ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಮಗಳು) ನಿಯಮಗಳು, 2017, ಪದವಿಪೂರ್ವ ಕಾಲೇಜಿನ ಉಪನ್ಯಾಸಕರು ಅಥವಾ ಪ್ರಾಂಶುಪಾಲರ ವರ್ಗಾವಣೆಗೆ ಸಂಬಂಧಿಸಿದ ಉಪಬಂಧಗಳನ್ನು ಹೊರತುಪಡಿಸಿ, ಈ ಮೂಲಕ ನಿರಸನಗೊಳಿಸಲಾಗಿದೆ:
ಪರಂತು,
(ಎ) . ಸದರಿ ನಿಯಮಗಳ ಮೇರೆಗೆ ಮಾಡಿದ ಯಾವುದೇ ಕಾರ್ಯ ಅಥವಾ ತೆಗೆದುಕೊಂಡ ಯಾವುದೇ ಕ್ರಮಕ್ಕೆ; ಅಥವಾ (ಬಿ). ಸದರಿ ನಿಯಮಗಳ ಹಿಂದಿನ ನಿರ್ವಹಣೆಗೆ ಅಥವಾ ಅದರ ಮೇರೆಗೆ ಕ್ರಮಬದ್ಧವಾಗಿ ಮಾಡಿದ ಯಾವುದೇ ಕ್ರಮ ಅಥವಾ ಕೈಗೊಂಡ ಕ್ರಮಕ್ಕೆ; ಅಥವಾ
(ಸಿ) ಸದರಿ ನಿಯಮಗಳ ಮೇರೆಗೆ ಆರ್ಜಿಸಿದ, ಪ್ರಾಪ್ತವಾದ ಅಥವಾ ಗುರಿಯಾದ ಯಾವುದೇ ಹಕ್ಕು ವಿಶೇಷಾಧಿಕಾರ, ಬಾಧ್ಯತೆ ಅಥವಾ ಹೊಣೆಗಾರಿಕೆಗಳಿಗೆ; ಅಥವಾ
(8) ಸದರಿ ನಿಯಮಗಳ ಮೇರೆಗೆ, ಮಾಡಲಾದ ಯಾವುದೇ ಅಪರಾಧಕ್ಕೆ ಸಂಬಂಧಿಸಿದಂತೆ ಗುರಿಯಾದ ಯಾವುದೇ ದಂಡ ಅಥವಾ ಶಿಕ್ಷೆಗೆ, - ಅಂತಹ ನಿರಸನವು ಬಾಧಕವಾಗತಕ್ಕದ್ದಲ್ಲ.
ಮತ್ತೂ ಪರಂತು, ಕರ್ನಾಟಕ ಸಾಮಾನ್ಯ ಖಂಡಗಳ ಅಧಿನಿಯಮ, 1899 (1899ರ ಕರ್ನಾಟಕ ಅಧಿನಿಯಮ Il) ರ 6ನೇ ಪ್ರಕರಣದ ಉಪಬಂಧಗಳು, ಸದರಿ ನಿಯಮಗಳ ನಿರಸನಕ್ಕೆ ಸಂಬಂಧಿಸಿದಂತೆ ಅನ್ವಯವಾಗತಕ್ಕದ್ದು.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,
(ಶೇಖರ)
ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರಾಥಮಿಕ)(ಪ್ರ),
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ.