ವಲಯ ಮತ್ತು ಕೋರಿಕೆ ವರ್ಗಾವಣೆಗಳ ಮೇರೆಗೆ, ಕಂಪ್ಯೂಟರೈಸ್ಟ್ ಕೌನ್ಸಿಲಿಂಗ್ ಪ್ರಕ್ರಿಯೆ ಮುಖಾಂತರ ವರ್ಗಾವಣೆ ನಿರ್ವಹಣೆಯನ್ನು, 5ನೇ ನಿಯಮದ ಮೇರೆಗೆ ವರ್ಗಾವಣೆಗಳ ಗರಿಷ್ಠ ಪರಿಮಿತಿ ಸಂಖ್ಯೆಯು ತಲುಪುವರೆಗೂ ಅಥವಾ ಎಲ್ಲಾ ಅರ್ಜಿದಾರರು ಮುಕ್ತಾಯವಾಗುವವರೆಗೆ ವರ್ಗಾವಣೆ ಪ್ರಕ್ರಿಯೆ ನಿಯಂತ್ರಣ ಅಧಿಕಾರಿಯು ನಿಗಧಿಪಡಿಸುವ ಕಾಲಮಿತಿವರೆಗೆ ಮುಂದುವರೆಯಶಕ್ಕದ್ದು. 24. ಪರಸ್ಪರ ವರ್ಗಾವಣೆಗಳು. () ಅರ್ಹತೆ:
(ಎ) ಕನಿಷ್ಠ ಏಳು ವರ್ಷಗಳ ಸೇವಾವಧಿಯನ್ನು ಪೂರ್ಣಗೊಳಿಸಿರಬೇಕು:
(ಬಿ) ನಿವೃತ್ತಿಗಿಂತ ಮುಂಚೆ, ಕನಿಷ್ಠ ಐದು ವರ್ಷಗಳ ಉಳಿಕೆ ಸೇವೆಯನ್ನು ಹೊಂದಿರಬೇಕು:
(ಸಿ) ಈ ಮುಂಚೆ ಪರಸ್ಪರ ವರ್ಗಾವಣೆ ಮಾಡಿರತಕ್ಕದ್ದಲ್ಲ.
(ಡಿ) ಇಬ್ಬರೂ ಶಿಕ್ಷಕರು. ಪರಸ್ಪರ ವರ್ಗಾವಣೆ. ಕೋರಿದಾಗ, ಪ್ರತಿಯೊಬ್ಬರು ಕೆಜಿಐಡಿ ಸಂಖ್ಯೆಗಳ ಮುಖಾಂತರ ಅವರ ಅರ್ಜಿಗಳನ್ನು ಲಿಂಕ್ ಮಾಡುವ ಮೂಲಕ ವರ್ಗಾವಣೆ ಪ್ರಕ್ರಿಯೆ ನಿಯಂತ್ರಣ ಅಧಿಕಾರಿಯಿಂದ ನಿರ್ದಿಷ್ಟ ಪಡಿಸಿದ ರೀತಿಯಲ್ಲಿ ಶಿಕ್ಷಕ ವರ್ಗಾವಣೆ ಪೋರ್ಟಲ್ನಲ್ಲಿ ಗೊತ್ತು ಪಡಿಸಿದ ಸಮಯದಲ್ಲಿ ಅರ್ಜಿಯನ್ನು ಸಲ್ಲಿಸತಕ್ಕದ್ದು.
(ii) ಸಕ್ಷಮ ಪ್ರಾಧಿಕಾರವು, ಅರ್ಹ ಸಂದರ್ಭಗಳ (ಪ್ರಕರಣಗಳ) ಅಂತಿಮ ಪಟ್ಟಿಯನ್ನು ಪ್ರಕಟಿಸತಕ್ಕದ್ದು ಮತ್ತು ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ಕೈಗೊಳ್ಳತಕ್ಕದ್ದು.