ಪ್ರತಿಯೊಂದು ಪರ್ಯಾಯ ವರ್ಷದಲ್ಲಿ ವಿದ್ಯಾರ್ಥಿಗಳ ಸಂಖ್ಯಾಬಲದ ಆಧಾರದ ಮೇಲೆ ಜಿಲ್ಲೆಯಲ್ಲಿ ಮಂಜೂರಾದ ಹುದ್ದೆಗಳನ್ನು ಶಾಲಾವಾರು ಹೆಚ್ಚುವರಿ ಶಿಕ್ಷಕರ ಸಮರ್ಪಕ ಮರುಹಂಚಿಕೆ ಮಾಡತಕ್ಕದ್ದು. ಹೆಚ್ಚುವರಿ ಹುದ್ದೆಗಳನ್ನು ಈ ಉದ್ದೇಶಕ್ಕಾಗಿ ಸರ್ಕಾರದಿಂದ ಅಧಿಸೂಚಿಸಲಾದ ಪ್ರಕ್ರಿಯೆ ಪ್ರಕಾರ ಅಗತ್ಯವಿರುವ ಶಾಲೆಗಳಿಗೆ ಮರು ನಿಯೋಜಿಸತಕ್ಕದ್ದು. ಪ್ರಕ್ರಿಯೆ ಪೂರ್ಣಗೊಂಡ ನಂತರ, ಜಿಲ್ಲೆಯ ಉಪನಿರ್ದೇಶಕರು ಆಯಾ ಶೈಕ್ಷಣಿಕ ವರ್ಷಕ್ಕೆ ಪ್ರತಿಯೊಂದು ಶಾಲೆಯಲ್ಲಿ ಮಂಜೂರಾದ ಹುದ್ದೆಗಳಿಗೆ ಸಂಬಂಧಿಸಿದಂತೆ ಆದೇಶಗಳನ್ನು ನೀಡತಕ್ಕದ್ದು.
Loading…