(i) ಸಕ್ಷಮ ಪ್ರಾಧಿಕಾರವು ಜ್ಯೇಷ್ಠತಾ ಘಟಕದೊಳಗೆ ವರ್ಗಾವಣೆಗಾಗಿ ಶಿಕ್ಷಕರ ಅಂತಿಮ ಪಟ್ಟಿಯನ್ನು 20 ದ್ವಪಡಿಸತಕ್ಕದ್ದು. ಮತ್ತು ಪ್ರಕಟಿಸತಕ್ಕದ್ದು.
(ii) Be. ಇಪ್ಪತ್ತೈದಕ್ಕಿಂತ ಹೆಚ್ಚು ಖಾಲಿ ಇರುವ ಸ್ಥಾನಗಳಿಗೆ ತಾಲ್ಲೂಕಿನಿಂದ ಸ್ವೀಕರಿಸಲಾದ ಅರ್ಜಿಯನ್ನು ವರ್ಗಾವಣೆಗಾಗಿ ಪರಿಗಣಿಸತಕ್ಕದ್ದಲ್ಲ.
ವರ್ಗಾವಣೆಗಳಿಗಾಗಿ ಕೌನ್ಸಿಲಿಂಗ್ನ್ನು, ಅಧಿನಿಯಮದ 10ನೇ ಪ್ರಕರಣದ (i) ರಿಂದ (v) ಖಂಡಗಳು ಮತ್ತು ಸಾಮಾನ್ಯ ವರ್ಗಗಳ ಅಡಿಯಲ್ಲಿ ಅನುಕ್ರಮವಾಗಿ ಕೈಗೊಳ್ಳತಕ್ಕದ್ದು.
ಆದ್ಯತೆಯನ್ನು, ಪ್ರತಿಯೊಂದು ಪ್ರವರ್ಗದೊಳಗೆ, ಆದ್ಯತೆಯ ಕ್ರಮಾನುಸಾರ ತೀರ್ಮಾನಿಸತಕ್ಕದ್ದು.
ಅಧಿನಿಯಮದ 10ನೇ ಪ್ರಕರಣದ (v) ನೇ ಖಂಡದ ಮೇರೆಗೆ ತೆಗೆದುಕೊಂಡ ಜ್ಯೇಷ್ಠತಾ ಘಟಕದೊಳಗೆ ಕೋರಿಕೆ ವರ್ಗಾವಣೆಗಳ ಒಟ್ಟು ಸಂಖ್ಯೆಯನ್ನು ಮತ್ತು ಸಾಮಾನ್ಯ ವರ್ಗಾವಣೆಗಳನ್ನು, 5ನೇ ನಿಯಮದ ಮೇರೆಗೆ ನಿರ್ದಿಷ್ಟ ಪಡಿಸಿದ ವರ್ಗಾವಣೆ ಮಿತಿಯೊಳಗೆ ಮಾಡತಕ್ಕದ್ದು.
ಕೌನ್ಸಿಲಿಂಗ್ಗೆ ಹಾಜರಾಗುವ ಶಿಕ್ಷಕರು, ಜ್ಯೇಷ್ಠತಾ ಘಟಕದೊಳಗಿನ ಯಾವುದೇ ಖಾಲಿ ಸ್ಥಾನವನ್ನು ಆಯ್ಕೆ ಮಾಡಿಕೊಳ್ಳಬಹುದು. ವರ್ಗಾವಣೆ ಮಾಡುವ ಪ್ರಾಧಿಕಾರವು, ಸ್ವತಃ ಕೌನ್ಸಿಲಿಂಗ್ ಕೇಂದ್ರದಲ್ಲಿ ಕಂಪ್ಯೂಟರ್ ಜನರೇಟೆಡ್ ವರ್ಗಾವಣೆ ಆದೇಶವನ್ನು ನೀಡತಕ್ಕದ್ದು.
ಸೂಕ್ತ ಖಾಲಿ ಹುದ್ದೆ ಲಭ್ಯವಿಲ್ಲದಿದ್ದರೆ, ಶಿಕ್ಷಕ ಹಾಲಿ ಇರುವ ಹುದ್ದೆಯಲ್ಲಿ ಮುಂದುವರೆಯಲು ಆಯ್ಕೆ ಮಾಡಿಕೊಳ್ಳಬಹುದು. ಈ ಸಂಬಂಧ ಶಿಕ್ಷಕನಿಂದ ವಚನಾದೇಶವನ್ನು ವರ್ಗಾವಣೆ ಪ್ರಾಧಿಕಾರವು ಕೌನ್ಸಿಲಿಂಗ್ ಕೇಂದ್ರದಲ್ಲಿ ಪಡೆದುಕೊಳ್ಳತಕ್ಕದ್ದು. ಆದಾಗ್ಯೂ, ಖಾಲಿ ಹುದ್ದೆಯನ್ನು ಒಂದು ಬಾರಿ ಆಯ್ಕೆ ಮಾಡಿಕೊಂಡರೆ ಅದನ್ನು ಮಾರ್ಪಾಡು ಮಾಡತಕ್ಕದ್ದಲ್ಲ ಅಥವಾ ರದ್ದುಗೊಳಿಸತಕ್ಕದ್ದಲ್ಲ.
ಜಿಲ್ಲೆಯೊಳಗೆ. ವರ್ಗಾವಣೆಗೆ, ಕೋರಿಕೆಗಳನ್ನು, . PAOor’s ಮೊದಲನೆ. ಸುತ್ತಿನಲ್ಲಿ (vii) ಪರಿಗಣಿಸತಕ್ಕದ್ದು, ಜಿಲ್ಲೆಯ ಹೊರಗೆ ವರ್ಗಾವಣೆಗೆ ಕೋರಿಕೆಗಳನ್ನು ಕೌನ್ಸಿಲಿಂಗ್ನ ಮುಂದಿನ “ ಸುತ್ತಿನಲ್ಲಿ ಪರಿಗಣಿಸತಕ್ಕದ್ದು.