(1) ಶಿಕ್ಷಕರ ಸಮರ್ಪಕ ಮರುಹಂಚಿಕೆ ಅಡಿಯಲ್ಲಿ ಮತ್ತು ವಲಯ ವರ್ಗಾವಣೆಯಡಿ ವಿನಾಯಿತಿಗೆ ಹಾಗೂ ಕೋರಿಕೆ ವರ್ಗಾವಣೆಗಳ ಆದ್ಯತೆಗಾಗಿ 10ನೇ ಪ್ರಕರಣದಲ್ಲಿ ನಿರ್ಧಿಷ್ಟ ಪಡಿಸಿದಂತೆ ಷರತ್ತುಗಳನ್ನು ಪಾಲಿಸತಕ್ಕದ್ದು.
(2) ವಿನಾಯಿತಿಗಳು/ಒದಗಿಸಲಾದ ಮತ್ತಷ್ಟು ಆದ್ಯತೆಗಳ ಕ್ಲೇಮಿನಲ್ಲಿ ಹಾಜರುಪಡಿಸಬೇಕಾದ ಪ್ರಮಾಣ ಪತ್ರಗಳು ಈ ಕೆಳಗಿನಂತಿವೆ, ಎಂದರೆ.-
| ಕ್ರ.ಸಂ | ವಿನಾಯಿತಿ ಅಥವಾ ಆದ್ಯತೆ ಕ್ಲೇಮು | ಪೂರಕ ದಾಖಲೆಗಳು |
| 1 | ಸರ್ಕಾರ ಅಥವಾ ಕೇಂದ್ರ ಸರ್ಕಾರ ಅಥವಾ ರಾಜ್ಯ ಅನುದಾನಿತ ಸಂಸ್ಥೆಯ ನೌಕರನನ್ನು ವಿವಾಹವಾಗಿರುವ ಶಿಕ್ಷಕ | ಸಂಗಾತಿಯ ನೇಮಕಾತಿ ಪ್ರಾಧಿಕಾರದಿಂದ ಪ್ರಮಾಣಪತ್ರ |
| 2 | ತಾಲೂಕಿನೊಳಗೆ ಚಿಕಿತ್ಸೆ ಸಿಗದಿರುವ ಮಾರಕ ಕಾಯಿಲೆ ಅಥವಾ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಶಿಕ್ಷಕ ಅಥವಾ ಪತಿ/ಪತ್ನಿ ಅಥವಾ ಮಕ್ಕಳು ಮತ್ತು ಶೇಕಡಾ 40ರಷ್ಟು ಅಥವಾ ಅದಕ್ಕಿಂತ ಹೆಚ್ಚು ಅಂಗವೈಕಲ್ಯವಿರುವ ಶಿಕ್ಷಕ ಅಥವಾ ಪತಿ/ಪತ್ನಿ ಅಥವಾ ಮಕ್ಕಳು | ಜಿಲ್ಲಾ ವೈದ್ಯಕೀಯ ಮಂಡಳಿಯಿಂದ ಪ್ರಮಾಣಪತ್ರ |
| 3 | ಗರ್ಭಿಣಿ ಶಿಕ್ಷಕಿ ಅಥವಾ ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವನ್ನು ಹೊಂದಿರುವ ಮಹಿಳಾ ಶಿಕ್ಷಕಿ | ಜಿಲ್ಲಾ ವೈದ್ಯಕೀಯ ಮಂಡಳಿಯಿಂದ ಪ್ರಮಾಣಪತ್ರ |
| 4 | ಅವಲಂಬಿತ ಮಕ್ಕಳೊಂದಿಗೆ ಇರುವ ವಿಧವೆ ಅಥವಾ ವಿಧುರ ಶಿಕ್ಷಕ | ಸಂಗಾತಿಯ ಮರಣ ಪ್ರಮಾಣ ಪತ್ರ ಮತ್ತು ಮರು ವಿವಾಹ ಮಾಡಿಕೊಳ್ಳದಿರುವ ಬಗ್ಗೆ ಮ್ಯಾಜಿಸ್ಟ್ರೇಟ್ ಅಫಿಡವಿಟ್ |
| 5 | ಭಾರತೀಯ ರಕ್ಷಣಾ ಪಡೆಗಳ ಅಥವಾ ಅರೆಸೇನಾ ಪಡೆಗಳ BO ಅಥವಾ ಮಾಜಿಸೈನಿಕ.. ಅಥವಾ ಶಾಶ್ವತವಾಗಿ ಅಂಗವಿಕಲನಾದ ಅಥವಾ ಮೃತ ಸೈನಿಕನ ಪತ್ನಿ ಅಥವಾ | ಕಮಾಂಡಿಂಗ್. ಆಫೀಸರ್ ಅಥವಾ ನಿರ್ದೇಶಕರು, ಸೈನಿಕ ಕಲ್ಯಾಣ ಮಂಡಳಿಯಿಂದ ಪ್ರಮಾಣಪತ್ರ |
| ಸಂದರ್ಭಾನುಸಾರ ಸಂಗಾತಿ. | ||
| 6 | ಅವಲಂಬಿತ ಮಕ್ಕಳೊಂದಿಗೆ ಇರುವ ವಿವಾಹ ವಿಚ್ಛೇದಿತ ಶಿಕ್ಷಕ/ಶಿಕ್ಷಕಿ. | ನ್ಯಾಯಾಲಯದ ಡಿಕ್ರಿ ಮತ್ತು ಅವಲಂಬಿತ ಮಗು ಬಗ್ಗೆ ಮ್ಯಾಜಿಸ್ಟ್ರೇಟ್ ಅಫಿಡವಿಟ್,ಮತ್ತು ಮರುವಿವಾಹವಾಗದೇ ಇರುವುದು. ಮುಸ್ಲಿಮರಾಗಿದ್ದಲ್ಲಿ ಮಸೀದಿ ಸಮಿತಿಯಿಂದ ನೀಡಲಾದ ಖುಲನಾಮಾ, ತಲಾಖ್-ನಾಮ. ಅಥವಾ ತಲಾಕ್-ಇ- ಮುಬಾರತ್ ಮತ್ತು ಅವಲಂಬಿತ ಮಗು ಬಗ್ಗೆ ಮ್ಯಾಜಿಸ್ಟ್ರೇಟ್ ಅಫಿಡವಿಟ್ ಹಾಗೂ ಮರುವಿವಾಹವಾಗದೇ ಇರುವುದು. |
| 7 | ಐವತ್ತು ವರ್ಷಗಳ ವಯೋಮಾನದ ಮಹಿಳಾ ಶಿಕ್ಷಕಿಯರು ಅಥವಾ ಐವತ್ತೈದು ವರ್ಷಗಳ ವಯೋಮಾನದ ಪುರುಷ ಶಿಕ್ಷಕರು | ಸೇವಾ . ರಿಜಿಸ್ಟರ್ ಪ್ರಕಾರ ಡಿಡಿಓ ರವರಿಂದ ನೀಡಲಾದ ಪ್ರಮಾಣಪತ್ರ. |