(1) ಈ ನಿಯಮಗಳಲ್ಲಿ, ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು-
(ಎ) 'ಅಧಿನಿಯಮ' ಎಂದರೆ, ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮ, 2020 (2020ರ ಕರ್ನಾಟಕ ಅಧಿನಿಯಮ 4);
(ಬಿ) 'ಮಕ್ಕಳು' ಎಂದರೆ, ಶಿಕ್ಷಕನ ಅವಲಂಬಿತ ಮತ್ತು ಅವಿವಾಹಿತ ಮಕ್ಕಳು;
(ಸಿ) 'ಪ್ರಕರಣ' ಎಂದರೆ, ಅಧಿನಿಯಮದ ಪ್ರಕರಣ;
(8) "ಖಾಲಿ ಹುದ್ದೆಗಳು' ಎಂದರೆ, ಸಂದರ್ಭಾನುಸಾರ, ಸರ್ಕಾರದಿಂದ ಕಾಲಕಾಲಕ್ಕೆ ನಿರ್ದಿಷ್ಟಪಡಿಸಿದ ನಿಬಂಧನೆಗನುಸಾರವಾಗಿ ಖಾಲಿ ಇರುವ ಹುದ್ದೆ ಮತ್ತು ಅಗತ್ಯಪಡಿಸಿರುವ ನಿರ್ದಿಷ್ಟ ಪ್ರವರ್ಗ ಅಥವಾ ಆ ವಿಷಯದ ಶಿಕ್ಷಕ ಹುದ್ದೆ.
(ಇ) 'ವಲಯ' ಎಂದರೆ.-
(i) ವಲಯ-ಎ, ಎಲ್ಲಾ ಮಹಾನಗರ-ಪಾಲಿಕೆಗಳು, ನಗರ-ಪಾಲಿಕೆಗಳು, ನಗರ-ಸಭೆ, ಪುರ-ಸಭೆ, ಪಟ್ಟಣ-ಪಂಚಾಯಿತಿ, ಅಧಿಸೂಚಿತ ಪ್ರದೇಶಗಳು, ಪಟ್ಟಣ ಪಂಚಾಯತಿ ಪ್ರದೇಶಗಳು ಮತ್ತು ತಾಲ್ಲೂಕು ಕೇಂದ್ರ ಸ್ಥಾನದ ವ್ಯಾಪ್ತಿಯೊಳಗೆ ಬರುವ ಪ್ರದೇಶಗಳನ್ನು ಒಳಗೊಳ್ಳುತ್ತದೆ.
(ii) ವಲಯ-ಬಿ, ಬೆಂಗಳೂರು ನಗರ ಎಲ್ಲೆ ವ್ಯಾಪ್ತಿಯಿಂದ 20 ಕೀ.ಮಿ, ಇತರ ನಗರಪಾಲಿಕೆ ವ್ಯಾಪ್ತಿಯಿಂದ 15 ಕೀ.ಮಿ, ಜಿಲ್ಲಾ ಕೇಂದ್ರ ಸ್ಥಾನದಿಂದ, ನಗರಪಾಲಿಕೆ ವ್ಯಾಪ್ತಿಯಿಂದ 10 ಕೀ. ಮೀ, ಮತ್ತು ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ, ಅಧಿಸೂಚಿತ ಪ್ರದೇಶಗಳು ತಾಲ್ಲೂಕು ಕೇಂದ್ರ ಕಚೇರಿಗಳಿಂದ 5 ಕೀ. ಮೀ, ವ್ಯಾಪ್ತಿಯೊಳಗೆ ಬರುವ ಪ್ರದೇಶಗಳನ್ನು ಒಳಗೊಳ್ಳುತ್ತದೆ.
(iii) ವಲಯ-ಸಿ, ಇದು, ವಲಯ-ಎ ಮತ್ತು ವಲಯ-ಬಿ, ಅಡಿಯಲ್ಲಿ ಬರುವ ಪ್ರದೇಶಗಳನ್ನು ಹೊರತುಪಡಿಸಿದ ಪ್ರದೇಶಗಳನ್ನು ಒಳಗೊಳ್ಳುತ್ತದೆ.
(2) ಈ ನಿಯಮಗಳಲ್ಲಿ ಬಳಸಿದ ಆದರೆ ಪರಿಭಾಷಿಸದೆ ಇರುವ ಪದಗಳು ಮತ್ತು ಪದಾವಳಿಗಳು, ಅಧಿನಿಯಮದಲ್ಲಿ ಅವುಗಳಿಗೆ ನೀಡಿದ ಅದೇ ಅರ್ಥವನ್ನು ಹೊಂದಿರತಕ್ಕದ್ದು.