(1) ಶಿಕ್ಷಕರ ಸಮರ್ಪಕ ಮರುಹಂಚಿಕೆಗೊಳಿಸುವುದರ ಮೇರೆಗೆ ವಿನಾಯಿತಿ ನೀಡಬೇಕಾದ ಶಿಕ್ಷಕರ ಪಟ್ಟಿಯನ್ನು ಅಂತಿಮಗೊಳಿಸಿದ ತರುವಾಯ ಶಾಲೆಯಲ್ಲಿ ಆ ವಿಷಯದ ಅತ್ಯಂತ ಹಿರಿಯ ಶಿಕ್ಷಕನನ್ನು, ವಿನಾಯಿತಿ. ನೀಡಿರುವ ಶಿಕ್ಷಕರನ್ನು ಹೊರತುಪಡಿಸಿ, 388d ಸಮರ್ಪಕ ಮರುಹಂಚಿಕೆಗೊಳಿಸುವುದರಮೇರೆಗೆ ವರ್ಗಾವಣೆ ಮಾಡಲು ಪರಿಗಣಿಸತಕ್ಕದ್ದು. ಆ ವಿಷಯದ ಎಲ್ಲಾ ಶಿಕ್ಷಕರು ಶಿಕ್ಷಕರ ಸಮರ್ಪಕ ಮರುಹಂಚಿಕೆಗೊಳಿಸುವುದರಿಂದ ವಿನಾಯಿತಿಗೆ ಅರ್ಹರಾದರೆ, ಆಗ ಗಂಭೀರ ಖಾಯಿಲೆಗೆ ಒಳಗಾಗಿರುವ ಅಥವಾ ದೈಹಿಕವಾಗಿ ಅಂಗವಿಕಲರಾದ ಶಿಕ್ಷಕರನ್ನು ಹೊರತುಪಡಿಸಿ, ವಿನಾಯಿತಿ ಷರತ್ತನ್ನು ಪರಿಗಣಿಸದೆ ಅತ್ಯಂತ ಹಿರಿಯ ಶಿಕ್ಷಕರನ್ನು ಅದರ ವಿನಾಯಿತಿ ಗಣನೆಗೆ ತೆಗೆದುಕೊಳ್ಳದೆ ಪರಿಗಣಿಸತಕ್ಕದ್ದು. ಆದಾಗ್ಯೂ, ಎಲ್ಲಾ ಶಿಕ್ಷಕರು “ಗಂಭೀರ ಖಾಯಿಲೆಗೆ ಒಳಗಾದವರ ಹಾಗೂ ದೈಹಿಕವಾಗಿ ಅಂಗವಿಕಲರ” ಪ್ರವರ್ಗಕ್ಕೆ ಸೇರಿದವರಾಗಿದ್ದರೆ, ಆಗ ಅವರ ಪೈಕಿ ಅತ್ಯಂತ ಹಿರಿಯ ಶಿಕ್ಷಕನನ್ನು ಸಮರ್ಪಕ ಮರುಹಂಚಿಕೆಯ ಮೇರೆಗೆ ಪರಿಗಣಿಸತಕ್ಕದ್ದು.
(2)... (0ನೇ ಉಪ-ನಿಯಮದಲ್ಲಿ, ಹೇಳಲಾದ ಸೂಕ್ತ ಕಾರ್ಯವಿಧಾನವನ್ನು ಅನುಸರಿಸಿದ ತರುವಾಯ, ಸಂಬಂಧಪಟ್ಟ ಜಿಲ್ಲೆಯ ಉಪ-ನಿರ್ದೇಶಕರು, ಸಮರ್ಪಕ ಮರುಹಂಚಿಕೆಯ ಮೇರೆಗೆ ವರ್ಗಾವಣೆಯಾಗುವ ತಾಲ್ಲೂಕುವಾರು ಶಿಕ್ಷಕರ ಅಂತಿಮ ಪಟ್ಟಿಯನ್ನು ಪ್ರಕಟಿಸತಕ್ಕದ್ದು.