(1) ಎಲ್ಲ ವರ್ಗಾವಣೆಗಳನ್ನು, ಶಿಕ್ಷಕ ವರ್ಗಾವಣೆ ಪೋರ್ಟಲ್ನಲ್ಲಿ ಮಾಹಿತಿ ತಂತ್ರಜ್ಞಾನದ ಮುಖಾಂತರ ಆನ್ಲೈನ್ ಕಂಪ್ಯೂಟರೈಸ್ಟ್ ಕೌನ್ಸಿಲಿಂಗ್ ಮೂಲಕ ಮಾತ್ರ ನಡೆಸತಕ್ಕದ್ದು.
(2) . ಆದ್ಯತಾ ಪಟ್ಟಿಯಲ್ಲಿರುವ ಅರ್ಜಿದಾರರಿಗೆ, ಪತ್ರಿಕಾಪ್ರಕಟಣೆ, ರೇಡಿಯೋ ಮತ್ತು ದೂರದರ್ಶನದಲ್ಲಿ ಪ್ರಕಟಣೆಗಳ ಮುಖಾಂತರ ಕೌನ್ಸಿಲಿಂಗ್ಗಾಗಿ ದಿನಾಂಕಗಳ ಬಗ್ಗೆ ತಿಳಿಸತಕ್ಕದ್ದು. ಅರ್ಜಿದಾರನನ್ನು ಕೌನ್ಸಿಲಿಂಗ್ ದಿನಾಂಕದಂದು ಅವರ ಆದ್ಯತಾ ಕ್ರಮದಲ್ಲಿ ಕರೆಯತಕ್ಕದ್ದು ಮತ್ತು ನಂತರ ಕಂಪ್ಯೂಟರ್ ಪರದೆಯ ಮೇಲೆ ಪ್ರದರ್ಶಿಸಲಾದಂತೆ ಅಂಥ ಕಾಲಾವಧಿಯಲ್ಲಿ ಲಭ್ಯವಿರುವ ಖಾಲಿ ಹುದ್ದೆಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಲು ಕೇಳತಕ್ಕದ್ದು.