(1) ಮಂಡಳಿಯು ಅದರ ಮತ್ತು ಮಂಡಳಿಯು ನೇಮಿಸಿದ ಲೆಕ್ಕಪತ್ರಗಳನ್ನು ಸಿದ್ಧಪಡಿಸಿ ನಿರ್ವಹಿಸತಕ್ಕದ್ದು ಲೆಕ್ಕಪರಿಶೋಧಕರಿಂದ ವರ್ಷಕ್ಕೊಮ್ಮೆ ಲೆಕ್ಕಪರಿಶೋಧನೆ ಮಾಡಿಸತಕ್ಕದ್ದು.
(2) ಲೆಕ್ಕ ಪರಿಶೋಧಕವಿಂದ ವರದಿಯನ್ನು ಸ್ವೀಕರಿಸಿದ ತರುವಾಯ ಆದಷ್ಟು ಬೇಗನೆ ಮಂಡಳಿಯು ಲೆಕ್ಕಪರಿಶೋಧಕನ ವರದಿಯ ಪ್ರತಿಯ ಜೊತೆಗೆ ವಾರ್ಷಿಕ ಲೆಕ್ಕ ಪತ್ರಗಳ ವಿವರಪಟ್ಟಿಯ ಒಂದು ಪ್ರತಿಯನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡತಕ್ಕದ್ದು,
(3) ರಾಜ್ಯ ಸರ್ಕಾರವು, ಲೆಕ್ಕಪರಿಶೋಧಕನ ವರದಿಯನ್ನು ಅವಗಾಹಿಸಿದ ನಂತರ, ಮಂಡಳಿಗೆ ಸೂಕ್ತವೆಂದು ಭಾವಿಸಬಹುದಾದಂಥ ವಿರ್ದೇಶನಗಳನ್ನು ನೀಡಬಹುದು ಮತ್ತು ಮಂಡಳಿಯು ಅಂಥ ನಿರ್ದೇಶನಗಳನ್ನು ಪಾಲಿಸತಕ್ಕದ್ದು.