(1) ಈ ಕೆಳಕಂಡ ಸರ್ಕಾರಿ ನೌಕರರುಗಳು, ಎಂದರೆ.-
(1) ನಿವೃತ್ತಿವೇತನದ ಸೇವೆಯಲ್ಲಿರುವ ಕರ್ನಾಟಕ ಸಿವಿಲ್ ಸೇವೆಗಳ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ವಿಯಮಗಳು, 1957 ರಲ್ಲಿ ನಿರ್ದಿಷ್ಟಪಡಿಸಲಾದ 'ಡಿ'ಗುಂಪಿನ ನೌಕರರುಗಳನ್ನು ಹೊರತುಪಡಿಸಿದ ಸರ್ಕಾರಿ ನೌಕರರು;
(ii) ಎರಡು ವರ್ಷಗಳ ನಿರಂತರ ಸೇವೆಯನ್ನು ಪೂರ್ಣಗೊಳಿಸಿದ ದಿನಾಂಕದಿಂದ ಅಂಥ ಪ್ರತಿಯೊಬ್ಬ ತಾತ್ಕಾಲಿಕ ಸರ್ಕಾರಿ ನೌಕರರು;
- ವಿಧಿಗೆ ಚಂದಾ ಪಾವತಿ ಮಾಡುವುದು ಕಡ್ಡಾಯವಾಗಿರತಕ್ಕದ್ದು. (2) ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಅಧಿಕೃತ ಶಾಖೆಯಲ್ಲಿ ಈಗಾಗಲೇ ಜೀವ ವಿಮೆಯನ್ನು ಮಾಡಿಸಿರುವ ಹಾಗೂ ಮಿತಿಮೀರಿದ ವಯಸ್ಸಿನ ಕಾರಣದಿಂದ ಹೆಚ್ಚಿನ ವಿಮೆಗೆ ಅನರ್ಹನಾಗಿರುವ ಅಥವಾ ಅನಾರೋಗ್ಯ ಪೀಡಿತನಾಗಿದ್ದಾನೆಂದು ಪ್ರಮಾಣೀಕರಿಸಿದ 'ಡಿ' ವರ್ಗದ ನೌಕರನ ಸಂದರ್ಭದಲ್ಲಿ, ನಿಧಿಗೆ ಚಂದಾದಾರನಾಗುವ ಆಯ್ಕೆಯನ್ನು ಅವನಿಗೆ ಬಿಡಬೇಕು.
(3) ಖಾಯಂ 'ಡಿ' ಗ್ರೂಪ್ ನೌಕರನು ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಅಧಿಕೃತ ಶಾಖೆಯಲ್ಲಿ ವಿಮೆಗಾಗಿನ ಅವನ ಪ್ರಾರಂಭಿಕ ಪ್ರಸ್ತಾವನೆಯು ತಿರಸ್ಕೃತವಾಗಿತ್ತು ಎಂಬ ಸಂಗತಿಯ ಕಾರಣದಿಂದಾಗಿ, ವಿಧಿಗೆ ಕಡ್ಡಾಯ ಚಂದಾದಾರನಾಗಿ ಪ್ರವೇಶ ಪಡೆದಿದ್ದರೆ, ತರುವಾಯ ಅವನು ಅಧಿಕೃತ ಶಾಖೆಯಲ್ಲಿ ವಿಮಾ ಪಾಲಿಸಿಯನ್ನು ಪಡೆಯಲು ಅರ್ಹನಾಗಿದ್ದು, ಅಂಥ ಚಂದಾಪಾವತಿಯ ಸ್ವರೂಪವು ಕಡ್ಡಾಯ ಎಂಬುದರಿಂದ ಆಯ್ಕೆಯ ಅವಕಾಶಕ್ಕೆ ಬದಲಾವಣೆಯಾಗತಕ್ಕದ್ದು.
4). ಈ ನಿಯಮದ ಉಪಬಂಧಗಳು ಈ ನಿಯಮದ ಪ್ರಾರಂಭದ ದಿನಾಂಕದಿಂದ ವಯೋಟಗಿವೃತ್ತಿಗೆ ಮುಂಚೆ ಒಂದು ವರ್ಷದ ಸೇವೆಯನ್ನು ಹೊಂದಿರುವ ಸರ್ಕಾರಿ ನೌಕರನಿಗೆ ಅನ್ವಯವಾಗತಕ್ಕದ್ದಲ್ಲ.
(5). ಈ ನಿಯಮದ ಉಪಬಂಧಗಳು, 1.4.2006 ರಂದು ಅಥವಾ ಆನಂತರ ಸೇವೆಗೆ ಸೇರಿದ ಸರ್ಕಾರಿ ನೌಕರನಿಗೆ ಅನ್ವಯವಾಗತಕ್ಕದ್ದಲ್ಲ.