(1) ಒಬ್ಬ ಚಂದಾದಾರನು, ವಿಧಿಗೆ ಸೇರುವ ಸಮಯದಲ್ಲಿ ತನಗೆ ಮರಣವುಂಟಾದ ಸಂದರ್ಭದಲ್ಲಿ, ಆತನಿಗೆ ಸಂದಾಯ ಯೋಗ್ಯವಾಗಬಹುದಾದ ಅಥವಾ ಸಂದಾಯ ಯೋಗ್ಯವಾಗಿದ್ದು, ಪಾವತಿ ಮಾಡಲಾಗಿರದ ಮೊತ್ತವನ್ನು ಹಾಗೂ ನಿಧಿಯಲ್ಲಿ ಅವನ ಹೆಸರಿನಲ್ಲಿ ಜಮೆಯಾಗಿರಬಹುದಾದ ಮೊತ್ತವನ್ನು ಸ್ವೀಕರಿಸುವುದಕ್ಕೆ ಒಬ್ಬರು ಅಥವಾ ಹೆಚ್ಚಿನ ವ್ಯಕ್ತಿಗಳಿಗೆ ಹಕ್ಕನ್ನು ಕೊಟ್ಟಿರುವ ಒಂದು ನಾಮನಿರ್ದೇಶನ ಪತ್ರವನ್ನು ಲೆಕ್ಕಪತ್ರ ಅಧಿಕಾರಿಗೆ ಸಲ್ಲಿಸತಕ್ಕದ್ದು:
BOOS), ನಾಮನಿರ್ದೇಶನ ಮಾಡುವ ಸಮಯದಲ್ಲಿ, ಚಂದಾದಾರನು ಕುಟುಂಬವನ್ನು ಹೊಂದಿದ್ದರೆ, ಆತನ ಕುಟುಂಬದ ಸದಸ್ಯರನ್ನು ಹೊರತುಪಡಿಸಿ, ಇತರೇ ಯಾರೇ ವ್ಯಕ್ತಿ ಅಥವಾ ವ್ಯಕ್ತಿಗಳ ಹೆಸರಿನಲ್ಲಿ ನಾಮನಿರ್ದೇಶನ ಮಾಡತಕ್ಕದ್ದಲ್ಲ:
ಮತ್ತೂ ಪರಂತು, ಕುಟುಂಬದ ಯಾರೇ ಇತರ ಸದಸ್ಯರು ಜೀವಂತವಾಗಿದ್ದರೆ, ಮಲಮಗ ಅಥವಾ ಮಲಮಗಳ ಹೆಸರಿನಲ್ಲಿ ನಾಮನಿರ್ದೇಶನ ಮಾಡತಕ್ಕದ್ದಲ್ಲ:
ಮತ್ತೂ ಅಲ್ಲದೆ, ಅವನು, ವಿಧಿಗೆ ಸೇರುವ ಮುನ್ನ ಚಂದಾದಾರನಾಗಿದ್ದ ಯಾವುದೇ ಇತರ ಭವಿಷ್ಯ ನಿಧಿಯ ಸಂಬಂಧದಲ್ಲಿ ಚಂದಾದಾರನು ನಾಮನಿರ್ದೇಶನವನ್ನು ಮಾಡಿದ್ದರೆ, ಅಂಥ ಇತರ ನವಿಧಿಯಲ್ಲಿರುವ ಅವನ ಜಮೆಯ ಮೊತ್ತವನ್ನು, ವಿಧಿಯಲ್ಲಿರುವ ಆತನ ಜಮೆಗೆ ವರ್ಗಾಯಿಸಲಾಗಿದ್ದರೆ, . ಅದನ್ನು ಈ ವಿಯಮದ ಮೇರೆಗೆ ಯುಕ್ತವಾಗಿ ಮಾಡಿದ ನಾಮನಿರ್ದೇಶನ ಎಂಬುದಾಗಿ ಭಾವಿಸತಕ್ಕದ್ದು.
(2) ಚಂದಾದಾರನು, (1ನೇ ಉಪ-ನಿಯಮದ ಮೇರೆಗೆ ಒಬ್ಬರಿಗಿಂತ ಹೆಚ್ಚಿನ ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡಿದ್ದಲ್ಲಿ, ಅವನು ಯಾವುದೇ ಸಮಯದಲ್ಲಿ ಆತನ ಹೆಸರಿನ ನಿಧಿಯಲ್ಲಿ ಜಮೆಯಾಗಿರುವ ಇಡೀ ಮೊತ್ತಕ್ಕೆ ಸಂಬಂಧಿಸಿದಂಥ ರೀತಿಯಲ್ಲಿ ಪ್ರತಿಯೊಬ್ಬ ನಾಮನಿರ್ದೇಶಿತನಿಗೆ ಸಂದಾಯ ಮಾಡಬಹುದಾದ ಭಾಗದ ಮೊತ್ತವನ್ನು ನಾಮನಿರ್ದೇಶನ ಪತ್ರದಲ್ಲಿ ನಿರ್ದಿಷ್ಟಪಡಿಸತಕ್ಕದ್ದು.
(3) ಪ್ರತಿಯೊಂದು ನಾಮನಿರ್ದೆಶನವು ನಮೂನೆ-3 ರಲ್ಲಿ ವಿವರಿಸಿರುವಂತೆ ಇರತಕ್ಕದ್ದು.
(4) ಚಂದಾದಾರನು, ಲೆಕ್ಕಾಧಿಕಾರಿಗೆ ಲಿಖಿತದಲ್ಲಿ ನೋಟೀಸ್ ಅನ್ನು ಕಳಿಸುವುದರ ಮೂಲಕ ತನ್ನ ನಾಮನಿರ್ದೇಶನವನ್ನು ಯಾವುದೇ ಸಮಯದಲ್ಲಿ ರದ್ದುಪಡಿಸಿಕೊಳ್ಳಬಹುದು: BOOS), ಚಂದಾದಾರನು OG ನೋಟೀಸಿನ ಜೊತೆಗೆ, ಈ ನಿಯಮದ ಉಪಬಂಧಗಳಿಗೆ ಅನುಸಾರವಾಗಿ ಮಾಡಲಾದ ಹೊಸ ನಾಮನಿರ್ದೇಶನ ಪತ್ರವನ್ನು ನೀಡತಕ್ಕದ್ದು.
(5) ಚಂದಾದಾರನು,
(ಎ) ನಿರ್ದಿಷ್ಟಪಡಿಸಿದ ಯಾರೇ ನಾಮನಿರ್ದೇಶಿತನಿಗೆ ಸಂಬಂಧಿಸಿದಂತೆ, ಅವನು ಮುಂಚಿತವಾಗಿಯೇ ಮೃತನಾದ ಸಂದರ್ಭದಲ್ಲಿ, ಆ ನಾಮನಿರ್ದೇಶಕನಿಗೆ ನೀಡಲಾದ ಹಕ್ಕನ್ನು ಚಂದಾದಾರನು ಮತ್ತೊಂದು ನಾಮನಿರ್ದೇಶನ ಪತ್ರದಲ್ಲಿ ನಿರ್ದಿಷ್ಟ ಪಡಿಸಬಹುದಾದಂಥ ಇತರೇ ವ್ಯಕ್ತಿ ಅಥವಾ ವ್ಯಕ್ತಿಗಳಿಗೆ ವರ್ಗಾಯಿಸತಕ್ಕದ್ದು.
ಪರಂತು, ಅಂಥ ಇತರ ವ್ಯಕ್ತಿ ಅಥವಾ ವ್ಯಕ್ತಿಗಳು, ಚಂದಾದಾರನು ತನ್ನ ಕುಟುಂಬದ ಇತರ ಸದಸ್ಯರನ್ನು ಹೊಂದಿದ್ದರೆ, HOP ಇತರ ಸದಸ್ಯ ಅಥವಾ ಸದಸ್ಯರುಗಳಾಗಿರತಕ್ಕದ್ದು. ಟಿಪ್ಪಣಿ: ಲೆಕ್ಕಾಧಿಕಾರಿಯು, ಚಂದಾದಾರನ ವೈಯಕ್ತಿಕ ಕಾನೂನಿನ ಮೇರೆಗೆ ದತ್ತು ಪ್ರಕ್ರಿಯೆಯು ಕಾನೂನುಬದ್ಧವಾಗಿದೆ ಎಂದು ಮನವರಿಕೆಯಾದಾಗ ದತ್ತು ಪಡೆದ ಮಗುವನ್ನು ಮಗು ಎಂಬುದಾಗಿ ಪರಿಗಣಿಸತಕ್ಕದ್ದು.
ಮತ್ತೂ ಪರಂತು, ಅಂಥ ಇತರೆ ವ್ಯಕ್ತಿಗಳು, ಕುಟುಂಬದ ಇತರೆ ಸದಸ್ಯರು ಜೀವಂತವಾಗಿಲ್ಲದಿದ್ದಲ್ಲಿ ಮಾತ್ರ ಮಲಮಗ ಅಥವಾ ಮಲಮಗಳು ಆಗಿರತಕ್ಕದ್ದು.
(ಬಿ) ನಾಮನಿರ್ದೇಶನವು ಅದರಲ್ಲಿ ನಿರ್ದಿಷ್ಟ್ಠಡಿಸಲಾದ ಆಕಸ್ಮಿಕ ಘಟನೆಯು ಸಂಭವಿಸಿದ ಸಂದರ್ಭದಲ್ಲಿ ಅಸಿಂಧುವಾಗತಕ್ಕದ್ದು:
BOOS, ನಾಮನಿರ್ದೇಶನವನ್ನು ಮಾಡುವ ಸಮಯದಲ್ಲಿ ಚಂದಾದಾರನು ಕುಟುಂಬವನ್ನು ಹೊಂದಿಲ್ಲದಿದ್ದರೆ, ಅವನು ತರುವಾಯ ಹೊಂದಿದ ಕುಟುಂಬದ ಸಂದರ್ಭದಲ್ಲಿ ಅವನು ನಾಮನಿರ್ದೇಶನ ಪತ್ರದಲ್ಲಿ ನೀಡಿದಂತೆ ಅದು ಅಸಿಂಧುವಾಗತಕ್ಕದ್ದು:
ಮತ್ತೂ BOOS, ನಾಮನಿರ್ದೇಶನವನ್ನು ಮಾಡುವ ಸಮಯದಲ್ಲಿ ಚಂದಾದಾರನು ಕುಟುಂಬದ ಒಬ್ಬ ಸದಸ್ಯನನ್ನು ಮಾತ್ರ ಹೊಂದಿದ್ದರೆ, (ಎ) ಖಂಡದ ಮೇರೆಗೆ ಪರ್ಯಾಯ ನಾಮನಿರ್ದೇಶಿತವಿಗೆ. ಹಕ್ಕನ್ನು. ನಾಮನಿರ್ದೇಶನ ಪತ್ರದಲ್ಲಿ ನೀಡಿದ್ದಲ್ಲಿ, ಅವನು ತರುವಾಯದಲ್ಲಿ ಅವನ ಕುಟುಂಬದಲ್ಲಿ ಸೇರ್ಪಡೆಯಾದ ಇತರ ಸದಸ್ಯ ಅಥವಾ ಸದಸ್ಯರುಗಳ ಸಂದರ್ಭದಲ್ಲಿ ಅಸಿಂಧುವಾಗತಕ್ಕದ್ದು.
(6 ಉಪ-ನಿಯಮ (5ರ DOT (ಎ)ಯ ಮೇರೆಗೆ ನಾಮನಿರ್ದೇಶನ ಪತ್ರದಲ್ಲಿ ವಿಶೇಷ ಉಪಬಂಧವನ್ನು ಕಲ್ಪಿಸಿಲ್ಲದಿರುವ ಸಂಬಂಧದಲ್ಲಿ ನಾಮನಿರ್ದೇಶಿತನು ಮೃತನಾದ ಅಥವಾ (5ನೇ ಉಪ-ನಿಯಮದ (ಬಿ) ಖಂಡದ ಅಥವಾ ಅದರ ಪರಂತುಕದ ಅನುಸಾರವಾಗಿ ನಾಮನಿರ್ದೇಶನ ಪತ್ರವು ಅಸಿಂಧುವಾದ ಕಾರಣದ ಯಾವುದೇ ಸಂದರ್ಭವು ಘಟಿಸಿದ ಕೂಡಲೇ, ಚಂದಾದಾರನು, ಈ ನಿಯಮದ ಪರಂತುಕಗಳ ಅನುಸಾರವಾಗಿ ಮಾಡಲಾದ ಹೊಸ ನಾಮನಿರ್ದೇಶನ ಪತ್ರದೊಂದಿಗೆ ಲಿಖಿತದಲ್ಲಿ ಈ ಹಿಂದಿನ ನಾಮನಿರ್ದೇಶನ ಪತ್ರವನ್ನು ರದ್ದುಗೊಳಿಸುವಂತೆ ತಿಳಿಸಿದ ನೋಟೇಸ್ನ್ನು ಲೆಕ್ಕಾಧಿಕಾರಿಗೆ ಕಳುಹಿಸಿಕೊಡತಕ್ಕದ್ದು.
(7). ಚಂದಾದಾರನು ಮಾಡಿದ ಪ್ರತಿಯೊಂದು ನಾಮನಿರ್ದೇಶನ ಪತ್ರ ಹಾಗೂ ನೀಡಲಾದ ಪ್ರತಿಯೊಂದು ರದ್ದಿಯಾತಿ ನೋಟೀಸು, ಲೆಕ್ಕಾಧಿಕಾರಿಯು ಅದನ್ನು ಸ್ವೀಕರಿಸಿದ ದಿನಾಂಕದಿಂದ ಅದು ಸಿಂಧುವಾಗಿರುವಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ಅನ್ವಯವಾಗತಕ್ಕದ್ದು.
ವಿವರಣೆ.- ಈ ನಿಯಮದಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು, 'ವ್ಯಕ್ತಿ' ಅಥವಾ 'ವ್ಯಕ್ತಿಗಳು ಎಂಬುದು ಅದು ನಿಗಮಿತವಾಗಿರಲಿ ಅಥವಾ ಇಲ್ಲದಿರಲಿ, ಒಂದು ಕಂಪನಿಯನ್ನು ಅಥವಾ ಸಂಘವನ್ನು ಅಥವಾ ವ್ಯಕ್ತಿಗಳ ವಿಕಾಯವನ್ನು ಒಳಗೊಂಡಿರತಕ್ಕದ್ದು.