(1) ನಿಯಮ 14 ರ ಉಪನಿಯಮ (2ರ ಅಡಿಯಲ್ಲಿ ಅಪಘಾತ ಸೌಲಭ್ಯಕ್ಕಾಗಿ ಅರ್ಹರಾಗಿರುವ ಪ್ರತಿಯೊಬ್ಬ ನೊಂದಾಯಿತ ಕಾರ್ಮಿಕ ಅಥವಾ ಆತನ ಮೊದಲ ಜೀವಂತ ನಾಮನಿರ್ದೇಶಿತ ವ್ಯಕ್ತಿಯು ಮರಣದ ಸಂಬಂಧದಲ್ಲಿ ನಮೂನೆ V ರಲ್ಲಿ ಮತ್ತು ವೈದ್ಯಕೀಯ ಮತ್ತು ಅಂಗವೈಕಲ್ಯತೆಯ ಸಂಬಂಧದಲ್ಲಿ ನಮೂನೆ Vv (1) ರಲ್ಲಿ 13ನೇ ಪ್ರಕರಣದ ಮೇರೆಗೆ ಅಧಿಸೂಚಿಸಿದ ಕ್ಲೇಮುಗಳ ಪ್ರಾಧಿಕಾರಕ್ಕೆ ಪ್ರಥಮ ಮಾಹಿತಿ ವರದಿ, ಮರಣೋತ್ತರ ಶವ ಪರೀಕ್ಷೆ ವರದಿ, ಮೃತರ ಜೀವಂತ ಸದಸ್ಯರ ಪ್ರಮಾಣಪತ್ರ ಮತ್ತು ಮರಣ ಪ್ರಮಾಣಪತ್ರ (ಮರಣದ ಸಂದರ್ಭದಲ್ಲಿ), ಮೂಲ ವೈದ್ಯಕೀಯ ಬಿಲ್ಲುಗಳು ಮತ್ತು ವೈದ್ಯಕೀಯ ಮರುಪಾವತಿಗಾಗಿ ಆಸ್ಪತ್ರೆಯಿಂದ ಬಿಡುಗಡೆಯಾದ ಬಗ್ಗೆ ಸಂಕ್ಲಿಪ್ತ್ಮ ಘೋಷ್ಟಾರೆ ಮತ್ತು ಅಪಘಾತ ಉಂಟಾದ ಕಾರಣದಿಂದಾಗಿ ಅರ್ಜಿದಾರನಿಗೆ ಆದ ಒಟ್ಟಾರೆ ಶಾಶ್ವತ ಅಂಗವೈಕಲ್ಯ (ಅಶಕ್ತತೆ) ಅಥವಾ ಭಾಗಶಃ ಶಾಶ್ವತ ಅಂಗವೈಕಲ್ಯದ ಪ್ರಮಾಣವನ್ನು ಸ್ಪಷ್ಟವಾಗಿ ತೋರಿಸುವ ತಾಲ್ಲೂಕು/ಜಿಲ್ಲಾ ವೈದ್ಯಕೀಯ ಮಂಡಳಿಯು ನೀಡಿದ ವೈದ್ಯಕೀಯ ಪ್ರಮಾಣಪತ್ರದ ಸಹಿತ ಅರ್ಜಿಯನ್ನು ಸಲ್ಲಿಸತಕ್ಕದ್ದು.
(2) ಕ್ಲೇಮುಗಳ ಪ್ರಾಧಿಕಾರವು, ಉಪಬಂಧಕ್ಕೆ ಅನುಸಾರವಾಗಿ ಅಪಘಾತದ ಸೌಲಭ್ಯ ಪಡೆಯುವುದಕ್ಕಾಗಿ ಸಲ್ಲಿಸಿದ. ಪ್ರತಿಯೊಂದು.. ಅರ್ಜಿಯನ್ನು ಪರಿಶೀಲಿಸತಕ್ಕದ್ದು. ಮತ್ತು ಅದು ಕ್ಲೇಮನ್ನು ಅಂಗೀಕರಿಸಬಹುದು ಅಥವಾ ತಿರಸ್ಕರಿಸಬಹುದು:
ಭಾ ಗಳಎ ಕರ್ನಾಟಕ ರಾಜ್ಯಪತ್ರ, ಮಂಗಳವಾರ, ೦೩, ಡಿಸೆಂಬರ್, ೨೦೨೪ ೧೯೭೧೧ BOOS, ಈ ಬಗ್ಗೆ ಕ್ಲೇಮು ಪ್ರಾಧಿಕಾರವು, ಅಪಘಾತದ ಸೌಲಭ್ಯಕ್ಕಾಗಿ ಕ್ಲೇಮನ್ನು ತಿರಸ್ಕರಿಸುವ ಮೊದಲು ಅರ್ಜಿದಾರರಿಗೆ ತಮ್ಮ ಅಹವಾಲನ್ನು ಸಲ್ಲಿಸಲು ಯುಕ್ತ ಅವಕಾಶವನ್ನು ನೀಡತಕ್ಕದ್ದು.
ಕ್ಲೇಮುಗಳ ಪ್ರಾಧಿಕಾರವು, ಮೊದಲ ಜೀವಂತ ನಾಮನಿರ್ದೇಶಿತನಿಗೆ ಮರಣದ ಸಂದರ್ಭದಲ್ಲಿ, ರೂ.5.00 (3) ಲಕ್ಷ (ಐದು OF ರೂಪಾಯಿಗಳು ಮಾತ್ರ) ಒಟ್ಟಾರೆ ಶಾಶ್ವತ ಅಂಗವೈಕಲ್ಯಕ್ಕೆ ರೂ.2.00 OF (ಎರಡು ಲಕ್ಷ ರೂಪಾಯಿಗಳು ಮಾತ್ರ), ಭಾಗಶಃ ಶಾಶ್ವತ ಅಂಗವೈಕಲ್ಯತೆಯ ಸಂದರ್ಭದಲ್ಲಿ ರೂ.1 ಲಕ್ಷ (ಒಂದು ಲಕ್ಷ ರೂಪಾಯಿಗಳು ಮಾತ್ರ) ಮೊತ್ತವನ್ನು ಮತ್ತು ಅಂಗವೈಕಲ್ಯದ ಪ್ರಮಾಣಕ್ಕನುಸಾರವಾಗಿ ಅಥವಾ ಆಸ್ಪತ್ರೆಯ ವೆಚ್ಚದ ಮರುಪಾವತಿಯನ್ನು ನೇರ ಪ್ರಯೋಜನ ವರ್ಗಾವಣೆಯ ಆ(ಡಿಬಿಟಿ) ಮುಖಾಂತರ ಸೌಲಭ್ಯವನ್ನು ಮಂಜೂರು ಮಾಡಬಹುದು.