(1) ಶಿಕ್ಷಕರ ಸಮರ್ಪಕ ಮರುಹಂಚಿಕೆ/ವಲಯ ವರ್ಗಾವಣೆಯ ಮೇರೆಗೆ ವರ್ಗಾವಣೆಗಾಗಿ ಕೋರಿಕೆ ಅರ್ಜಿಯನ್ನು ಮತ್ತು ವಿನಾಯಿತಿಗಾಗಿ ಅರ್ಜಿಯನ್ನು ಸಲ್ಲಿಸುವುದಕ್ಕಾಗಿ ನಿಗದಿಪಡಿಸಲಾದ ಅಂತಿಮ ದಿನಾಂಕದ ನಂತರ, ಸಂಬಂಧ ಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿ ಆದ್ಯತೆ ಅಥವಾ ವಿನಾಯಿತಿಯ ಪ್ರತಿಯೊಂದು ಅರ್ಜಿಯನ್ನು ಪರಿಶೀಲಿಸತಕ್ಕದ್ದು.
(ii) ಕ್ಷೇತ್ರ ಶಿಕ್ಷಣಾಧಿಕಾರಿ, 10ನೇ ನಿಯಮದ ಅಡಿಯಲ್ಲಿ ನಿರ್ದಿಷ್ಟಪಡಿಸಲಾದ ದಸ್ತಾವೇಜುಗಳನ್ನು ಸಲ್ಲಿಸುವ ಆಧಾರದ ಮೇಲೆ ಆದ್ಯತೆ ಅಥವಾ ವಿನಾಯಿತಿಯ ಅರ್ಹ ಸಂದರ್ಭಗಳ ತೀರ್ಮಾನಕ್ಕೆ ಬರತಕ್ಕದ್ದು.
(iii) ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ದಾಖಲೆಗಳ ವಿಶ್ವಾಸರ್ಹತೆ (ಸತ್ಯಾಸತ್ಯತೆ) ಅಥವಾ ನೈಜತೆಗೆ ಸಂಬಂಧಿಸಿದಂತೆ ಯಾವುದೇ ಸಂಶಯಗಳು ಉಂಟಾದರೆ, ಆತನು ಸಕ್ಷಮ ಪ್ರಾಧಿಕಾರದೊಂದಿಗೆ ಮರುಪರಿಶೀಲನೆ ಮಾಡತಕ್ಕದ್ದು.
(iv) ನಂತರ ಕ್ಷೇತ್ರ ಶಿಕ್ಷಣಾಧಿಕಾರಿಯು ಆನ್ಲೈನ್ನಲ್ಲಿ ಹಾಗೂ ಕಚೇರಿ ಸೂಚನಾ ಫಲಕದಲ್ಲಿ ಮುಂದಿನವುಗಳನ್ನು ಪ್ರಕಟಿಸತಕ್ಕದ್ದು.
(ಎ) ಕರಡು ಅರ್ಹ ಆದ್ಯತಾ ಪಟ್ಟಿ;
(ಬಿ) ಕಾರಣಗಳೊಂದಿಗೆ ಅನರ್ಹ ಕರಡು ಆದ್ಯತಾ ಪಟ್ಟಿ;
(ಸಿ) ವಿನಾಯಿತಿ ಪಡೆದ ಕರಡು ಅರ್ಹತಾ ಪಟ್ಟಿ;
(ಡಿ) ಕಾರಣಗಳೊಂದಿಗೆ ವಿನಾಯಿತಿ ಪಡೆಯಲು ಅನರ್ಹತಾ ಕರಡು ಪಟ್ಟಿ;
(ಇ) ಯಾವೊಬ್ಬ ಶಿಕ್ಷಕನಿಂದ ಆಕ್ಷೇಪಣೆಗಳಿಗೆ ಐದು ಕೆಲಸದ ದಿನಗಳನ್ನು ನೀಡುವುದು;
(ಎಫ್) ಕ್ಷೇತ್ರ ಶಿಕ್ಷಣಾಧಿಕಾರಿ ಅಧಿಸೂಚನೆಯಲ್ಲಿ ಉದ್ಭವಿಸುವ ಆಕ್ಷೇಪಣೆಗಳಿಗಾಗಿ ನಿಗದಿಪಡಿಸಿದ ಕೊನೆಯ ದಿನಾಂಕದ ತರುವಾಯ, ಮುಕ್ತವಾಗಿ ಅಹವಾಲು ಸಲ್ಲಿಸಲು ಹಾಗೂಆಲಿಸಲು ದಿನಾಂಕವನ್ನು ಸಹ ನಮೂದಿಸುವುದು; ಮತ್ತು ಜಿ) ಸ್ನ ವಾದ ಐದು ಕೆಲಸದ ದಿನಗಳ ತರುವಾಯ, ಶಿಕ್ಷಕರ ಕೃಪಾಂಕದ ಆಧಾರದ ಮೇಲೆ ಯಾವುದೇ e&l ಆಕ್ಷೇಪಣೆಗಳ: ಸ್ವೀಕರಿಸತಕ್ಕದ್ದಲ್ಲ. ೨೮. ”
(v) ಅರ್ಹವಾಗಿರುವ ಅಥವಾ ಅನರ್ಹವಾಗಿರುವ ಸಂದರ್ಭಗಳಲ್ಲಾಗಲಿ ಆಕ್ಷೇಪಣೆ ಹೊಂದಿರುವ ಯಾರೇ ಶಿಕ್ಷಕ, ಪೂರಕ ದಸ್ತಾವೇಜುಗಳ ಸಹಿತವಾಗಿ ಆನ್ಲೈನ್ನಲ್ಲಿ ದಾಖಲಿಸಬಹುದು. (vi) ಕ್ಷೇತ್ರ ಶಿಕ್ಷಣಾಧಿಕಾರಿ, ಎಲ್ಲಾ ಆನ್ಲೈನ್ ಆಕ್ಷೇಪಣೆಗಳನ್ನು ಪರಿಶೀಲಿಸತಕ್ಕದ್ದು. ಮತ್ತು “ಮುಕ್ತವಾಗಿ ಆಲಿಸುವ ದಿನಾಂಕದಂದು” ಅವರ ಅಹವಾಲುಗಳನ್ನು ಆಲಿಸಿ ಮೌಖಿಕ ಆದೇಶಗಳನ್ನು ಹೊರಡಿಸತಕ್ಕದ್ದು. ಮೌಖಿಕ ಆದೇಶಗಳನ್ನು ವರ್ಗಾವಣೆ ಪೋರ್ಟಲ್ ಮೇಲೆ ಮತ್ತು ಸೂಚನಾ ಫಲಕದ ಮೇಲೆ ಪ್ರಕಟಿಸತಕ್ಕದ್ದು.
(vii) ಆದೇಶಗಳನ್ನು ಹೊರಡಿಸಿದ ತರುವಾಯ, ಕ್ಷೇತ್ರ ಶಿಕ್ಷಣಾಧಿಕಾರಿ,-
(ಎ) . ಅಂತಿಮ ಆದ್ಯತಾ ಪಟ್ಟಿ; ಹಾಗೂ
(ಬಿ) . ಅಂತಿಮ ವಿನಾಯಿತಿ ಪಟ್ಟಿಯನ್ನು ಪ್ರಕಟಿಸತಕ್ಕದ್ದು.
(viii) ಆದೇಶದಿಂದ ಬಾಧಿತನಾದ ಯಾರೇ ಶಿಕ್ಷಕ ಆದೇಶವನ್ನು ಪ್ರಕಟಿಸಿದ ದಿನಾಂಕದಿಂದ ಮೂರು ಕೆಲಸದ ದಿನಗಳೊಳಗಾಗಿ ಕುಂದುಕೊರತೆ ನಿವಾರಣಾ ಅಧಿಕಾರಿಯನ್ನು ಸಂಪರ್ಕಿಸತಕ್ಕದ್ದು.