(1) ಪದನಿಮಿತ್ತ ಸದಸ್ಯನಾಗಿರದ ಮಂಡಳಿಯ ಸದಸ್ಯನು, ಅಧ್ಯಕ್ಷರನ್ನು ಸಂಬೋಧಿಸಿದ ಪತ್ರದ ಮೂಲಕ ಲಿಖಿತದಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದು.
(2) ಅಂಥ ಸದಸ್ಯನ ಸ್ಮಾನವು ಆತನ ರಾಜೀನಾಮೆಯನ್ನು ಯಾವು ದಿನಾಂಕದಂದು ಅಂಗೀಕರಿಸಿದೆಯೋ ಆ ದಿನಾಂದಿಂದ ಅಥವಾ ರಾಜೀನಾಮೆಯ ಮಾಹಿತಿಯನ್ನು ಸ್ವೀಕರಿಸಿದ ದಿನಾಂಕದಿಂದ ಮೂವತ್ತು ದಿನಗಳ ಅವಧಿ ಮುಕ್ತಾಯವಾದ ಮೇಲೆ, ಇವುಗಳಲ್ಲಿ ಯಾವುದು ಮೊದಲೋ ಆ ದಿನಾಂಕದಿಂದ ತೆರವಾಗತಕ್ಕದ್ದು.
(3) ಸದಸ್ಯನ ರಾಜೀನಾಮೆಯನ್ನು ಅಂಗೀಕರಿಸುವ ಅಧಿಕಾರವು ಅಧ್ಯಕ್ಷರಲ್ಲಿ ನಿಹಿತವಾಗಿರತಕ್ಕದ್ದು, ಅವರು ರಾಜೀನಾಮೆಯನ್ನು ಅಂಗೀಕರಿಸಿದ ನಂತರ, ಮುಂದಿನ ಸಭೆಯಲ್ಲಿ ಮಂಡಳಿಗೆ ವರದಿ ಮಾಡತಕ್ಕದ್ದು.