ಕನಿಷ್ಟ ಸೇವಾ ಅವಧಿಯನ್ನು ಪೂರ್ಣಗೊಳಿಸಿರುವ ಪ್ರತಿಯೊಬ್ಬ ಶಿಕ್ಷಕನಿಗೆ ವರ್ಗಾವಣೆ ಪ್ರಕ್ರಿಯೆ ನಿಯಂತ್ರಣ ಅಧಿಕಾರಿಯಿಂದ ಅಧಿಸೂಚಿಸಲಾದ ಕಾಲಾವಧಿಯೊಳಗೆ ಕೋರಿಕೆಯ ವರ್ಗಾವಣೆಗೆ ಮತ್ತು/ಅಥವಾ ಸುವ್ಯವಸ್ಥೆಗೊಳಿಸುವಿಕೆ/ವಲಯ ವರ್ಗಾವಣೆಯಿಂದ ವಿನಾಯಿತಿಯನ್ನು ಪಡೆಯಲು ಆನ್ಲೈನ್ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನು ಒದಗಿಸತಕ್ಕದ್ದು.
(i) ಶಿಕ್ಷಕರ ವರ್ಗಾವಣೆಗಾಗಿ ಕೋರಿಕೆಯ ಅರ್ಜಿಯನ್ನು ಸಲ್ಲಿಸುವಾಗ, 10ನೇ ನಿಯಮದ ಮೇರೆಗೆ ಸಂಬಂಧಪಟ್ಟ ದಸ್ತಾವೇಜುಗಳೊಂದಿಗೆ ಅಧಿನಿಯಮದ 10ನೇ ಪ್ರಕರಣದಲ್ಲಿ ನಿರ್ದಿಷ್ಟಪಡಿಸಲಾದ ಯಾವುದೇ ವರ್ಗಗಳ ಮೇರೆಗೆ ಆದ್ಯತೆಯನ್ನು ಸಹ ಕೋರಬಹುದು;
(ii) 10ನೇ ನಿಯಮದಲ್ಲಿ, ನಿರ್ದಿಷ್ಟಪಡಿಸಲಾದ ಸಂಬಂಧಪಟ್ಟ ದಾಖಲೆಗಳೊಂದಿಗೆ ಸಮರ್ಪಕ ಮರುಹಂಚಿಕೆ/ವಲಯ ವರ್ಗಾವಣೆಯಿಂದ ವಿನಾಯಿತಿ ಪಡೆಯುವ ಅರ್ಜಿಯಿಂದಲೂ ಸಹ ಆನ್ಲೈನ್ನಲ್ಲಿ ಕ್ಲೇಮು ಮಾಡತಕ್ಕದ್ದು;
(iii) ಆದ್ಯತೆ ಅಥವಾ ವಿನಾಯಿತಿಯನ್ನು ಕಾಲಮಿತಿಯೊಳಗೆ ಕ್ಲೇಮು ಮಾಡದಿದ್ದರೆ, ಆಗ ಅದನ್ನು ನಂತರ ಹಂತದಲ್ಲಿ ಪರಿಗಣಿಸತಕ್ಕದ್ದಲ್ಲ; ಮತ್ತು
(iii) ಶಿಕ್ಷಕರ ಸಮರ್ಪಕ ಮರುಹಂಚಿಕೆ ಅಥವಾ ವಲಯ ವರ್ಗಾವಣೆಗಳ ಮೇರೆಗೆ ವರ್ಗಾವಣೆಗೆ ಗುರುತಿಸಲಾದ ಶಿಕ್ಷಕರು, ಕೋರಿಕೆಯ ವರ್ಗಾವಣೆಗಾಗಿ ಅರ್ಜಿಯನ್ನು ಸಹ ಸಲ್ಲಿಸಬಹುದು. ಶಿಕ್ಷಕರ ಸಮರ್ಪಕ ಮರುಹಂಚಿಕೆ ಅಥವಾ ವಲಯ ವರ್ಗಾವಣೆಗೆ ಮುಂಚೆ ಅವರು ಕಾರ್ಯನಿರ್ವಹಿಸುತ್ತಿರುವ. ಶಾಲೆಯ ಆಧಾರದ ಮೇಲೆ. ಅವರ ಅರ್ಹತೆ ಮತ್ತು ಕೃಪಾಂಕವನ್ನು ಪರಿಗಣಿಸತಕ್ಕದ್ದು.