(1) 'ಅಪಘಾತ" ಎಂದರೆ, ಅಪರಾಧಿಕ ಉದ್ದೇಶವಿಲ್ಲದೆ ಹಠಾತ್ತಾಗಿ ಮತ್ತು ಅವಿರೀಕ್ಬಿತವಾಗಿ ಉಂಟಾದ ಸಾವು ಅಥವಾ ಶಾಶ್ವತ ಅಸಮರ್ಥತೆ, ಸಂಪೂರ್ಣ ಅಥವಾ ಭಾಗಶಃ ಅಂಗವೈಕಲ್ಯ ಉಂಟು ಮಾಡಿದ ಘಟನೆ: BOOS, ಕರ್ತವ್ಯದಲ್ಲಿರುವಾಗ ಹೃದಯ ಸ್ತಂಭನ (ಹೃದಯಾಘಾತ) ದಿಂದ ಸಾವು ಸಂಭವಿಸಿದ ಸಂದರ್ಭದಲ್ಲಿಯೂ ಸಹ ಅದೇ ಸೌಲಭ್ಯವು ಲಭ್ಯವಾಗುತ್ತದೆ.
(2) "ಅರ್ಹತೆ" ಪ್ರತಿಯೊಬ್ಬ ನೋಂ೦ದಾಯಿತ ಕಾರ್ಮಿಕನಿಗೆ, ಅವನು/ಅವಳು ಉದ್ಯೋಗ ಮಾಡುತ್ತಿರುವ ಅವಧಿಯಲ್ಲಿ ಅಥವಾ ಅವನ/ಅವಳ ಉದ್ಯೋಗದ ಹೊರಗೆ ಅಪಘಾತಕ್ಕೀಡಾದರೆ, ಈ ನಿಯಮದ ಅಡಿಯಲ್ಲಿ ಈ ಮುಂದಿನ ಪ್ರಕರಣಗಳನ್ನು ಹೊರತುಪಡಿಸಿ ನೆರವನ್ನು ನೀಡತಕ್ಕದ್ದು.
(ಎ) ಸ್ವಾಭಾವಿಕ ಮರಣ.
(2) (i) ಆತ್ಮಹತ್ಯೆ ಮಾಡಿಕೊಳ್ಳುವ ಅಥವಾ ಆತ್ಮಹತ್ಯೆಗೆ ಪ್ರಯತ್ನಿಸುವ, ಉದ್ದೇಶ ಪೂರ್ವಕವಾಗಿ ಸ್ವಯಂ ಹಾನಿ ಮಾಡಿಕೊಳ್ಳುವುದರಿಂದ;
(ii) ಅಮಲೇರಿಸುವ ಮದ್ಯ ಅಥವಾ ಮಾದಕ ವಸ್ತುಗಳ ಪರಿಣಾಮ ಇರುವಾಗ
(iii) ಕ್ರಿಮಿನಲ್ ಉದ್ದೇಶದಿಂದ ಕೂಡಿದ ಯಾವುದೇ ಕಾನೂನನ್ನು ಉಲ್ಲಂಘನೆ ಮಾಡುವುದರಿಂಂದಾದ ಪರಿಣಾಮದಿಂದಾಗಿ ಸಂಭವಿಸಿದ ಮರಣ ಅಥವಾ ಗಾಯಕ್ಕೆ ಸಂಬಂಧಿಸಿದಂತೆ ನಷ್ಟ ಪರಿಹಾರ ಸಂದಾಯ.