷ್ಠಕ
| ಕ್ರಮ ಸಂಖ್ಯೆ | _. - ಶೈಕ್ಷಣಿಕ ಕೋರ್ಸ್ಗಳ ಹೆಸರು | ವಾರ್ಷಿಕ ಶೈಕ್ಷಣಿಕ ನೆರವು (ರೂಪಾಯಿಗಳಲ್ಲಿ) |
| 01. | 1ನೇತರಗತಿಯಿಂದ ಪದವಿ ಅಥವಾ ತತ್ನಮಾನ | 10,000/- |
| 02. | ಎಲ್ಎಲ್ಬಿ / ಅರೆ ವೈದ್ಯಕೀಯ / ಬಿ. ಫಾರ್ಮ / ನರ್ಸಿಂಗ್ ಮತ್ತು ಇತರೆ ವೃತ್ತಿಪರ ಕೋರ್ಸ್ಗಳು ಮೊದಲಾದವು | 20,000/- |
| 03 | ಎಂಬಿಬಿಎಸ್/ಬಿಇ/ಬಿ.ಟೆಕ್ ಮತ್ತು ಸ್ನಾತಕೋತ್ತರ ಕೋರ್ಸ್ಗಳು | 25,000/- |
(ಎ) ಅರ್ಜಿದಾರನ ನೋಂದಣಿಯ ದಿನಾಂಕದಿಂದ ಆತನು ಅರ್ಜಿ ಸಲ್ಲಿಸಿದ ದಿನಾಂಕದವರೆಗೆ ಕವಿಷ್ಠ ಒಂದು ವರ್ಷವಾದರೂ ಆಗಿರತಕ್ಕದ್ದು,
(ಬಿ) ನೋಂದಾಯಿತ ಮೃತ/ಒಟ್ಟಾರೆ ಶಾಶ್ವತ ಅಂಗವಿಕಲನಾದ ಕಾರ್ಮಿಕನ ಇಬ್ಬರು ಮಕ್ಕಳಿಗೆ ಮಾತ್ರ ಈ ನೆರವನ್ನು ನೀಡತಕ್ಕದ್ದು; ಮತ್ತು
(3) (1ನೇ ಉಪ-ನಿಯಮದಲ್ಲಿ ನಿರ್ದಿಷ್ಟಪಡಿಸಿದ ಮೊತ್ತವನ್ನು ಕ್ಷೇಮು ಮಾಡುವುದಕ್ಕಾಗಿ ಸಲ್ಲಿಸುವ ಅರ್ಜಿಯು ನಮೂನೆ- Vill ರಲ್ಲಿರತಕ್ಕದ್ದು,
(4) ಶೈಕ್ಷಣಿಕ ನೆರವು, ಪ್ರಸಕ್ತ ಪ್ರವೇಶ ಪಡೆದ ಮತ್ತು ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಶೈಕ್ಷಣಿಕ ಸಂಸ್ಥೆಗಳಲ್ಲಿ ನಿಯತ ಕೋರ್ಸ್ಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಮಾತ್ರ ಲಭ್ಯವಿರತಕ್ಕದ್ದು, ದೂರ ಶಿಕ್ಷಣ ಕೋರ್ಸ್ಗಳು, ಗೃಹ ಅಧ್ಯಯನ ಕೋರ್ಸ್ಗಳು, ಆನ್ಲೈನ್ ಕೋರ್ಸ್ಗಳು, ಮೊದಲಾದ ಕೋರ್ಸ್ಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳು ಈ ಪ್ರಯೋಜನವನ್ನು ಪಡೆದುಕೊಳ್ಳಲು ಅರ್ಹರಾಗಿರತಕ್ಕದ್ದಲ್ಲ.
(5716ನೇ ನಿಯಮದ ಅಡಿಯಲ್ಲಿ ನೀಡಿದ ಪ್ರಯೋಜನವನ್ನು ಈ ಫಲಾನುಭವಿಗಳಿಗೆ ಅನ್ವಯಿಸತಕ್ಕದ್ದಲ್ಲ. 20. ನೋಂದಾಯಿತ ಮಹಿಳಾ ಫಲಾನುಭವಿಗಳಿಗೆ ಮಾತೃತ್ವ ಪ್ರಯೋಜನ (1) ಕ್ಷೇಮುಗಳ ಪ್ರಾಧಿಕಾರವು ಅರ್ಜಿಯನ್ನು ಸ್ವೀಕರಿಸಿದ ಮೇಲೆ, ಮಗುವಿನ ಹೆರಿಗೆ ಆಗಿರುವ ರುಜುವಾತನ್ನು ಹಾಜರುಪಡಿಸಿದ ನಂತರ, ನೋಂದಾಯಿತ ಮಹಿಳಾ ಫಲಾನುಭವಿಗೆ ಮೊದಲ ಎರಡು ಹೆರಿಗೆಗಳಿಗೆ ಮಾತ್ರ ರೂ. 10,000-00 (ಹತ್ತು ಸಾವಿರ ರೂಪಾಯಿಗಳು ಮಾತ್ರ) ಮೊತ್ತವನ್ನು ಮಂಜೂರು ಮಾಡತಕ್ಕದ್ದು. (2) ಈ ಮುಂದಿನ ಷರತ್ತುಗಳನ್ನು ಪೂರೈಸಿದ್ದರೆ ಮಾತ್ರ, ಮೊತ್ತವನ್ನು ಮಂಜೂರು ಮಾಡತಕ್ಕದ್ದು, ಎಂದರೆ:
(ಎ) ಅರ್ಜಿ ಸಲ್ಲಿಸಿದ ಮಹಿಳೆಯು, ಮಂಡಳಿಯಲ್ಲಿ ಕಾರ್ಮಿಕಳಾಗಿ ನೋಂದಾಯಿಸಿದ ದಿನಾಂಕದಿಂದ ಮಗುವಿನ ಹೆರಿಗೆವರೆಗೆ ಕವಿಷ್ಠ ಒಂದು ವರ್ಷವಾದರೂ ಕಳೆದಿರತಕ್ಕದ್ದು;
(ಬಿ) ಒಬ್ಬ ನೋಂದಾಯಿತ ಮಹಿಳಾ ಕಾರ್ಮಿಕಳು, ಎರಡು ಬಾರಿ ಮಾತ್ರ ಈ ನೆರವನ್ನು ಪಡೆದುಕೊಳ್ಳಬಹುದು ಮತ್ತು ಆ ಎರಡನೇ ಕ್ಲೇಮಿನ ಅರ್ಜಿಯೊಂದಿಗೆ, ಈ ಕ್ಲೇಮು ಎರಡನೇ ಹೆರಿಗೆಗಾಗಿ ಎಂದು ತಿಳಿಸುವ ಒಂದು ಅಫಿಡವಿಟ್ನ್ನು (ಶಪಥ ಪತ್ರವನ್ನು) ಸಲ್ಲಿಸತಕ್ಕದ್ದು.
(ಸಿ) ನೋಂದಾಯಿತ ಮಹಿಳಾ ಕಾರ್ಮಿಕಳು, ಮಂಡಳಿಗೆ ಪಾವತಿಸಬೇಕಾದ ಯಾವುದೇ ಬಾಕಿಗಳನ್ನು ಉಳಿಸಿಕೊಂಡಿರತಕ್ಕದ್ದಲ್ಲ; ಮತ್ತು
(ಡಿ) ನೋಂದಾಯಿತ ಮಹಿಳಾ ಕಾರ್ಮಿಕಳು, ಈಗಾಗಲೇ ಇಬ್ಬರು ಜೀವಂತ ಮಕ್ಕಳನ್ನು ಹೊಂದಿದ್ದರೆ, ಆಕೆಗೆ ಈ ನೆರವನ್ನು ನೀಡತಕ್ಕದ್ದಲ್ಲ.
(3) (BE ಉಪ-ನಿಯಮದಲ್ಲಿ ವಿರ್ದಿಷ್ಟಪಡಿಸಿದ ಮೊತ್ತವನ್ನು ಕ್ಲೇಮು ಮಾಡುವುದಕ್ಕಾಗಿ ಸಲ್ಲಿಸುವ ಅರ್ಜಿಯು ನಮೂನೆ-1«ರಲ್ಲಿ ಇರತಕ್ಕದ್ದು.