(1) ಉಪ-ನಿಯಮ (2) ಮತ್ತು (3)d ಉಪಬಂಧಗಳಿಗೊಳಪಟ್ಟು, 01-04-2006 ರಂದು ಅಥವಾ ಅದರ ನಂತರ ಸೇವೆಗೆ ಸೇರಿದವರನ್ನು ಹೊರತುಪಡಿಸಿ, ಈ ಕೆಳಕಂಡ ಪ್ರವರ್ಗದ ಸರ್ಕಾರಿ ನೌಕರರುಗಳು, ವಿಧಿಗೆ ಸೇರಲು ಅರ್ಹರಾಗಿರತಕ್ಕದ್ದು.
(ಎ) ಕರ್ನಾಟಕ ರಾಜ್ಯ ಸಿವಿಲ್. ಸೇವೆಗಳ ಅಧಿನಿಯಮ, 1978 ರಿಂದ ನಿರ್ವಹಿಸಲಾಗುತ್ತಿರುವ ಅವರು ನಿವೃತ್ತಿ ವೇತನದವರಾಗಲಿ ಅಥವಾ ನಿವೃತ್ತಿ ವೇತನ ಇಲ್ಲದಿರುವವರಾಗಲಿ ಆ ಯಾವುದೇ ಸೇವಾ ನಿರತ ಎಲ್ಲಾ ಸದಸ್ಯರುಗಳು.
(ಬಿ). ತಮ್ಮ ಅರ್ಹತಾ BOlCta Ge ಅವಧಿಯನ್ನು ಯುಕ್ತವಾಗಿ ಪೂರ್ಣಗೊಳಿಸಿದ ಮೇಲೆ ಸೇವೆಯ ಪೂರ್ಣ ಸದಸ್ಯರುಗಳಾಗುವುದಕ್ಕೆ ಅರ್ಹವಾಗಬಹುದಾಗಿರುವ ಯಾವುದೇ ಸೇವೆಯಲ್ಲಿರುವ ಎಲ್ಲಾ ಪ್ರೊಬೆಷನರ್ಗಳು.
(ಸಿ) ಅರ್ಹತಾ ಪರೀಕ್ಬಾರ್ಥ ಅವಧಿ ಮೇಲೆ ಅಥವಾ ಸ್ನ್ಮಾನಾಪನ್ನ ಅವಧಿ ಮೇಲೆ, ಅಥವಾ ತಾತ್ಕಲಿಕ ಸಾಮರ್ಥ್ಯದ ಆಧಾರದ ಮೇಲೆ ನೇಮಕಗೊಂಡಿರುವ ಅಥವಾ ಕಚೇರಿಯ ಮುಖ್ಯಸ್ಥರ ಒಪ್ಪಿಗೆಯ ಮೇರೆಗೆ ಕವಿಷ್ಠ ಪಕ್ಷ ಒಂದು ವರ್ಷದ ಅವಧಿಗೆ ಅವರನ್ನು ನಿಯೋಜಿಸಲು ಸಂಭವವಿರುವ ಎಲ್ಲಾ ವ್ಯಕ್ತಿಗಳು.
(ಡಿ) ಮರು-ನೇಮಕಗೊಂಡ ನಿವೃತ್ತಿದಾರರು (ಗುತ್ತಿಗೆ. ಆಧಾರದ ಮೇಲೆ ನೇಮಕಗೊಂಡಿರುವವರನ್ನೂ ಒಳಗೊಂಡು).
BOOS, ಅವರು ಪ್ರಾರಂಭದಲ್ಲಿಯೇ ಒಂದು ವರ್ಷಕ್ಕಿಂತ ಹೆಚ್ಚು ಅವಧಿಗಾಗಿ ಮರು ನೇಮಕಾತಿಯಲ್ಲಿ ಒಂದು ವರ್ಷಕ್ಕಿಂತ ಹೆಚ್ಚು ವರ್ಷಗಳ ಕಾಲ ಮುಂದುವರೆಯುವುದಕ್ಕಾಗಿ ಮರು ನೇಮಕಗೊಂಡಿರುತ್ತಾರೆ. ನಂತರದಲ್ಲಿ, ಒಂದು ವರ್ಷದ ಸೇವೆಯನ್ನು ಪೂರ್ಣಗೊಳಿಸಿದ ತರುವಾಯ ಮಾತ್ರ ನಿಧಿಗೆ ಚಂದಾದಾರರಾಗಲು ಅವರು ಅರ್ಹರಾಗಬೇಕು.
(2) ಚಂದಾ ಭವಿಷ್ಯ ವಿಧಿಗೆ ಚಂದಾದಾರನಾಗಲು ಅಗತ್ಯಪಡಿಸಿರುವ ಅಥವಾ ಅನುಮತಿ ನೀಡಿರುವ ಸರ್ಕಾರಿ ನೌಕರನು, HOP ನಿಧಿಗೆ ಚಂದಾದಾರನಾಗಲು ಅವನು ತನ್ನ ಹಕ್ಕನ್ನು ಅವನಲ್ಲಿಯೇ ಉಳಿಸಿಕೊಂಡಿರುವಾಗ, ಅಂಥ ನಿಧಿಗೆ ಚಂದಾದಾರನಾಗಿ ಸೇರಲು ಅರ್ಹನಾಗಿರತಕ್ಕದ್ದಲ್ಲ.
(3) ಈ ನಿಯಮದ ಮೇರೆಗೆ ಸದಸ್ಯತ್ವಕ್ಕಾಗಿ ಅರ್ಹನಾಗದ, ಇಲ್ಲಿಯವರೆಗೆ ಜಾರಿಯಲ್ಲಿರುವ ನಿಯಮಗಳು ಅಥವಾ ಆದೇಶಗಳ ಮೇರೆಗೆ ಸದಸ್ಯತ್ವಕ್ಕೆ ಯುಕ್ತವಾಗಿ ಅಂ೦ಗೀಕೃತವಾಗಿರುವ, ಯಾರೇ ಸರ್ಕಾರಿ ನೌಕರನು ಸದಸ್ಯನಾಗಿ ಮುಂದುವರೆಯತಕ್ಕದ್ದು ಮತ್ತು ಬಾಧ್ಯತೆಗೆ ಸಂಬಂಧಿಸಿದಂತೆ. ಯಾವುದೇ ವಿಶೇಷ ಉಪಬಂಧಗಳ ಮೂಲಕ ನಿರ್ವಹಿಸತಕ್ಕದ್ದು ಹಾಗೂ ಅವರ ಸೇವಾ ಷರತ್ತುಗಳು ಎಲ್ಲಿಯವರೆಗೆ ಮುಂದುವರೆಯುವುದೋ ಅಲ್ಲಿಯವರೆಗೆ ಆ ನಿಯಮ ಅಥವಾ ಆದೇಶಗಳಲ್ಲಿ ಒಳಗೊಂಡಿರುವ ವಂತಿಗೆಯ ದರಗಳು ಕಾಲಕಾಲಕ್ಕೆ ರಾಜ್ಯಪಾಲರು ನಿರ್ಧರಿಸಬಹುದಾದಂ೦ತೆ ಇರತಕ್ಕದ್ದು.
(41) ಇತರ ಯಾವುದೇ ರಾಜ್ಯ ಸರ್ಕಾರದ ಅಥವಾ ಕೇಂದ್ರ ಸರ್ಕಾರದ ಸೇವೆಯಿಂದ ರಾಜ್ಯ ಸರ್ಕಾರದ ಸೇವೆಗೆ ವರ್ಗಾವಣೆಯ ಮೇಲೆ ನೇಮಕಗೊಂಡ ನೌಕರರುಗಳು.
(5) ವಿಧಿಗೆ ಸೇರಲು ಆಯ್ಕೆಯಾಗಬಹುದಾದ ಇತರ ಎಲ್ಲಾ ಅರ್ಹ ಸರ್ಕಾರಿ ನೌಕರ.
(6 ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಹಾಗೂ ಪ್ರತಿಯೊಬ್ಬ ಇತರ ಸದಸ್ಯನು ತನ್ನ ಆಯ್ಕೆಯಂತೆ, ವಿಧಿಯ ನಿರ್ವಹಣೆಯ ನಿಯಮಗಳು ಅಥವಾ ಆದೇಶಗಳ ಅನುಸಾರವಾಗಿ ವಿಧಿಗೆ ಚಂದಾದಾರರಾಗಬಹುದು.
() ಕರ್ನಾಟಕ ರಾಜ್ಯ ವಿಧಾನ ಮಂಡಲದ ಮತ್ತು ಕರ್ನಾಟಕ ಉಚ್ಚ ನ್ಯಾಯಾಲಯದ ನೌಕರರುಗಳು ನಿಧಿಯ ಸದಸ್ಯರಾಗಬಹುದು.
(8) . ಇತರ ಯಾವುದೇ ಸರ್ಕಾರಿ ನೌಕರರುಗಳಿಗೆ ಅಥವಾ ಸರ್ಕಾರಿ ನೌಕರನ ವರ್ಗಕ್ಕೆ ರಾಜ್ಯ ಸರ್ಕಾರವು, ಈ ವಿಯಮಗಳಿಗೆ ಅನ್ವಯಿಸುವ ಸಾಮಾನ್ಯ ಅಥವಾ ವಿಶೇಷ ಆದೇಶವನ್ನು ಮಾಡಬಹುದು.