(1) ಜಿಲ್ಲೆಯೊಳಗೆ ಕೋರಿಕೆ ವರ್ಗಾವಣೆ ಪೂರ್ಣಗೊಂಡ ತರುವಾಯ ವಲಯ ವರ್ಗಾವಣೆಯ ತಾಲ್ಲೂಕುವಾರು ಅಂತಿಮ ಪಟ್ಟಿಯಲ್ಲಿನ ಶಿಕ್ಷಕರನ್ನು, ತಾಲ್ಲೂಕಿನೊಳಗೆ ವಲಯ 'ಬಿ'. ಅಥವಾ ವಲಯ 'ಸಿ'.. ಯಲ್ಲಿರುವ ಖಾಲಿ. ಹುದ್ದೆಗಳಿಗೆ ವರ್ಗಾಯಿಸತಕ್ಕದ್ದು. ಯಾರೇ ಶಿಕ್ಷಕ ಖಾಲಿ ಹುದ್ದೆಯನ್ನು ತೆಗೆದುಕೊಳ್ಳಲು ನಿರಾಕರಿಸಿದರೆ, ಅಥವಾ ಕೌನ್ಸಿಲಿಂಗ್ದಿಂದ ವಿಮುಖನಾದರೆ, ಸಕ್ಷಮ ಪ್ರಾಧಿಕಾರವು, ಆ ತಾಲ್ಲೂಕಿನ ಕೌನ್ಸಿಲಿಂಗ್ ಪ್ರಕ್ರಿಯೆ ಪೂರ್ಣಗೊಂಡ ತರುವಾಯ ಪರ್ಯಾಯ ಕೌನ್ಸಿಲಿಂಗ್ ಮುಖಾಂತರ ಅಂಥ ಶಿಕ್ಷಕರನ್ನು ವರ್ಗಾಯಿಸತಕ್ಕದ್ದು.
(2) ತಾಲ್ಲೂಕಿನೊಳಗೆ ಶಿಕ್ಷಕರನ್ನು ವರ್ಗಾವಣೆ ಮಾಡಿದ ತರುವಾಯ, ತಾಲ್ಲೂಕುಗಳಲ್ಲಿ ಖಾಲಿ ಸ್ಥಾನಗಳು ಲಭ್ಯವಿರದೆ ಹಾಗೇ ಉಳಿದಿರುವ ಶಿಕ್ಷಕರನ್ನು ಸಂಯೋಜಿಸತಕ್ಕದ್ದು ಮತ್ತು ಹೊಸ ಆದ್ಯತಾ ಆದೇಶವನ್ನು ಜಿಲ್ಲೆಗೆ ಸಿದ್ಧಪಡಿಸತಕ್ಕದ್ದು. ಸಂಯೋಜಿತ ಪಟ್ಟಿಯಲ್ಲಿನ ಶಿಕ್ಷಕರನ್ನು, ಜಿಲ್ಲೆಯಲ್ಲಿ ಎಲ್ಲಾದರೂ ವಲಯ 'ಬಿ' ಅಥವಾ ವಲಯ “ಕ್ರ ಸಿ' ನಲ್ಲಿ ಯಾವುದೇ ಖಾಲಿ ಹುದ್ದೆಗೆ ವರ್ಗಾಯಿಸಬಹುದು. ನ
(3) ಜಿಲ್ಲೆಯೊಳಗೆ ವಲಯ 'ಬಿ'. ನಲ್ಲಾಗಲಿ ಅಥವಾ dvab ‘&’ ನಲ್ಲಾಗಲಿ ಖಾಲಿ ಹುದ್ದೆಗಳು ಲಭ್ಯವಿಲ್ಲದ ಸಂದರ್ಭದಲ್ಲಿ,-
(ಎ) weds ಖಾಲಿ ಸ್ಥಾನವನ್ನು ಕೋರಿಕೆ ವರ್ಗಾವಣೆ ಅವಧಿಯಲ್ಲಿ ಆಯ್ಕೆ ಮಾಡಿಕೊಳ್ಳದಿದ್ದರೆ, ಆಗ ಅಂಥ ಶಿಕ್ಷಕನನ್ನು ಮುಂದಿನ ವಲಯ ವರ್ಗಾವಣೆಯವರೆಗೂ ಅದೇ ಶಾಲೆಯಲ್ಲಿ ಮುಂದುವರಿಯಲು ಅವಕಾಶ ಕಲ್ಪಿಸತಕ್ಕದ್ದು.
(ಬಿ) ಭಾವಿತ ಖಾಲಿ ಸ್ಥಾನವನ್ನು ಕೋರಿಕೆ ವರ್ಗಾವಣೆ ಅವಧಿಯಲ್ಲಿ ಆಯ್ಕೆ ಮಾಡಿಕೊಂಡಲ್ಲಿ ಆಗ ಅಂಥ ಶಿಕ್ಷಕನನ್ನು ವಲಯ 'ಎ' ನಲ್ಲಿ ಯಾವುದೇ ಖಾಲಿ ಸ್ಥಾನಕ್ಕೆ ನಿಯೋಜನೆ ಮಾಡತಕ್ಕದ್ದು. ವಲಯ ‘a’ Boob 2’ ಅಥವಾ ವಲಯ 'ಸಿ' ನಲ್ಲಿ ಎಲ್ಲಾದರೂ ಯಾವುದೇ ಖಾಲಿ ಸ್ಥಾನಗಳು ಲಭ್ಯವಿಲ್ಲದಿದ್ದರೆ ಆಗ ಅಂಥ ಶಿಕ್ಷಕನನ್ನು ವಲಯ 'ಬಿ'.. ಅಥವಾ ವಲಯ 'ಸಿ'. ನಲ್ಲಿ ಅತಿ ಹೆಚ್ಚಿನ ಪಿಟಿಆರ್ ಅನುಪಾತ ಹೊಂದಿರುವ ಶಾಲೆಗಳಲ್ಲಿ ಸ್ಥಳನಿಯುಕ್ತಿ ಮಾಡತಕ್ಕದ್ದು.