ಪ್ರತಿಯೊಂದು ವಿಧದ ವರ್ಗಾವಣೆಯ ಮುಕ್ತಾಯದ ನಂತರ, ವರ್ಗಾವಣೆಗೊಂಡ ಶಿಕ್ಷಕರ ಪಟ್ಟಿಯಲ್ಲಿ ಅವರ ಹೆಸರಿನ ಮುಂದೆ ವರ್ಗಾವಣೆಗೊಂಡ ಸ್ಥಳಗಳನ್ನು ತೋರಿಸುವಂತೆ, ಸೂಚನಾ ಫಲಕದ ಮೇಲೆ ಪ್ರದರ್ಶಿಸತಕ್ಕದ್ದು. ಪಟ್ಟಿಯನ್ನು ಪ್ರದರ್ಶಿಸಿದ ತರುವಾಯ ವರ್ಗಾವಣೆ ಮಾಡತಕ್ಕದ್ದಲ್ಲ. ಪಟ್ಟಿಯನ್ನು ಪ್ರಕಟಿಸಿದ ತರುವಾಯ ವರ್ಗಾವಣೆ ನಿಯಂತ್ರಣ ಅಧಿಕಾರಿಯ ಪೂರ್ವ ಅನುಮೋದನೆಯಿಲ್ಲದೆ, ಯಾವುದಾದರೂ ವರ್ಗಾವಣೆಗಳನ್ನು ಮಾಡಿದರೆ, ಸಂಬಂಧಿಸಿದ ಸಕ್ಷಮ ಪ್ರಾಧಿಕಾರವನ್ನು ವೈಯಕ್ತಿಕ ಹೊಣೆಗಾರರನ್ನಾಗಿ ಮಾಡಿ, ಅವರ ವಿರುದ್ಧ ಶಿಸ್ತುಕ್ರಮವನ್ನು ಕೈಗೊಳ್ಳತಕ್ಕದ್ದು.
Loading…