(1) ವರ್ಗಾವಣೆಗಳನ್ನು, ಪ್ರತಿ ವರ್ಷದ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಸಾಮಾನ್ಯವಾಗಿ ಕೈಗೊಳ್ಳತಕ್ಕದ್ದು.
(2) ಸರ್ಕಾರವು, ವರ್ಗಾವಣಾ ನಿಯಂತ್ರಣ ಅಧಿಕಾರಿಯ ಶಿಫಾರಸ್ಸುಗಳ ಮೇಲೆ, ವರ್ಗಾವಣೆ ಪ್ರಕ್ರಿಯೆಯನ್ನು ಅದು ಸೂಕ್ತವೆನಿಸಿದಲ್ಲಿ, (1) ನೇ ಉಪ ನಿಯಮದಲ್ಲಿ ನಿರ್ದಿಷ್ಟಪಡಿಸಿದ ಕಾಲಮಿತಿ ನಂತರವೂ ವರ್ಗಾವಣೆಗಳನ್ನು ಕೈಗೊಳ್ಳಲು ಅನುಮತಿಸಬಹುದು.
(3) ಪ್ರತಿ ವರ್ಷ ವರ್ಗಾವಣೆ ಪ್ರಕ್ರಿಯೆ ನಿಯಂತ್ರಣ ಅಧಿಕಾರಿಯು, ಮುಂದಿನ ಪ್ರಮುಖ ಹಂತಗಳನ್ನು ಹೊಂದಿರುವ ವರ್ಗಾವಣೆ ಪ್ರಕ್ರಿಯೆಗಳಿಗೆ ವೇಳಾಪಟ್ಟಿಯನ್ನು ಪ್ರಕಟಿಸತಕ್ಕದ್ದು:-
(ಎ) ಜಿಲ್ಲೆಯೊಳಗೆ ಮಂಜೂರಾದ ಹುದ್ದೆಗಳ ಮರು ನಿಯುಕ್ತಿ ಕ್ರಮಗಳು;
(ಬಿ) ಖಾಲಿ ಹುದ್ದೆಗಳ ಅಧಿಸೂಚನೆ;
(ಸಿ) ಹೆಚ್ಚುವರಿ ಶಿಕ್ಷಕರ ಸಮರ್ಪಕ ಮರುಹಂಚಿಕೆಗೆ (ಖಚಿಣ/ಟಿಚಿಟಐಚೆಣ1ಟಿ) ಅಥವಾ ವಲಯ ವರ್ಗಾವಣೆ ಅಡಿಯಲ್ಲಿ ವರ್ಗಾವಣೆ ಮಾಡಬೇಕಾದ ಶಿಕ್ಷಕರ ಕರಡು ಪಟ್ಟಿಯ ಅಧಿಸೂಚನೆ;
(8) ಕೋರಿಕೆ. ವರ್ಗಾವಣೆ ಮತ್ತು ಹೆಚ್ಚುವರಿ ಶಿಕ್ಷಕರ ಸಮರ್ಪಕ ಮರುಹಂಚಿಕೆಗೆ ಅಥವಾ ವಲಯ ವರ್ಗಾವಣೆಯಿಂದ ವಿನಾಯಿತಿಗೆ ಅರ್ಜಿಯನ್ನು ಆಹ್ವಾನಿಸುವುದು;
(ಇ) ವಿನಾಯಿತಿಗೊಳಿಸುವ ಶಿಕ್ಷಕರ ಪಟ್ಟಿ ಮತ್ತು ಆದ್ಯತೆ ನೀಡುವ ಶಿಕ್ಷಕರ ಪಟ್ಟಿಯನ್ನು ಅಂತಿಮಗೊಳಿಸುವುದು; (ಎಫ್) ಹೆಚ್ಚುವರಿ ಶಿಕ್ಷಕರ ಸಮರ್ಪಕ ಮರುಹಂಚಿಕೆ ಅಡಿಯಲ್ಲಿ ವರ್ಗಾಯಿಸಬೇಕಾದ ಶಿಕ್ಷಕರ ಅಂತಿಮ ಪಟ್ಟಿಯನ್ನು ಸಿದ್ಧಪಡಿಸುವುದು ಮತ್ತು ಪ್ರಕಟಿಸುವುದು;
(ಜಿ) ತಾಲೂಕಿನೊಳಗೆ ಮತ್ತು ಜಿಲ್ಲೆಯೊಳಗೆ ಶಿಕ್ಷಕರನ್ನು ಸಮರ್ಪಕ ಮರುಹಂಚಿಕೆಗೊಳಿಸುವುದು;
(ಎಚ್) ನಿರ್ದಿಷ್ಟಪಡಿಸಿದ. ಮತ್ತು ತಾಂತ್ರಿಕ ಸಹಾಯಕರ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ವರ್ಗಾವಣೆ;
(ಐ) . ವಲಯ ವರ್ಗಾವಣೆ ಅಡಿಯಲ್ಲಿ ವರ್ಗಾಯಿಸಬೇಕಾದ ಶಿಕ್ಷಕರ ಅಂತಿಮ ಪಟ್ಟಿಯನ್ನು ಸಿದ್ಧಪಡಿಸುವುದು ಮತ್ತು ಪ್ರಕಟಿಸುವುದು;
( ಜೆ). wads ಖಾಲಿ ಸ್ಥಾನಗಳೊಂದಿಗೆ ಪರಿಷ್ಕೃತ ಖಾಲಿ ಹುದ್ದೆಗಳ ಅಧಿಸೂಚನೆ;
( ಕೆ). ಜಿಲ್ಲೆಯೊಳಗೆ ಕೋರಿಕೆ ವರ್ಗಾವಣೆಗಳು;
ಎಲ್) ವಲಯ ವರ್ಗಾವಣೆಗಳು; ( ( ಎಂ) ಜಿಲ್ಲೆಯ ಹೊರಗೆ ಕೋರಿಕೆ ವರ್ಗಾವಣೆಗಳು (ವಿಭಾಗದೊಳಗೆ);
( ಎನ್) ವಿಭಾಗದ ಹೊರಗೆ ಕೋರಿಕೆ ವರ್ಗಾವಣೆಗಳು;ಮತ್ತು ( ಒ) ಪರಸ್ಪರ ವರ್ಗಾವಣೆಗಳು.
ಟಿಪ್ಪಣಿ.- “ಶಿಕ್ಷಕರ ಹುದ್ದೆಗಳ ಮರು ಹಂಚಿಕೆ ಮತ್ತು ಹೆಚ್ಚುವರಿ ಶಿಕ್ಷಕರ ಸಮರ್ಪಕ ಮರುಬಳಕೆಗೆ ಸ್ಥಳ ನಿಯುಕ್ತಿ” ಮತ್ತು “ವಲಯ ವರ್ಗಾವಣೆಗಳನ್ನು” ಪ್ರತಿಯೊಂದು ಪರ್ಯಾಯ ವರ್ಷದಲ್ಲಿ ಕೈಗೊಳ್ಳತಕ್ಕದ್ದು. “ಶಿಕ್ಷಕರ ಹುದ್ದೆಗಳ ಮರು ನಿಯೋಜನೆ ಮತ್ತು ಹೆಚ್ಚುವರಿ ಶಿಕ್ಷಕರ ಸಮರ್ಪಕ ಮರುಬಳಕೆಗೆ ಸ್ಥಳನಿಯುಕ್ತಿ”. ಕೈಗೊಂಡ ವರ್ಷದಲ್ಲಿ “ವಲಯ ವರ್ಗಾವಣೆಗಳನ್ನು” . ಕೈಗೊಳ್ಳತಕ್ಕದ್ದಲ್ಲ ಮತ್ತು ವಲಯ ವರ್ಗಾವಣೆಗಳನ್ನು ಕೈಗೊಂಡಲ್ಲಿ ಶಿಕ್ಷಕರ ಮರುನಿಯೋಜನೆ ಮತ್ತು ಸುವ್ಯವಸ್ಥೆಗೊಳಿಸುವಿಕೆ ಮಾಡತಕ್ಕದ್ದಲ್ಲ.