ಸಾಮಾನ್ಯ ವರ್ಗಾವಣೆಗಳು ಮುಕ್ತಾಯಗೊಂಡ ನಂತರ, ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಯಾರೇ ಶಿಕ್ಷಕರು ಆಯ್ಕೆ ಮಾಡಿಕೊಳ್ಳದಿದ್ದರೆ ಮತ್ತು ವಿದ್ಯಾರ್ಥಿ ಶಿಕ್ಷಕರ ಅನುಪಾತದ ಆಧಾರದ ಮೇಲೆ ಮತ್ತು ಸಾರ್ವಜನಿಕ ಹಿತಾಸಕ್ತಿಯಲ್ಲಿ ತುಂಬಬೇಕೆಂದು ಅದು ಅಗತ್ಯಪಡಿಸಿದಲ್ಲಿ ರಾಜ್ಯ ಸರ್ಕಾರವು, ಈ ಮುಂದಿನ ಷರತ್ತುಗಳಿಗೆ ಒಳಪಟ್ಟು, ಜ್ಯೇಷ್ಠತೆಯ ಅನುಕ್ರಮ ಘಟಕದೊಳಗೆ ಕನಿಷ್ಠ ಸೇವಾವಧಿಯನ್ನು ಪೂರ್ಣಗೊಳಿಸಿರುವಂತಹ ಅಂತಹ ಸ್ಥಳಕ್ಕೆ ಯಾರೇ ಶಿಕ್ಷಕನನ್ನು ವರ್ಗಾವಣೆ ಮಾಡಬಹುದು ಎಂದರೆ.-
(i) ವಿದ್ಯಾರ್ಥಿ ಶಿಕ್ಷಕರ ಅನುಪಾತವನ್ನು ಆಧಾರದ ಮೇಲೆ ಹೆಚ್ಚುವರಿ ಶಿಕ್ಷಕರನ್ನು ಹೊಂದಿರುವ ಶಾಲೆಗಳಿಂದ ಮಾತ್ರ ಮತ್ತು ಖಾಲಿ ಹುದ್ದೆಗಳ ಶೇಕಡಾ ಇಪ್ಪತ್ತಕ್ಕಿಂತ ಕಡಿಮೆ ಹೊಂದಿರುವ ತಾಲ್ಲೂಕುಗಳಿಂದ ಅಂತಹ ವರ್ಗಾವಣೆಯನ್ನು ಮಾಡಬಹುದು.
ಹಾಲಿ ಇರುವ ಖಾಲಿ ಸ್ಥಾನಗಳ ಶೇಕಡಾ ಇಪ್ಪತ್ತಕ್ಕಿಂತ ಅಧಿಕವಾಗಿರುವ ಜಿಲ್ಲೆ ಅಥವಾ ತಾಲ್ಲೂಕು ಅಥವಾ ಶಾಲೆಗೆ ಅಂತಹ ವರ್ಗಾವಣೆಯನ್ನು ಮಾಡತಕ್ಕದ್ದು;
ಸಂದರ್ಭಾನುಸಾರ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಮುಖಾಂತರ 3ನೇ ನಿಯಮದಲ್ಲಿ ನಿರ್ದಿಷ್ಟಪಡಿಸಲಾದಂತೆ. ಸಕ್ಷಮ ಪ್ರಾಧಿಕಾರದ ಶಿಫಾರಸ್ಸಿನ ಮೇಲೆ. ಅಂತಹ ವರ್ಗಾವಣೆಯನ್ನು ಮಾಡತಕ್ಕದ್ದು;
ಸಕ್ಷಮ ಪ್ರಾಧಿಕಾರವು, ಕೌನ್ಸಿಲಿಂಗ್ ಪ್ರಕ್ರಿಯೆ ಅವಧಿಯಲ್ಲಿ ಯಾರೂ ಆಯ್ಕೆ ಮಾಡದೆ ಇರುವಂಥ ಖಾಲಿ ಸ್ಥಳಗಳ ಪಟ್ಟಿಯನ್ನು ಪ್ರಕಟಿಸತಕ್ಕದ್ದು ಮತ್ತು ಸಾಮಾನ್ಯ ವರ್ಗಾವಣೆ ನಂತರ ಕೂಡಲೇ ಈ ನಿಯಮದ ಮೇರೆಗೆ ವಿದ್ಯಾರ್ಥಿ ಶಿಕ್ಷಕ ಅನುಪಾತದ ಅನುಸಾರ ಭರ್ತಿ ಮಾಡತಕ್ಕದ್ದು. ಸಕ್ಷಮ ಪ್ರಾಧಿಕಾರವು, ಈ ನಿಯಮದ ಅನುಸಾರ ಸಾಮಾನ್ಯ ವರ್ಗಾವಣೆ ಪೂರ್ಣಗೊಂಡ ನಂತರ ಹಾಗೇ ಅಧಿಸೂಚಿತ ಅಂತಹ ಖಾಲಿ ಸ್ಥಾನಗಳಿಗೆ ವರ್ಗಾವಣೆ ಮಾಡತಕ್ಕದ್ದು. ಮತ್ತು ಯಾವುದೇ. ಉಲ್ಲಂಘನೆಯನ್ನು ಗಂಭೀರವಾಗಿ ಅವಲೋಕಿಸತಕ್ಕದ್ದು. ಮತ್ತು ಪರಿಗಣಿಸತಕ್ಕದ್ದು;
ಸಕ್ಷಮ ಪ್ರಾಧಿಕಾರವು, ಶಿಕ್ಷಕರು ಹೆಚ್ಚುವರಿ ಇರುವ ಜಿಲ್ಲೆಗಳಲ್ಲಿ ಅಂತಹ ಹೆಚ್ಚುವರಿ ವಿಷಯವಾರು ಶಿಕ್ಷಕರ ಅಂಕಿ ಅಂಶಗಳನ್ನು ಪ್ರಕಟಿಸಬೇಕು. ಆದರೆ ಶಾಲೆಗಳ ಅಥವಾ ಶಿಕ್ಷಕರ ಹೆಸರುಗಳನ್ನು ಪ್ರಕಟಿಸತಕ್ಕದ್ದಲ್ಲ; ಮತ್ತು
(vi) ಸ್ಟುಡೆಂಟ್-ಅಚೀವ್ಮೆಂಟ್ ಟ್ರಾಕಿಂಗ್ ಸಿಸ್ಟಂ (ಎಸ್ಎಟಿಎಸ್) ಡಾಟಾ ಮತ್ತು ಟೀಚರ್ ಡಾಟಾ ಸಿಸ್ಟಂ (ಟಿಡಿಎಸ್) ಡಾಟಾವನ್ನು, ಶಾಲೆಗಳಲ್ಲಿ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಸಂಖ್ಯಾಬಲ ಅವರ ನಡುವಿನ ಅನುಪಾತವನ್ನು ನಿರ್ಧರಿಸುವುದಕ್ಕಾಗಿ ಮತ್ತು ಶಾಲೆಗಳಲ್ಲಿ ಅಥವಾ ತಾಲ್ಲೂಕುಗಳಲ್ಲಿ ಅಥವಾ ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ ಇತರ ಸಂಬಂಧಿಸಿದ ಅಂಕಿ ಅಂಶಗಳ ಮಾಹಿತಿಗೆ ಉಪಯೋಗಿಸತಕ್ಕದ್ದು.