(1) 18 ರಿಂದ 60. ವರ್ಷಗಳ ವಯೋಮಾನಕ್ಕೆ ಸೇರಿದ ಮತ್ತು ಅಧಿನಿಯಮದ 2ನೇ ಪ್ರಕರಣದ (ಎಫ್) ಖಂಡದಲ್ಲಿ ಸೂಚಿಸಲಾದ ಪ್ರವರ್ಗಗಳಿಗೆ ಸೇರಿದ ಕಾರ್ಮಿಕರು, ಅಧಿನಿಯಮದ 10ನೇ ಪ್ರಕರಣದ (ಎ) ಖಂಡದ ಮೇರೆಗೆ ಅಧಿಸೂಚಿಸಲಾದ ನೋಂದಣಿ ಅಧಿಕಾರಿಗಳಿಗೆ ತಮ್ಮ ವಿಳಾಸದ ಪುರಾವೆ, ಆಧಾರ್ ಲಿಂಕ್ ಮಾಡಲಾದ ಬ್ಯಾಂಕ್ ಪಾಸ್ಬುಕ್, ಚಾಲಕರುಗಳಿಗೆ ಚಾಲನಾ ಪರವಾನಗಿ, ವಿರ್ವಾಹಕರುಗಳಿಗೆ ನಿರ್ವಾಹಕ ಪರವಾನಗಿ, ಉದ್ಯೋಗಿ ಗುರುತಿನ ಚೀಟಿ (ಲಭ್ಯವಿದ್ದರೆ) ಅಥವಾ ಉದ್ಯೋಗದಾತನು ನೀಡಿದ ನಮೂನೆ ॥ ರಲ್ಲಿನ ಉದ್ಯೋಗ ಪ್ರಮಾಣಪತ್ರವನ್ನು ನಮೂನೆ । ರಲ್ಲಿ ಸಲ್ಲಿಸತಕ್ಕದ್ದು ಅಥವಾ ಅವನು ಸ್ವಂತ ಕೆಲಸ /ವ್ಯಾಪಾರ ವ್ಯವಹಾರವನ್ನು ನಡೆಸುತ್ತಿದ್ದರೆ ಹುಟ್ಟಿದ ದಿನಾಂಕದ ಪುರಾವೆಯೊಂ೦ದಿಗೆ ಇ- ಶ್ರಮ್ (ಯು.ಎ.ಎನ್) ಪೋರ್ಟಲ್ನ ಅಡಿಯಲ್ಲಿ ವ್ಯಾಪಾರವನ್ನು ನಡೆಸಲು ಸ್ಥಳೀಯ ಪ್ರಾಧಿಕಾರವು ನೀಡಿದ ಯಾವುದೇ ನೋಂದಣಿ ಪ್ರಮಾಣ ಪತ್ರವನ್ನು ಸಲ್ಲಿಸತಕ್ಕದ್ದು.
(2) ಉಪ-ನಿಯಮ («1)ರ ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ಕಾರ್ಮಿಕನು 2ನೇ ಪ್ರಕರಣದ (1)ನೇ ಉಪ-ಪ್ರಕರಣದ (ಎಫ್) ಖಂಡದ ಉಪಬಂ೦ಧಗಳನ್ನು ಪಾಲಿಸತಕ್ಕದ್ದು.
(3) ನೋಂದಣಿ ಪ್ರಾಧಿಕಾರವು, ಅರ್ಜಿದಾರನು 2ನೇ ಪ್ರಕರಣದ (1ನೇ ಉಪ-ಪ್ರಕರಣದ (ಎಫ್) ಖಂಡದ ಉಪಬಂ೦ಧಗಳನ್ನು ಪಾಲಿಸಿರುವನೆಂಬುದನ್ನು ಮನದಟ್ಟು ಮಾಡಿಕೊಳ್ಳತಕ್ಕದ್ದು ಮತ್ತು ಆತನು ಕಾರ್ಮಿಕನಿಂದ ರೂ.50/-ಗಳ ನೋಂದಣಿ ಶುಲ್ಕವನ್ನು ಸಂಗಹಿಸತಕ್ಕದ್ದು ಮತ್ತು ಮಂಡಳಿಯ ಯೋಜನೆಗಳ ಫಲಾನುಭವಿಯಾಗಿ ಅಂಥ ಕಾರ್ಮಿಕನನ್ನು ನೋಂದಾಯಿಸತಕ್ಕದ್ದು ಮತ್ತು ಆತನಿಗೆ ಗುರುತಿನ ಚೀಟಿ ಮತ್ತು ಅದರ ಶುಲ್ಕದ ರಶೀದಿಯನ್ನು ನೀಡತಕ್ಕದ್ದು.
(4) 50/- ರೂ.ಗಳ ನವೀಕರಣ ಶುಲ್ಕದೊಂದಿಗೆ ಪ್ರತಿ ಮೂರು ವರ್ಷಗಳಿಗೊಮ್ಮೆ ನೋಂದಣಿಯನ್ನು ನವೀಕರಿಸತಕ್ಕದ್ದು. ಕಾರ್ಮಿಕನು, ವಿವರಗಳ ಬದಲಾವಣೆಗೆ ಸಂಬಂಧಿಸಿದಂತೆ ಪರಿಷ್ಕರಿಸಿದ ದಸ್ತಾವೇಜುಗಳು ಏನಾದರೂ ಇದ್ದರೆ, ಅವುಗಳನ್ನು ನಮೂನೆ ॥ ರಲ್ಲಿ ಸಲ್ಲಿಸತಕ್ಕದ್ದು.
(5) ನೋಂದಣಿಯನ್ನು GOP ಪ್ರಾಧಿಕಾರವು ಸುಳ್ಳು ವಿವರ ಪತ್ರದ/ಫೋಷಣೆಯ ಮೂಲಕ ಅಥವಾ ಸಂಗತಿಯನ್ನು ಮುಚ್ಚಿಡುವ ಮೂಲಕ ನೋಂದಣಿಯನ್ನು ಪಡೆಯಲಾಗದೆ ಎಂದು ನೋಂದಣಿ ಪ್ರಾಧಿಕಾರಕ್ಕೆ ಮನದಟ್ಟಾದರೆ, ಕಾರ್ಮಿಕನ ನೋಂದಣಿಯನ್ನು ರದ್ದುಗೊಳಿಸುವ ಮೊದಲು ಅಂಥ ಪ್ರಾಧಿಕಾರವು, ಈ ವಿಷಯದಲ್ಲಿ ತನ್ನ ಪ್ರತಿವಾದವನ್ನು ಮಂಡಿಸಲು ಬಾಧಿತ ಕಾರ್ಮಿಕನಿಗೆ ತನ್ನ ಅಹವಾಲನ್ನು ಹೇಳಿಕೊಳ್ಳಲು ಅವಕಾಶವನ್ನು ನೀಡಿದ ತರುವಾಯ ನೋಂದಣಿ ಪ್ರಾಧಿಕಾರವು ರದ್ದುಗೊಳಿಸತಕ್ಕದ್ದು.
(6 ನೋಂದಣಿ ಪ್ರಾಧಿಕಾರವು, ಫಲಾನುಭವಿಯ ಭಾವಚಿತ್ರವಿರುವ ಗುರುತಿನ ಚೀಟಿಯನ್ನು ಪ್ರತಿಯೊಬ್ಬ ಫಲಾನುಭವಿಗೆ ನಮೂನೆ lV ರಲ್ಲಿ ನೀಡತಕ್ಕದ್ದು.