(1) ಮಂಡಳಿಯ ಅಧಿಕೃತ ಸದಸ್ಯರ ಪ್ರಯಾಣ ಭತ್ಯೆಯನ್ನು ಅಧಿಕೃತ ಕರ್ತವ್ಯಗಳ ಮೇಲೆ ಆತನು ಮಾಡಿದ ಪ್ರಯಾಣಕ್ಕಾಗಿ ಆತನಿಗೆ ಅನ್ವ್ಹಯವಾಗಬಹುದಾದ ನಿಯಮಗಳ ಮೂಲಕ ನಿರ್ವಹಿಸತಕ್ಕದ್ದು ಮತ್ತು ಆತನ ಸಂಬಳವನ್ನು ಸಂದಾಯ ಮಾಡುವ ಪ್ರಾಧಿಕಾರವು ಪ್ರಯಾಣ ಭತ್ಯೆಯನ್ನು ಪಾವತಿ ಮಾಡತಕ್ಕದ್ದು.
(2) ಮಂಡಳಿಯ ಅಧಿಕಾರೇತರ ಸದಸ್ಯರು, ಕರ್ನಾಟಕ ಸಿವಿಲ್ ಸೇವಾ ನಿಯಮಗಳು, ಅನುಬಂಧ-ಎ ನ ಪ್ರಯಾಣ ಭತ್ಯೆ ಸಂದಾಯ (ಸಮಿತಿಗಳು, ಆಯೋಗಗಳು ಅಥವಾ ಇತರೆ ನಿಕಾಯಗಳ ಅಧಿಕಾರೇತರ ಸದಸ್ಯರಿಗೆ) ನಿಯಮಗಳು, 2001ರ ಉಪಬಂಧಗಳ ಪ್ರಕಾರ ಪ್ರಯಾಣ ಭತ್ಯೆ ಮತ್ತು ದಿನಭತ್ಯೆ ಸಂದಾಯಕ್ಕೆ ಹಕ್ಕುಳ್ಳವರಾಗಿರತಕ್ಕದ್ದು.