ಈ ನಿಯಮಗಳಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-
(ಎ) “ಲೆಕ್ಕಪತ್ರ ಅಧಿಕಾರಿಗಳು” ಎಂದರೆ, ರಾಜ್ಯದ ಲೆಕ್ಕ ಪತ್ರಗಳನ್ನು ನಿರ್ವಹಿಸುವ ಕರ್ನಾಟಕದ ಮಹಾಲೇಖಪಾಲರಿಂದ.. ಈ ಸಂಬಂಧವಾಗಿ.. ನೇಮಕ ಮಾಡಬಹುದಾದಂಥ ಅಧಿಕಾರಿ ಮತ್ತು ಇವರು ಭಾರತದ ಲೆಕ್ಕಪತ್ರ ನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರ ಪರವಾಗಿ, ಆ ಲೆಕ್ಕಪತ್ರಗಳ ಸಂಬಂಧದಲ್ಲಿ, ಲೆಕ್ಕಪರಿಶೋಧನೆ ಪ್ರಕಾರ್ಯಗಳನ್ನು ನಿರ್ವಹಿಸಬೇಕು.
(ಬಿ) “ಸರಾಸರಿ ವೇತನ” ಎಂದರೆ, ಚಂದಾದಾರನು ಹೊಂದಿದ್ದ ಹುದ್ದೆಯ ಕಾಲಿಕ ವೇತನ ಶ್ರೇಣಿಯ ಕನಿಷ್ಠ ಹಾಗೂ ಗರಿಷ್ಠದ ನಡುವಿನ ಪ್ರಮಾಣಕ್ಕೆ ಸಮನಾದ ಮೊತ್ತ.
(ಸಿ. “ಮಗು”ಎಂದರೆ ನ್ಯಾಯಸಮ್ಮತ ಮಗು ಮತ್ತು ಇದರಲ್ಲಿ ಪೋಷಕರು ಮತ್ತು ಪಾಲಕರುಗಳ ಅಧಿನಿಯಮ, 1890 (1890ರ ಕೇಂದ್ರ ಅಧಿನಿಯಮ 8)ರ, ಹಿಂದೂ ದತ್ತಕ ಮತ್ತು ಜೀವನಾಂಶ ಅಧಿನಿಯಮ, 1956ರ ಅಥವಾ ಬಾಲ ನ್ಯಾಯ (ಪಾಲನೆ ಮತ್ತು ರಕ್ಷಣೆ) ಅಧಿನಿಯಮ, 2000 ಇವುಗಳ ಮೇರೆಗೆ ಸರ್ಕಾರಿ ನೌಕರನೊಂದಿಗೆ ಜೀವಿಸುವ ಮತ್ತು ಕುಟುಂಬದ ಸದಸ್ಯನೆಂದು ಪರಿಗಣಿತವಾಗಿರುವ ಮತ್ತು ಸರ್ಕಾರಿ ನೌಕರನು ಜನ್ಮ ಕೊಟ್ಟ ಮಗುವಿಗೆ ನೀಡುವ ಸ್ಥಾನಮಾನದಂ೦ತೆಯೇ ವಿಶೇಷ ಉಯಿಲು ಪತ್ರದ ಮೂಲಕ ಸಮಾನ ಸ್ಥ್ಮಾನಮಾನ/ಮಾನ್ಯತೆ ನೀಡಲಾಗಿರುವ ಚಂದಾದಾರನು ಅಥವಾ ಪಾಲಕನು ಬರೆದು ಕೊಟ್ಟು, ವೈಯಕ್ತಿಕ ಕಾನೂನಿನ ಮೂಲಕ ದತ್ತು ಪಡೆದಿರುವುದು ಮಾನ್ಯತೆ ಪಡೆದಿದ್ದರೆ ಅಂಥ ದತ್ತು ಮಗು ಸೇರುತ್ತದೆ.
(2) “ಉಪಲಬ್ದ” ಎಂದರೆ, ಅನ್ಯಥಾ . ವ್ಯಕ್ತವಾಗಿ ಉಪಬಂಧಿಸಿರುವುದನ್ನು ಹೊರತುಪಡಿಸಿ ವೇತನ, ರಜೆ ಸಂಬಳ ಅಥವಾ ಜೀವನ ನಿರ್ವಹಣಾ ಭತ್ಯೆ.
(ಇ) “ಕುಟುಂಬ” ಎಂದರೆ, ಚಂದಾದಾರ ಪುರುಷ ಅಥವಾ ಮಹಿಳೆ ಆಗಿದ್ದರೆ, ಅವನ BOBS ಅಥವಾ ಹೆಂಡತಿಯರು ಅಥವಾ ಅವಳ ಗಂಡ, ಅವನ ಮತ್ತು ಅವಳ ತಂದೆತಾಯಿಗಳು, ಮಕ್ಕಳು, ಅಪ್ರಾಪ್ತ ಸಹೋದರರು, ಅವಿವಾಹಿತ ಸಹೋದರಿಯರು, ಮೃತ ಮಗನ ವಿಧವೆ ಮತ್ತು ಮಕ್ಕಳು ಹಾಗೂ ಚಂದಾದಾರನ ತಂದೆ ತಾಯಿಗಳು ಜೀವಂತವಾಗಿಲ್ಲದಿದ್ದರೆ, ಅವರ ಅಜ್ಜ-ಅಜ್ಜಿ;
ಪರಂತು, ಚಂದಾದಾರ, ಅವನ ಅಥವಾ ಅವಳ ಗಂಂಡ/ಹೆಂಡತಿಯು, ಅವನಿಂದ/ಅವಳಿಂದ ಕಾನೂನಾತಹಚವಾಗಿ ಪ್ರತ್ಯೇಕಗೊಂಡಿದ್ದಾರೆಂದು ಅಥವಾ ಅವನು/ಅವಳು ಕುಟುಂಬ ನಿರ್ವಹಣೆಯ ಹಕ್ಕನ್ನು ಹೊಂದಿರುವುದಕ್ಕೆ ಸಂಬಂಧಿಸಿದಂತೆ ಯಾವ ಕುಟುಂಬ ವರ್ಗಕ್ಕೆ ಸೇರಿರುವರೋ ಆ ಕುಟುಂಬ ವರ್ಗದ ರೂಢಿಗತ ಕಾನೂನಿನ ಮೇರೆಗೆ ಅವನ/ಅವಳ ಸಂಬಂಧವು ಅಂತ್ಯವಾಗಿರುತ್ತದೆ. ಎಂಬುದನ್ನು ರುಜುವಾತುಪಡಿಸಿದ್ದರೆ, ಚಂದಾದಾರ, ಇನ್ನು ಮುಂದೆ ಅವನು/ಅವಳು ಉಲ್ಲೇಖಿಸಿರುವ ಹಾಗೆಯೇ ಮುಂದುವರೆಯತಕ್ಕದೆಂದು ಲೆಕ್ಕಪತ್ರ ಅಧಿಕಾರಿಗೆ ಲಿಖಿತದಲ್ಲಿ ಮಾಹಿತಿ ನೀಡಿದ ಹೊರತು, ಈ ನಿಯಮಗಳಿಗೆ ಸಂಬಂಧಿಸಿದ ವಿಷಯಗಳನುಸಾರವಾಗಿ ಅವನು/ಅವಳು ಚಂದಾದಾರನ ಕುಟುಂಬದ ಸದಸ್ಯನಾಗಿರುವುದಿಲ್ಲ ಎಂದು ಭಾವಿಸತಕ್ಕದ್ದು; ಮತ್ತು (ಎಫ್) “ನಮೂನೆ” ಎಂದರೆ, ಈ ನಿಯಮಗಳಿಗೆ ಸೇರಿಸಲಾದ ನಮೂನೆ;
(ಜಿ) “ನಿಧಿ” ಎಂದರೆ ಸಾಮಾನ್ಯ ಭವಿಷ್ಯ ವಿಧಿ.
(ಹೆಚ್) “ಸರ್ಕಾರ” ಎಂದರೆ ಕರ್ನಾಟಕ ರಾಜ್ಯ ಸರ್ಕಾರ;
(ಐ). “ರಜೆ” ಎಂದರೆ, ಸಂಬಂಧಪಟ್ಟ ಸರ್ಕಾರಿ ನೌಕರನಿಗೆ ಅನ್ವಯವಾಗಹುದಾದ ಕರ್ನಾಟಕ ನಾಗರಿಕ ಸೇವಾ ನಿಯಮಗಳಿಂದ ಮಾನ್ಯವಾದ ಯಾವುದೇ ವಿಧದ ರಜೆ;
(2) “ನಾಮನಿರ್ದೇಶಿತ” ಎಂದರೆ, ಚಂದಾದಾರ ಮರಣಿಸಿದ ನಂತರ ಆತನ ಖಾತೆಯಲ್ಲಿ ಜಮೆಯಾಗಿರುವ ಹಣವನ್ನು ಪಡೆಯುವುದಕ್ಕೆ ಹಕ್ಕನ್ನು ಹೊಂದಿ ಪ್ರದತ್ತನಾಗಿರುವ ವ್ಯಕ್ತಿ;
(ಕೆ. “ಅನುಸೂಚಿ” ಎಂದರೆ, ಈ ನಿಯಮಗಳಿಗೆ ಸೇರಿಸಲಾದ ಅನುಸೂಚಿ;
(ಎಲ್) “ಚಂದಾದಾರ” ಎಂದರೆ ವಿಧಿಯ ಸದಸ್ಯ;
(ಎಮ್) “ವರ್ಷ” ಎಂದರೆ ಹಣಕಾಸು ವರ್ಷ;
(2) ಈ ನಿಯಮಗಳಲ್ಲಿ ಬಳಸಿದ ಆದರೆ ಪರಿಭಾಷಿಸಿಲ್ಲದಿರುವ ಪದಗಳು ಮತ್ತು ಅಭಿವ್ಯಕ್ತಿಯು ಭವಿಷ್ಯ ನಿಧಿಗಳ ಅಧಿನಿಯಮ, 1925 (1925 ರ ಕೇಂದ್ರ ಅಧಿನಿಯಮ 00ರಲ್ಲಿ ಅಥವಾ ಕರ್ನಾಟಕ ನಾಗರಿಕ ಸೇವಾ ನಿಯಮಗಳಲ್ಲಿ ಅವುಗಳಿಗೆ ಗೊತ್ತುಪಡಿಸಲಾದ ಅಂಥದ್ದೇ ಅರ್ಥವನ್ನು ಹೊಂದಿರತಕ್ಕದ್ದು.
(3) ಈ ನಿಯಮಗಳಲ್ಲಿರುವುದು ಯಾವುದೂ, ಇಲ್ಲಿಯವರೆಗೆ ಅಸ್ತಿತ್ವದಲ್ಲಿರುವ ಅಥವಾ ಹೊಸದಾಗಿ ಸ್ಥಾಪಿಸಿದ ಯಾವುದೇ ನಿಧಿಯು ಅಸ್ತಿತ್ವದಲ್ಲಿರುವ ಸಾಮಾನ್ಯ ಭವಿಷ್ಯ ನಿಧಿಯನ್ನು ಪರಿಣಾಮಕಾರಿಯಾಗಿ ಸಮಾಪ್ತಿಗೊಳಿಸಲಾಗಿದೆಯೆಂದು ಭಾವಿಸತಕ್ಕದ್ದಲ್ಲ.