(1) ಚಂದಾದಾರನು, ತನ್ನ ಅಮಾನತ್ತಿನ ಅವಧಿಯನ್ನು ಹೊರತುಪಡಿಸಿ ನಿಧಿಗೆ ಪ್ರತಿ ತಿಂಗಳು ಚಂದಾಪಾವತಿಯನ್ನು ಮಾಡತಕ್ಕದ್ದು.
ಪರಂತು ಚಂದಾದಾರನು, ರಜೆಯ ಅವಧಿಯಲ್ಲಿ ಯಾವುದೇ ರಜಾ ಸಂಬಳವನ್ನು ಹೊಂದಿಲ್ಲದಿರಲಿ ಅಥವಾ ರಜಾ ಸಂಬಳವನ್ನು ಹೊಂದಿರಲಿ, ಅರ್ಧ ವೇತನ ಅಥವಾ ಅರ್ಧ ಸರಾಸರಿ ವೇತನಕ್ಕೆ ಸಮನಾದ ಅಥವಾ ಅದಕ್ಕಿಂತ ಕಡಿಮೆ ವಂತಿಗೆಯನ್ನು ನೀಡದಿರುವ ಬಗ್ಗೆ ಅವನ ಆಯ್ಕೆಗೆ ಬಿಡಬಹುದು.
ಮತ್ತೂ BOOS), ಚಂದಾದಾರನಿಗೆ ಅಮಾನತ್ತಿನ ಅವಧಿಯು ಮುಗಿದ ನಂತರ ಮರು ನೇಮಕಾತಿಯ ತರುವಾಯ, ಆ ಅವಧಿಗೆ ಅನುಮತಿಸಬಹುದಾದ ಬಾಕಿ ವಂತಿಗೆಗಳ ಯಾವುದೇ ಮೊತ್ತವು ಗರಿಷ್ಠ ಮೊತ್ತವನ್ನು ಮೀರದಂತೆ ಒಂದೇ ಮೊತ್ತದಲ್ಲಿ ಅಥವಾ Fone), ಸಂದಾಯ ಮಾಡುವ ಆಯ್ಕೆಗೆ ಅವಕಾಶ ಮಾಡಿಕೊಡತಕ್ಕದ್ದು.
(2) ಚಂದಾದಾರನು, (1ನೇ ಉಪ-ನಿಯಮದ ಮೊದಲನೇ ಪರಂ೦ತುಕದಲ್ಲಿ ಉಲ್ಲೇಖಿಸಿರುವಂತೆ, ರಜೆಯ ಅವಧಿಯಲ್ಲಿ ವಂತಿಗೆಯನ್ನು ನೀಡುವಂತಿಲ್ಲವೆಂಬ ಅವನ ಆಯ್ಕೆಯನ್ನು ಈ ಕಳಕಂಡ ರೀತಿಯಲ್ಲಿ ತಿಳಿಸತಕ್ಕದ್ದು.
(ಎ) ಅವನು ತನ್ನ ಸ್ವಂತ ವೇತನ ಬಿಲ್ಲುಗಳನ್ನು ಸಿದ್ಧಪಡಿಸುವ ಅಧಿಕಾರಿಯಾಗಿದ್ದರೆ; ರಜೆಯಿಂದ ಬಂದ ನಂತರ ಡ್ರಾ ಮಾಡಿದ ತನ್ನ ಮೊದಲ ವೇತನ ಬಿಲ್ಲಿನಲ್ಲಿ ವಂತಿಗೆಯ ಲೆಕ್ಕದಲ್ಲಿ ರಿಯಾಯಿತಿಯನ್ನು ಮಾಡದಿರುವ ಮೂಲಕ;
(ಬಿ) . ಅವನು ತನ್ನ ಸ್ವಂತ ವೇತನ ಬಿಲ್ಲುಗಳನ್ನು ಸಿದ್ಧಪಡಿಸುವ ಅಧಿಕಾರಿಯಾಗಿಲ್ಲದಿದ್ದಲ್ಲಿ, ರಜೆಯ ಮೇಲೆ ಹೋಗುವ ಮುಂಚ, ತನ್ನ ಕಚೇರಿಯ ಮುಖ್ಯಸ್ಥರಿಗೆ ಲಿಖಿತದಲ್ಲಿ ಮಾಹಿತಿ ನೀಡುವ ಮೂಲಕ ವಂತಿಗೆಯನ್ನು ನೀಡುವುದಕ್ಕೆ. ಆಯ್ಕೆಯ ಬಗ್ಗೆ ಯುಕ್ತವಾಗಿ ಹಾಗೂ ಸಕಾಲಿಕವಾಗಿ ಮಾಹಿತಿಯನ್ನು ನೀಡಲು ವಿಫಲವಾಗಿದೆ ಎಂದು ಭಾವಿಸತಕ್ಕದ್ದು.
(3) . ಈ ಉಪ-ನಿಯಮದ ಮೇರೆಗೆ ತಿಳಿಸಿದ ಚಂದಾದಾರನ ಆಯ್ಕೆಯು ಅಂ೦ತಿಮವಾಗಿರತಕ್ಕದ್ದು.
(4) ವಿಧಿಯಲ್ಲಿ ತನ್ನ ಹೆಸರಿನಲ್ಲಿ ಜಮೆಯಾಗಿರುವ ಮೊತ್ತವನ್ನು, 19ನೇ ನಿಯಮದ ಮೇರೆಗೆ ಹಿಂಪಡೆದಿರುವ ಚಂದಾದಾರನು, ಅವನು ಕರ್ತವ್ಯಕ್ಕೆ ಹಿಂತಿರುಗುವುದರ ಹೊರತು ಮತ್ತು ಹಿಂಂತಿರುಗುವವರೆಗೆ GOB ಹಿಂಪಡೆಯುವುದರ ನಂತರ ವಿಧಿಗೆ ವಂತಿಗೆಯನ್ನು ನೀಡತಕ್ಕದ್ದಲ್ಲ.
(5) ಚಂದಾದಾರನನ್ನು ವಿದೇಶಿ ಸೇವೆಗೆ ವರ್ಗಾವಣೆ ಮಾಡಿದಾಗ ಅಥವಾ ಭಾರತದ ಒಳಗೆ ಅಥವಾ ಭಾರತದ ಹೊರಗೆ ಪ್ರತಿನಿಯೋಜನೆ ಮೇಲೆ ಕಳುಹಿಸಿದಾಗ, ಅವನು ಹಾಗೆ ವರ್ಗಾವಣೆಯಾಗದಿದ್ದರೆ ಅಥವಾ ಪ್ರತಿನಿಯೋಜನೆ ಮೇಲೆ ಕಳುಹಿಸದಿದ್ದರೆ ಹೇಗೋ ಅದೇ ರೀತಿಯಲ್ಲಿ ನಿಧಿಯ ನಿಯಮಗಳಿಗೆ ಒಳಪಟ್ಟಿರತಕ್ಕದ್ದು.
(6) ಯಾರೇ ಚಂದಾದಾರನು, ರಾಜ್ಯದ ಒಳಗೆ ಒಂದು ಕಾರ್ಯ ಸಂ೦ಸ್ಕೆಯಿಂಂದ ಇನ್ನೊಂದು ಕಾರ್ಯಸಂಸ್ಥೆಗೆ ವರ್ಗಾವಣೆಯಾದಲ್ಲಿ, ಅದೇ ಸಾಮಾನ್ಯ ಭವಿಷ್ಯ ನಿಧಿಯ ಖಾತೆ ಸಂಖ್ಯೆಗೆ ಚಂದಾದಾರನಾಗಿ ಮುಂದುವರೆಯತಕ್ಕದ್ದು.
(7) AOR ವಂತಿಗೆಗಳನ್ನು ಪಡೆಯುವುದನ್ನು ಚಂದಾದಾರನ ನಿವೃತ್ತಿ ದಿನಾಂಕಕ್ಕೆ ಆರು SONY ಮುಂಚೆಯೇ ನಿಲ್ಲಿಸತಕ್ಕದ್ದು.