ಮಂಡಳಿಯು ಪರ್ಯಾಲೋಜಚನೆಗೆ ತೆಗೆದುಕೊಳ್ಳಬೇಕಾದ ಪ್ರತಿಯೊಂದು ವಿಷಯವನ್ನು, ಮಂಡಳಿಯ ಸಭೆಯಲ್ಲಿ ಅಥವಾ ಅಧ್ಯಕ್ಷರು ಹಾಗೆ ನಿರ್ದೇಶಿಸಿದರೆ, ಸದಸ್ಯರ ನಡುವೆ ನಿರ್ಣಯವನ್ನು ಪರಿಚಲಿಸುವ ಮೂಲಕ ಪರ್ಯಾಲೋಚಿಸಿ. ಸರಳ. ಬಹುಮತದ ಮೂಲಕ ಅಂಗೀಕರಿಸತಕ್ಕದ್ದು. ಯಾವುದೇ ಒಂದು ವಿಷಯದ ಬಗ್ಗೆ ಒಮ್ಮತಾಭಿಪ್ರಾಯ ಮೂಡದೆ ಇದ್ದರೆ ಮತ್ತು ಭಿನ್ನಾಭಿಪ್ರಾಯ ಹೊಂದಿರುವ ಮಂ೦ಡಳಿಯ ಸದಸ್ಯರು ಸಮನಾಗಿದ್ದ ಸಂದರ್ಭದಲ್ಲಿ, ಅಧ್ಯಕ್ಷರು ನಿರ್ಣಾಯಕ ಮತವನ್ನು ಚಲಾಯಿಸುವ ಅಧಿಕಾರ ಹೊಂದಿರತಕ್ಕದ್ದು.
ವಿವರಣೆ.- ಮೇಲೆನ ಉಪಬಂಧದ ಉದ್ದೇಶಕ್ಕಾಗಿ "ಅಧ್ಯಕ್ಷ" ಎಂಬ ಪದಾವಳಿಯು 10ನೇ ನಿಯಮದ (2) ನೇ ಉಪ-ನಿಯಮದ ಮೇರೆಗೆ ಸಭೆಯ ಅಧ್ಯಕ್ಷತೆಯನ್ನು ವಹಿಸಲು ನಾಮನಿರ್ದೇಶನಗೊಂಡ ಅಥವಾ ಆಯ್ಕೆಯಾದ ಒಬ್ಬ ಸದಸ್ಯನನ್ನು ಒಳಗೊಂಡಿರತಕ್ಕದ್ದು.