(1) ಸಾಮಾನ್ಯವಾಗಿ ಉದ್ದೇಶಿಸಿದ ಸಭೆಯ ಎರಡು ವಾರಗಳ ಮುಂಚಿತವಾಗಿ ನೋಟಿಸನ್ನು ಮಂಡಳಿಯ ಸದಸ್ಯರಿಗೆ ನೀಡತಕ್ಕದ್ದು: ಪರಂತು, ಅಧ್ಯಕ್ಷರಿಗೆ ಹಾಗೆ ಮಾಡುವುದು ಅಗತ್ಯವೆಂದು ಮನದಟ್ಟಾದರೆ, ಅಂಥ AMA wow ತಿಂಗಳು ಮೀರದ ಧೀರ್ಫಾವಧಿಯ ಸೂಚನೆಯನ್ನು ನೀಡುಬಹುದು.
(2) ಮಂಡಳಿಯ ಸಭೆಗಾಗಿ ಕಾರ್ಯಕಲಾಪಗಳ ಪಟ್ಟಿಯಲ್ಲಿ ಸೇರಿಸಿರುವ ಕಾರ್ಯಕಲಾಪಗಳನ್ನು ಹೊರತುಪಡಿಸಿದ ಯಾವುದೇ ಕಾರ್ಯಕಲಾಪಗಳನ್ನು ಅಧ್ಯಕ್ಷರ ಪೂರ್ವಾನುಮತಿಯಿಲ್ಲದೆ ಸಭೆಯಲ್ಲಿ ಪರಿಗಣಿಸತಕ್ಕದ್ದಲ್ಲ.
(3) ಅಧ್ಯಕ್ಷರು ಯಾವುದೇ ಸಮಯದಲ್ಲಿ ತುರ್ತಿನ ಸಂದರ್ಭವಿದ್ದಲ್ಲಿ, ಚರ್ಚೆಯ ವಸ್ತುವಿಷಯ ಮತ್ತು ತುರ್ತಿನ ಕಾರಣದ ಬಗ್ಗೆ ಮುಂಚಿತವಾಗಿ ಸದಸ್ಯರಿಗೆ ತಿಳಿಸಿದ ನಂತರ, ಮಂಡಳಿಯ ವಿಶೇಷ ಸಭೆಯನ್ನು ಕರೆಯಬಹುದು.