(1) ಪದನಿಮಿತ್ತ ಸದಸ್ಯರನ್ನು ಹೊರತುಪಡಿಸಿ ಒಬ್ಬ ಸದಸ್ಯನು, ಸರ್ಕಾರದ ಇಚ್ಚೆಗೆ ಒಳಪಟ್ಟು, ತನ್ನ ನಾಮನಿರ್ದೇಶನದ ದಿನಾಂಕದಿಂದ ಮೂರು ವರ್ಷಗಳು ಮೀರದಂಥ ಅವಧಿಗೆ ಅಥವಾ ಮಂಡಳಿಯನ್ನು ಪುನರ್ ರಚಿಸುವವರೆಗೆ ಇವುಗಳಲ್ಲಿ ಯಾವುದು ಮೊದಲೋ ಆ ಅವಧಿಯವರೆಗೆ ಹುದ್ದೆಯನ್ನು ಹೊಂದಿರತಕ್ಕದ್ದು.
(2) 3ನೇ ಪ್ರಕರಣದ (Se ಉಪ-ಪ್ರಕರಣದ ಡಿ) ಉಪ-ಖಂಡದ ಮೇರೆಗೆ ನಾವು ನಿರ್ದೇಶಿತಗೊಂಡ ಸದಸ್ಯನು, ತಾನು ಯಾವ ವರ್ಗದಿಂದ ನಾಮ ನಿರ್ದೇಶನಗೊಂಡಿರುವನೋ ಆ ಪ್ರವರ್ಗವನ್ನು ಪ್ರತಿವಿಧಿಸುತ್ತಿಲ್ಲವಾದರೆ, ಸದರಿ ಸದಸ್ಯನ ಮಂಡಳಿಯ ಸದಸ್ಯತ್ವವು ರದ್ದಾಗತಕ್ಕದ್ದು.
(3) ಸದಸ್ಯನು ಸುತ್ತು ಸರದಿ ಆಧಾರದ ಮೇಲೆ ಮಾತ್ರ ಮರು-ನಾಮ ನಿರ್ದೇಶನಕ್ಕೆ ಅರ್ಹನಾಗಿರತಕ್ಕದ್ದು.