(1) ಸಭೆಯ ಕವಿಷ್ಠಪಕ್ಷ ಆರು ಜನ ಸದಸ್ಯರು ಹಾಜರಿದ್ದ ಹೊರತು ಮಂಡಳಿಯ ಯಾವುದೇ ಸಭೆಯಲ್ಲಿ ಕಾರ್ಯಕಲಾಪಗಳನ್ನು ನಡೆಸತಕ್ಕದ್ದಲ್ಲ; ಇದು 3 ನೇ ಪ್ರಕರಣದ (2ನೇ ಉಪಪ್ರಕರಣದ (ಡಿ) ಖಂಡದ (i) ಮತ್ತು (ii) ನೇ ಉಪಖಂ೦ಡಗಳಿಂದ ಕವಿಷ್ಠ ಪಕ್ಷ ತಲಾ ಒಬ್ಬ ಸದಸ್ಯನನ್ನು ಒಳಗೊಂಡಿರತಕ್ಕದ್ದು. ಪರಂತು, ಸಭೆಯಲ್ಲಿ ಆರು ಜನಕ್ಕಿಂತ ಕಡಿಮೆ ಸದಸ್ಯರು ಹಾಜರಿದ್ದರೆ, ಅಧ್ಯಕ್ಷರು ಹಾಜರಿರುವ ಸದಸ್ಯರಿಗೆ ತಿಳಿಸಿ ಸಭೆಯನ್ನು ಮತ್ತೊಂದು ದಿನಾಂಕಕ್ಕೆ ಮುಂದೂಡಬಹುದು ಮತ್ತು ಮುಂದೂಡಲ್ಬಟ್ಟಿ ಸಭೆಯಲ್ಲಿ ಕೋರಂ ಇರಲಿ ಅಥವಾ ಇಲ್ಲದಿರಲಿ, ಕಾರ್ಯಕಲಾಪಗಳನ್ನು ಇತ್ಯರ್ಥಗೊಳಿಸಲು ಉದ್ದೆಶಿಸಿರುವುದಾಗಿ ಇತರ ಸದಸ್ಯರಿಗೆ ಸಭಾಸೂಚನೆಯ ಮೂಲಕ ಮಾಹಿತಿ ನೀಡಿ ಆನಂತರ ಆತನು ಹಾಜರಾಗುವ ಸದಸ್ಯರ ಸಂಖ್ಯೆಯನ್ನು ಗಣನೆಗೆ ತೆಗೆದುಕೊಳ್ಳದೆ ಮುಂದೂಡಲೃ್ಬಟ್ಟಿ ಸಭೆಯಲ್ಲಿ ಕಾರ್ಯಕಲಾಪಗಳನ್ನು ನಡೆಸಬಹುದು.
(2) ರಾಜ್ಯ ಸರ್ಕಾರವು ಪದನಿಮಿತ್ತ ಸದಸ್ಯರುಗಳನ್ನು ಹೊರತುಪಡಿಸಿ, ಇತರ ಯಾರೇ ಸದಸ್ಯನನ್ನು. ಒಂದು ವೇಳೆ ಆತನು,-
(ಎ) ಅಧ್ಯಕ್ಷರಿಗೆ ಲಿಖಿತ ಮಾಹಿತಿ ಮತ್ತು ಸಮ್ಮತಿಯಿಲ್ಲದೆ ಮಂಡಳಿಯ ಸತತ ಮೂರು ಸಭೆಗಳಿಗೆ ತಾನೇ ಗೈರು ಹಾಜರಾಗಿದ್ದರೆ; ಅಥವಾ
(ಬಿ) ರಾಜ್ಯ ಸರ್ಕಾರದ ಅಭಿಪ್ರಾಯದಲ್ಲಿ ಸದಸ್ಯನು ಮಂಡಳಿಯಲ್ಲಿ ತಾನು ಪುತಿವಿಧಿಸುವುದಾಗಿ ತಾತ್ಪರ್ಯವಾಗುವ ಹಿತಾಸಕ್ತಿಯನ್ನು ಪ್ರತಿನಿಧಿಸುವುದು ನಿಂತುಹೋಗಿದ್ದರೆ, -ಮಂ೦ಂಡಳಿಯ ಸಭೆಯಲ್ಲಿ ಭಾಗವಹಿಸುವುದರಿಂದ ನಿಷೇಧಿಸಬಹುದು.