(1) BOOMS ಕಾರ್ಮಿಕನು ಮರಣ ಹೊಂದಿದರೆ, ಕ್ಲೇಮುಗಳ ಪ್ರಾಧಿಕಾರವು, ಮೃತ ನೋಂದಾಯಿತ ಕಾರ್ಮಿಕನ ಶವ ಸಂಸ್ಕಾರದ ವೆಚ್ಚಗಳು ಸೇರಿದಂತೆ ಮೃತ ನೋಂದಾಯಿತ ಕಾರ್ಮಿಕನ ನಾಮನಿರ್ದೇಶಿತರಿಗೆ 25,000/- (ಇಪ್ಪತ್ತೈದು ಸಾವಿರ ರೂಪಾಯಿಗಳು ಮಾತ್ರ) ಮೊತ್ತವನ್ನು ಸಂದಾಯ ಮಾಡತಕ್ಕದ್ದು.
ಉಪನಿಯಮ (1 ರಲ್ಲಿ ನಿರ್ದಿಷ್ಟಪಡಿಸಿದ ಮೊತ್ತವನ್ನು ಕ್ಲೇಮು ಮಾಡುದಕ್ಕಾಗಿ ಸಲ್ಲಿಸುವ ಅರ್ಜಿಯು, (2) ನಮೂನೆ Vi ರಲ್ಲಿರತಕ್ಕದ್ದು ಮತ್ತು ಇದರೊಂದಿಗೆ ಮೃತ ನೋಂದಾಯಿತ ಕಾರ್ಮಿಕನ ಮರಣ ಪ್ರಮಾಣಪತ್ರ, ಕಂದಾಯ ಇಲಾಖೆಯು ನೀಡಿದ Besos ಸದಸ್ಯರ ಪ್ರಮಾಣಪತ್ರ, ಆಧಾರ್ಗೆ Hos ಮಾಡಲಾದ ಬ್ಯಾಂಕ್ ಪಾಸ್ಬುಕ್ ಮತ್ತು ಮೃತ ಕಾರ್ಮಿಕನಿಗೆ ನೀಡದ ಮೂಲ 'ಗುರುತಿನ ಚೀಟಿ ಅಥವಾ ಮೂಲ ಗುರುತಿನ ಚೀಟಿ ಲಭ್ಯವಿಲ್ಲದಿದ್ದ ಪಕ್ಷದಲ್ಲಿ ಮಂಡಳಿಯು ಸಿಂಧುತ್ವ ಮತ್ತು ಸತ್ಯಾಂಶ ಪರಿಶೀಲನೆ ಮಾಡಲ ಫಲಾನುಭವಿಯ ನೋಂದಣಿ ಸಂಖ್ಯೆಯು ಇರತಕ್ಕದ್ದು.
ನೋಂದಾಯಿತ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ನೆರವು.- (1) ಕ್ಲೇಮುಗಳ ಪ್ರಾಧಿಕಾರವು, 18. ನೋಂದಾಯಿತ ಕಾರ್ಮಿಕವಿಂಂದ ಅರ್ಜಿಯನ್ನು ಸ್ವೀಕರಿಸಿದ ನಂತರ, ಅವರ ಇಬ್ಬರು ಮಕ್ಕಳನ್ನು ಮೀರದ ಅವಲಂಬಿತ ಮಕ್ಕಳಿಗೆ ಕಳಗಿನಂತೆ ವಾರ್ಷಿಕ ಶೈಕ್ಷಣಿಕ ನೆರವಿಗೆ ಪ್ರತಿವರ್ಷ ಮಂಜೂರಾತಿ ನೀಡುವುದು,-
ಕೋಷ್ಠಕ
| ಕ್ರಮ ಸಂಖ್ಯೆ | ಶೈಕ್ಷಣಿಕ ಕೋರ್ಸ್ಗಳು | ವಾರ್ಷಿಕ ಶೈಕ್ಷಣಿಕ ನೆರವು (ರೂಪಾಯಿಗಳಲ್ಲಿ) |
| 01. | 12ನೇ ತರಗತಿ ಅಥವಾ ತತ್ಸಮಾನ | 3000/- |
| 02. | ಸ್ನಾತಕ ಪದವಿ ಅಥವಾ ತತ್ಸಮಾನ | 5500/- |
| 03. | ಎಲ್ಎಲ್ಬಿ/ಅರೆ ವೈದ್ಯಕೀಯ / ಬಿ. ಫಾರ್ಮ / ನರ್ಸಿಂಗ್ ಮತ್ತು ರಾಜ್ಯ ಸರ್ಕಾರವು ವಿರ್ದಿಷ್ಟಪಡಿಸಿದಂಥ ಇತರೆ ವೃತಿಪರ ಕೋರ್ಸ್ಗಳು | 8000/- |
| 04. | ಎಂಬಿಬಿಎಸ್/ಬಿಇ/ಬಿ.ಟೆಕ್ ಮತ್ತು ಸ್ನಾತಕೋತ್ತರ ಕೋರ್ಸ್ಗಳು | 11 - 000/ |
(3) ಶೈಕ್ಷಣಿಕ ನೆರವು ಪ್ರಸ್ತುತ ವರ್ಷದಲ್ಲಿ ಪ್ರವೇಶ ಪಡೆದಿರುವ ಮತ್ತು ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಶೈಕ್ಷಣಿಕ ಸಂಸ್ಥೆಗಳಲ್ಲಿ ನಿಯತ ಕೋರ್ಸ್ಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ. ಮಾತ್ರ ಲಭ್ಯವಾಗತಕ್ಕದ್ದು. ದೂರಶಿಕ್ಷಣ ಕೋರ್ಸ್ಗಳು, ಮನೆಯಲ್ಲಿಯೇ ಕುಳಿತು ಅಧ್ಯಯನ ಮಾಡುವ ಕೋರ್ಸ್ಗಳು, ಆನ್ಲೈನ್ ಕೋರ್ಸ್ಗಳು ಮೊದಲಾದ ಕೋರ್ಸ್ಗಳಿಗೆ. ಸೇರಿದ ವಿದ್ಯಾರ್ಥಿಗಳು. ಈ ಪ್ರಯೋಜನವನ್ನು ಪಡೆದುಕೊಳ್ಳಲು ಅರ್ಹರಾಗಿರತಕ್ಕದ್ದಲ್ಲ.