ಮಂಡಳಿಯು ಅಧ್ಯಕ್ಷರು ನಿರ್ಧರಿಸಬಹುದಾದಂಥ ಸ್ಥಳ ಮತ್ತು OOP ಸಮಯಗಳಲ್ಲಿ ಸಭೆ ಸೇರತಕ್ಕದ್ದು, ಆದರೆ ಕನಿಷ್ಠ ಪಕ್ಷ ಮೂರು ತಿಂಗಳುಗಳಿಗೊಮ್ಮೆ ಸಭೆ ಸೇರತಕ್ಕದ್ದು.
(2) ಅಧ್ಯಕ್ಷನು ತಾವು ಹಾಜರಿರುವ ಮಂಡಳಿಯ ಪ್ರತಿಯೊಂದು ಸಭೆಯ ಅಧ್ಯಕ್ಷತೆಯನ್ನು ವಹಿಸತಕ್ಕದ್ದು ಮತ್ತು ಅವನ ಅನುಪಸ್ಥಿತಿಯಲ್ಲಿ ಅವನ ಸ್ಥಾನದಲ್ಲಿ ಅಂಥ ಸಭೆಯ ಅಧ್ಯಕ್ಷತೆಯನ್ನು ವಹಿಸಲು ಮಂಡಳಿಯ ಸದಸ್ಯರೊಬ್ಬರನ್ನು ನಾಮನಿರ್ದೇಶನ ಮಾಡಬಹುದು ಮತ್ತು ಅಧ್ಯಕ್ಷರು ಅಂಥ ನಾಮ ನಿರ್ದೇಶನ ಮಾಡಿರದ ಸಂದರ್ಭದಲ್ಲಿ, ಅಂಥ ಸಭೆಯಲ್ಲಿ ಹಾಜರಿರುವ ಮಂಡಳಿಯ ಸದಸ್ಯರು ಸಭೆಯ ಅಧ್ಯಕ್ಷತೆಯನ್ನು ವಹಿಸಲು ತಮ್ಮಲ್ಲಿಯೇ ಒಬ್ಬ ಸದಸ್ಯನನ್ನು ಆಯ್ಕೆ ಮಾಡಿಕೊಳ್ಳಬಹುದು.