(1) 01-04-2006 8,03 ಮೊದಲು ರಾಜ್ಯದ ಸೇವೆಗೆ ಸೇರಿದ ಪ್ರತಿಯೊಬ್ಬ ಸರ್ಕಾರಿ ನೌಕರನಿಗೆ, ನಮೂನೆ-1 ರಲ್ಲಿ ನಿಯಮಿಸಿರುವ ಅರ್ಜಿಯನ್ನು, ತ್ರಿಪ್ರತಿಯಲ್ಲಿ ಸಾಮಾನ್ಯ ಭವಿಷ್ಯ ವಿಧಿಗೆ ಸೇರ್ಪಡೆಯಾಗುವುದಕ್ಕಾಗಿ ಅರ್ಜಿಯನ್ನು ಸಲ್ಲಿಸಲು ಅಗತ್ಯಪಡಿಸತಕ್ಕದ್ದು.
(2) 1ನೇ ಉಪ-ನಿಯಮದಲ್ಲಿ ನಿರ್ದಿಷ್ಟಪಡಿಸಿರುವಂಂತೆ ಅರ್ಜಿ ನಮೂನೆಯ ಜೊತೆಗೆ ಸಮೂನೆ-2 ರಲ್ಲಿ ತ್ರಿಪ್ರತಿಯಲ್ಲಿ. ನಾಮನಿರ್ದೇಶನ ಮಾಡುವುದರೊಂದಿಗೆ ಸಲ್ಲಿಸತಕ್ಕದ್ದು.
(3) . ಕಚೇರಿಯ ಮುಖ್ಯಸ್ಥರು, ಸಾಮಾನ್ಯ ಭವಿಷ್ಯ ವಿಧಿ ಖಾತೆಯ ಸಂಖ್ಯೆ ಹಂಚಿಕೆಗಾಗಿ ಹಾಗೂ ನಾಮ ನಿರ್ದೇಶನದ ಅಂಗೀಕಾರಕ್ಕಾಗಿ ಮಹಾಲೇಖಪಾಲರಿಗೆ ದ್ವಿಪ್ರತಿಯಲ್ಲಿ ನಾಮ ನಿರ್ದೇಶನದ ಪತ್ರದೊಂದಿಗೆ ಅರ್ಜಿಯನ್ನು ಕಳುಹಿಸಿಕೊಡತಕ್ಕದ್ದು.
(41) ಮಹಾಲೇಖಪಾಲರು ಸಾಮಾನ್ಯ ಭವಿಷ್ಯ ವಿಧಿ ಖಾತೆ ಸಂಖ್ಯೆಯನ್ನು ಹಂಚಿಕೆಮಾಡತಕ್ಕದ್ದು ಹಾಗೂ ಕ್ರಮಬದ್ಧವಾಗಿ ಅಂಗೀಕರಿಸಿದ ನಾಮನಿರ್ದೇಶನ ಪತ್ರದ ಜೊತೆಗೆ ಸಾಮಾನ್ಯ ಭವಿಷ್ಯ ವಿಧಿ ಖಾತೆ ಸಂಖ್ಯೆಯನ್ನು ಬರೆದು ತಿಳಿಸಿದ ಅರ್ಜಿ ನಮೂನೆಯ ಎರಡನೇ ಪ್ರತಿಯನ್ನು ಕಚೇರಿಯ ಮುಖ್ಯಸುದರಿಗೆ ಹಿಂತಿರುಗಿಸತಕ್ಕದ್ದು.
(5) ಕಚೇರಿಯ ಮುಖ್ಯಸ್ಥರು, ಸಾಮಾನ್ಯ ಭವಿಷ್ಯ ವಿಧಿ ಖಾತೆ ಸಂಖ್ಯೆಯನ್ನು ಸ್ವೀಕರಿಸಿದ ಮೇಲೆ, ಅದನ್ನು ನೌಕರರ ಸೇವಾ ಪುಸ್ತಕದ ಮೊದಲನೇ ಪುಟದಲ್ಲಿ ದಾಖಲಿಸತಕ್ಕದ್ದು. ನಾಮನಿರ್ದೇಶನ ಪತ್ರದ ಅಂಶಗಳ ಅಗತ್ಯ ನಮೂದನ್ನು ಸಹ ಸೇವಾ ಪುಸ್ತಕದಲ್ಲಿ ದಾಖಲಿಸತಕ್ಕದ್ದು.