(1) ನೋಂದಣಿ ಅಧಿಕಾರಿಯು ಹೊರಡಿಸಿದ ಆದೇಶದಿಂದ ಬಾಧಿತನಾದ ಯಾರೇ ನೋಂದಾಯಿತ ಕಾರ್ಮಿಕನು, ಆದೇಶವನ್ನು ಹೊರಡಿಸಿದ ದಿನಾಂಕದಿಂದ ಮೂವತ್ತು ದಿನಗಳೊಳಗಾಗಿ HOB ಆದೇಶದ ವಿರುದ್ಧ ರಾಜ್ಯ ಸರ್ಕಾರವು ಅಧಿಸೂಚಿಸಲಾದಂಥ ಅಪೀಲು ಪ್ರಾಧಿಕಾರಕ್ಕೆ ಮೇಲ್ಮನವಿಯನ್ನು ಸಲ್ಲಿಸಬಹುದು.
(2) ಕ್ಲೇಮುಗಳ ಪ್ರಾಧಿಕಾರವು ಮಾಡಿದ ಕ್ಹೇಮುಗಳನ್ನು ತಿರಸ್ಕರಿಸಿದುದರಿಂದ ಅಥವಾ ಕ್ಡೇಮುಗಳಿಗೆ ಸಂಬಂಧಿಸಿದ ಯಾವುದೇ ದೂರುಗಳಿಂದ ಬಾಧಿತನಾದ ನೋಂದಾಯಿತ ಕಾರ್ಮಿಕನು, ಅಂಥ ಕ್ಲೇಮುಗಳು ತಿರಸ್ಕರಣೆಯಾದ ದಿನಾಂಕದಿಂದ ಅರವತ್ತು ದಿನಗಳೊಳಗಾಗಿ ರಾಜ್ಯ ಸರ್ಕಾರವು ಅಧಿಸೂಚಿಸಿದಂತೆ ಅಪೀಲು ಪ್ರಾಧಿಕಾರಕ್ಕೆ ಅಂಥ ಆದೇಶದ ವಿರುದ್ದ ಮೇಲ್ಮನವಿಯನ್ನು ಸಲ್ಲಿಸಬಹುದು.
(3) ಅಪೀಲು ಪ್ರಾಧಿಕಾರವು, ವಿಚಾರಣೆಗಳನ್ನು ನಡೆಸಿದ ನಂತರ, ದೂರು ವಿವಾರಣೆಯ ಆದೇಶವನ್ನು ಹೊರಡಿಸುವ ಮೂಲಕ ಸದರಿ ಅರ್ಜಿಯನ್ನು ವಿಲೆಗೊಳಿಸಬಹುದು ಮತ್ತು ನೋಂ೦ದಣಿ/ಕ್ಲೇಮುಗಳ ಪ್ರಾಧಿಕಾರಕ್ಕೆ ನಿರ್ದೇಶನವನ್ನು ಸಹ ನೀಡಬಹುದು;
ಪರಂತು, ಅಪೀಲುದಾರನು ಸಕಾಲಕ್ಕೆ ಮೇಲ್ಮನವಿಯನ್ನು ಸಲ್ಲಿಸುವುದಕ್ಕೆ ಸಾಕಷ್ಟು ಕಾರಣಗಳು ಅಡ್ಡಿಯಾಗಿರುವುದು ಅಪೀಲು ಪ್ರಾಧಿಕಾರಕ್ಕೆ ಮನದಟ್ಟಾದರೆ, ಸದರಿ ದಿನಗಳ ಅವಧಿ ಮುಕ್ತಾಯವಾದ ನಂತರ ಮೇಲ್ಮನವಿಗೆ ಅವಕಾಶವನ್ನು ನೀಡಬಹುದು.
೧೯೭೧೪