ವರ್ಗಾವಣೆ ಘಟಕದ ಹೊರಗೆ ವರ್ಗಾವಣೆಗಾಗಿ ಕೋರಿದ ಶಿಕ್ಷಕನನ್ನು, ಈ ಮುಂದಿನ ಷರತ್ತುಗಳಿಗೊಳಪಟ್ಟು ಪರಿಗಣಿಸಬಹುದು, ಎಂದರೆ:-
ಶೇಕಡಾ ಇಪ್ಪತ್ತೈದಕ್ಕಿಂತ ಹೆಚ್ಚು ಖಾಲಿ ಇರುವ ತಾಲ್ಲೂಕಿನಿಂದ ಸ್ವೀಕರಿಸಿದ ಅರ್ಜಿಯನ್ನು ಪರಿಗಣಿಸತಕ್ಕದ್ದಲ್ಲ;
ಕನಿಷ್ಠ ಸೇವಾವಧಿಯನ್ನು ಪೂರ್ಣಗೊಳಿಸಿರಬೇಕು;
ಆತನು ತನ್ನ ಜ್ಯೇಷ್ಠತೆಯನ್ನು ಕಳೆದುಕೊಳ್ಳತಕ್ಕದ್ದು ಮತ್ತು ಆತನು ತಾನು ವರ್ಗಾವಣೆಯಾಗಿರುವ ಹೊಸ ಜ್ಯೇಷ್ಠತೆಯ ಘಟಕದಲ್ಲಿ ವೃಂದದಲ್ಲಿ ಎಲ್ಲರಿಗಿಂತಲೂ ಕೆಳ ಸ್ಥಾನದಲ್ಲಿರತಕ್ಕದ್ದು.
(4) ಅತನನ್ನು, ವಿದ್ಯಾರ್ಥಿ ಶಿಕ್ಷಕ ಅನುಪಾತದ ಪ್ರಕಾರ ಹೆಚ್ಚುವರಿ ಶಿಕ್ಷಕರಿರುವ ಘಟಕಕ್ಕೆ ನಿಯೋಜಿಸತಕ್ಕದ್ದಲ್ಲ; ಮತ್ತು
(5) 6ನೇ ಪ್ರಕರಣದಲ್ಲಿ ನಿರ್ದಿಷ್ಟಪಡಿಸಿದ ಇತರೆ ಷರತ್ತನ್ನು ಪಾಲಿಸತಕ್ಕದ್ದು.