ಈ ಕೆಳಗಿನ ಸಂದರ್ಭಗಳಲ್ಲಿ ಮಾತ್ರ ಶೈಕ್ಷಣಿಕ ಅವಧಿಯಲ್ಲಿ, ಶಿಕ್ಷಕರ ವರ್ಗಾವಣೆಯನ್ನು ಮಾಡಲು ಇಲಾಖಾ ಮುಖ್ಯಸ್ಥರಿಗೆ ಅಧಿಕಾರ ನೀಡಲಾಗಿದೆ.
(i) ಶಿಸ್ತು ಕ್ರಮವು ಇತ್ಯರ್ಥದಲ್ಲಿರುವಾಗ ಅಮಾನತ್ತುಗೊಂಡಿರುವ ಸ್ಥಾನಕ್ಕೆ ವರ್ಗಾವಣೆ;
(ii) ಮುಂಬಡ್ತಿಗೆ ತತ್ಪರಿಣಾಮವಾದ ವರ್ಗಾವಣೆ;
(iii) ಸಾಮಾನ್ಯ ವರ್ಗಾವಣೆ ಪೂರ್ಣಗೊಂಡ ನಂತರ, ಖಾಲಿ ಸ್ಥಾನಗಳೆಂದು ನಿರ್ದಿಷ್ಟಪಡಿಸಿದ ಯಾವುದಾದರೂ ಹುದ್ದೆಗಳು ಹಾಗೆ. ಇದ್ದರೆ, ಸರ್ಕಾರವು, ಗೊತ್ತುಪಡಿಸಿದ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವಂಥ ಅರ್ಹ ಶಿಕ್ಷಕನನ್ನು ನೇಮಿಸಬಹುದು; ಮತ್ತು
(iv) ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿ, ಎಸ್ಎಸ್ಎ ಮತ್ತು ಆರ್ಎಮ್ಎಸ್ಎ ಮುಖ್ಯ ಕಚೇರಿಗಳಲ್ಲಿ, ಡಿಎಸ್ಇಆರ್ಪಿ, ಕೆಟಿಬಿಎಸ್, ಕೆಎಸ್ಇಇಬಿ, ಸಿಟಿಇಗಳು ಡಿಡಿಪಿಐಗಳಂತಹ ಇಲಾಖೆಗಳಂತಹ ಸಾರ್ವಜನಿಕ ಶಿಕ್ಷಣ ಇಲಾಖೆಯ ಇತರೆ ರಾಜ್ಯಮಟ್ಟದ ಕಚೇರಿಗಳಲ್ಲಿನ ಹುದ್ದೆಗಳನ್ನು, ಕೌನ್ಸಿಲಿಂಗ್. ಪ್ರಕ್ರಿಯೆಯ ಹೊರಗಿನ ಆಯ್ಕೆ ಹುದ್ದೆಗಳಾಗಿರತಕ್ಕದ್ದು.