(ಎ) ಶಿಕ್ಷಕರ ವರ್ಗಾವಣೆ ಉದ್ದೇಶಕ್ಕಾಗಿ- (ಸಿ ವಲಯದಲ್ಲಿ ಸಲ್ಲಿಸಿದ ಸೇವೆಯ ವರ್ಷಗಳ ಸಂಖ್ಯೆ x3008) + (ಬಿ ವಲಯದಲ್ಲಿ ಸಲ್ಲಿಸಿದ ಸೇವೆಯ ವರ್ಷಗಳ ಸಂಖ್ಯೆ x2008) + (ಎ ವಲಯದಲ್ಲಿ ಸಲ್ಲಿಸಿದ ಸೇವೆಯ ವರ್ಷಗಳ ಸಂಖ್ಯೆ ೬1ಅಂಕ)* (ಮೂರು ವರ್ಷಗಳಿಗೆ ಮೀರಿ ಹಾಲಿ ಶಾಲೆಯಲ್ಲಿ ಸಲ್ಲಿಸಿದ ಸೇವೆಯ ವರ್ಷಗಳ ಸಂಖ್ಯೆ x1 ಅಂಕ).
ಟಿಪ್ಪಣಿ.- ಆರು ತಿಂಗಳ (180 ದಿನಗಳ) ಹಾಗೂ ಮೇಲಿನ ಸೇವೆಯನ್ನು ಒಂದು ಪೂರ್ಣ ವರ್ಷವೆಂದು ಪರಿಗಣಿಸತಕ್ಕದ್ದು. 30" ಆರು ತಿಂಗಳಿಗಿಂತ (180 ದಿನಗಳು) ಕಡಿಮೆ ಸೇವೆಯನ್ನು 'ಶೂನ್ಯ' ವರ್ಷದ ಸೇವೆಯೆಂದು ಪರಿಗಣಿಸತಕ್ಕದ್ದು.
(ಬಿ) Bede ಅಂಕಗಳನ್ನು (ವೇಯ್ದೆಡ್ ಅಂಕಗಳು) ಇಲಾಖೆಯ ವೆಬ್ಸೈಟ್ನಲ್ಲಿ, ಶಿಕ್ಷಕರಿಗೆ ಸಂಬಂಧಪಟ್ಟ ವೇತನ ಬಟವಾಡೆ ಮಾಡುವ ಅಧಿಕಾರಿಯು, (ಇದರಲ್ಲಿ ಇನ್ನು ಮುಂದೆ ಡಿಡಿಓ ಎಂದು ಉಲ್ಲೇಖಿಸಲಾಗಿದೆ) ಹಿಂದಿನ ವರ್ಷದ ಡಿಸೆಂಬರ್ ತಿಂಗಳವರೆಗೂ ನವೀಕರಿಸಿದ ಶಿಕ್ಷಕನ ಸೇವಾ ವಿವರಗಳ ಆಧಾರದ ಮೇಲೆ ಗಣನೆಗೆ ತೆಗೆದುಕೊಳ್ಳತಕ್ಕದ್ದು.
(ಸಿ) . ಯಾರೇ ಇಬ್ಬರು ಶಿಕ್ಷಕರ ಅಂಕ, ಒಂದೇ ಆಗಿದ್ದರೆ, ಆಗ ಜ್ಯೇಷ್ಠತೆಯನ್ನು ಜನ್ಮ ದಿನಾಂಕದ ಆಧಾರದ ಮೇಲೆ ನಿರ್ಧರಿಸುವುದು. ಜನ್ಮ ದಿನಾಂಕವು ಸಹ ಒಂದೇ ಆಗಿದ್ದರೆ ಆಗ ಸೇವೆಗೆ ಸೇರಿದ ದಿನಾಂಕದ ಆಧಾರದ ಮೇಲೆ ಜ್ಯೇಷ್ಠತೆಯನ್ನು ನಿರ್ಧರಿಸುವುದು.
(ಡಿ)... ಇಲಾಖೆಯು, ತನ್ನ ವೆಬ್ಸೈಟ್ನಲ್ಲಿ, ಪ್ರತಿಯೊಂದು ವರ್ಷದ ಜನವರಿಯ ಮೊದಲ ಹದಿನೈದು ದಿನದಲ್ಲಿ ಎಲ್ಲಾ ಶಿಕ್ಷಕರ ವೇಯ್ದೆಡ್ ಅಂಕಗಳ ತಾತ್ಕಾಲಿಕ ಪಟ್ಟಿಯನ್ನು ಪ್ರಕಟಿಸತಕ್ಕದ್ದು. ಎಲ್ಲಾ ಶಿಕ್ಷಕರು, ಕೃಪಾಂಕಗಳಲ್ಲಿ ಯಾವುದೇ ವ್ಯತ್ಯಾಸಗಳು ಉಂಟಾದ ಸಂದರ್ಭಗಳಲ್ಲಿ ಅವರ ಸೇವಾ ವಿವರಗಳನ್ನು ಸರಿಪಡಿಸುವುದಕ್ಕಾಗಿ. ಅರ್ಜಿ ಸಲ್ಲಿಸುವ ಆಯ್ಕೆಯನ್ನು ಹೊಂದಿರತಕ್ಕದ್ದು. ಸರಿಪಡಿಸುವುದಕ್ಕಾಗಿ ಅರ್ಜಿಯನ್ನು, ಸಿಂಧುವಾದ ದಸ್ತಾವೇಜುಗಳೊಂದಿಗೆ. ಸಂಬಂಧಪಟ್ಟ ಡಿಡಿಓ ಗೆ. ಸಲ್ಲಿಸತಕ್ಕದ್ದು. ಶಿಕ್ಷಕನು, ಸಿಂಧುವಾದ ದಸ್ತಾವೇಜುಗಳನ್ನು ಹಾಜರುಪಡಿಸುವ ಮೂಲಕ ಇತರ ಶಿಕ್ಷಕರ ಕೃಪಾಂಕಕ್ಕೆ ಆಕ್ಷೇಪಣೆಯನ್ನು ಸಹ ಸಲ್ಲಿಸಬಹುದು. ಸರಿಪಡಿಸುವುದಕ್ಕಾಗಿ ಅಥವಾ ಆಕ್ಷೇಪಣೆಗಳಿಗಾಗಿ ಸಲ್ಲಿಸುವ ಅರ್ಜಿಯನ್ನು, ಜನವರಿ ಮುಕ್ತಾಯವರೆಗೂ ಸಲ್ಲಿಸತಕ್ಕದ್ದು. ಜನವರಿತಿಂಗಳ ನಂತರ ಸರಿಪಡಿಸುವುದಕ್ಕಾಗಿ ಅಥವಾ ಆಕ್ಷೇಪಣೆಗಾಗಿ ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸತಕ್ಕದ್ದಲ್ಲ. ಅ
(ಇ) ಸಂಬಂಧಪಟ್ಟ ಡಿಡಿಓ ಇವರು, ಸರಿಪಡಿಸುವ ಅಥವಾ ಆಕ್ಷೇಪಣೆಯ ಪ್ರತಿಯೊಂದು ಅರ್ಜಿಯನ್ನು ಸತ್ಯಾಪನೆ ಮಾಡತಕ್ಕದ್ದು ಮತ್ತು ಸಿಂಧುವಾದ ನ್ಯಾಯಸಮರ್ಥದೊಂದಿಗೆ ಅರ್ಜಿಯನ್ನು ಅಂಗೀಕರಿಸುವ ಅಥವಾ ತಿರಸ್ಕರಿಸುವ ಮೂಲಕ ಅಗತ್ಯ ಆದೇಶವನ್ನು ಹೊರಡಿಸತಕ್ಕದ್ದು ಮತ್ತು ಅದನ್ನು ಫೆಬ್ರವರಿ 15 ರೊಳಗೆ ಇಲಾಖೆಯ ವೆಬ್ಸೈಟ್ನಲ್ಲಿ ಪ್ರಕಟಿಸತಕ್ಕದ್ದು.
(ಎಫ್) ಸಂಬಂಧಪಟ್ಟ ಡಿಡಿಓ ರವರು ಆದೇಶವನ್ನು ಹೊರಡಿಸಿದ ನಂತರ, ಆತನು ಅಂತಿಮ ಕೃಪಾಂಕಗಳನ್ನು ವೆಬ್ಸೈಟ್ನಲ್ಲಿ ಪ್ರಕಟಿಸತಕ್ಕದ್ದು. ಒಂದು ಬಾರಿ ಅಂತಿಮ ಕೃಪಾಂಕಗಳನ್ನು ಪ್ರಕಟಿಸಿದಲ್ಲಿ ವರ್ಗಾವಣೆಯ ಪ್ರಕ್ರಿಯೆಯು ಮುಗಿಯುವರೆಗೂ ಅದನ್ನು ಪರಿಗಣಿಸತಕ್ಕದ್ದು.
(ಜಿ). ಅನಿವಾರ್ಯ ಕಾರಣಗಳ ನಿಮಿತ್ತ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಮೇಲಿನ ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೆ ಅದನ್ನು, ವರ್ಗಾವಣೆ ಸೂಚಿಯ ಪ್ರಕಟಣೆಯ ಮುನ್ನ ಪೂರ್ಣಗೊಳಿಸತಕ್ಕದ್ದು.