(1) ಗರಿಷ್ಠ ಅವಧಿಯನ್ನು ಪೂರ್ಣಗೊಳಿಸಿ ನಿರ್ದಿಷ್ಟಪಡಿಸಿದ ಮತ್ತು ತಾಂತ್ರಿಕ ಸಹಾಯಕರ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುವ ಶಿಕ್ಷಕರನ್ನು ಜಿಲ್ಲೆಯಲ್ಲಿ ಯಾವುದೇ ಖಾಲಿ ಹುದ್ದೆಗೆ ಕೌನ್ಸಿಲಿಂಗ್ ಪ್ರಕ್ರಿಯೆಯ ಮೂಲಕ ಶಾಲೆಗಳಿಗೆ ವರ್ಗಾವಣೆ ಮಾಡತಕ್ಕದ್ದು. ಜಿಲ್ಲೆಯ ವ್ಯಾಪ್ತಿಯೊಳಗೆ ಖಾಲಿ ಸ್ಥಾನಗಳು ಇಲ್ಲದಿದ್ದರೆ, ಶಿಕ್ಷಕರನ್ನು ಅತಿ ಹೆಚ್ಚಿನ ಪಿಟಿಆರ್ ಅನುಪಾತ ಹೊಂದಿರುವ ಶಾಲೆಗಳಿಗೆ ವರ್ಗಾವಣೆ ಮಾಡತಕ್ಕದ್ದು.
(2) ಮೇಲಿನ ಹುದ್ದೆಗಳಲ್ಲಿ ಕನಿಷ್ಠ ಮೂರು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ಶಿಕ್ಷಕರು, ವರ್ಗಾವಣೆಗೆ ಪ್ರಕ್ರಿಯೆಯ ಅವಧಿಯಲ್ಲಿ, ಖಾಲಿ ಹುದ್ದೆಗಳಿಗೆ ವರ್ಗಾವಣೆಯನ್ನು ಕೋರಬಹುದು. ಅವರಿಗೆ ಅವರ ಆಯ್ಕೆಯ ಖಾಲಿ ಹುದ್ದೆಯು ಸಿಗದಿದ್ದರೆ ಅವರು ಗರಿಷ್ಠ ಅವದಿಯನ್ನು ಪೂರ್ಣಗೊಳಿಸುವವರೆಗೆ, ನಿರ್ದಿಷ್ಟಪಡಿಸಿದ ಹುದ್ದೆಯಲ್ಲಿ ಮುಂದುವರಿಯತಕ್ಕದ್ದು.
ಪರಂತು, ಮೇಲಿನ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರ ಕಾರ್ಯಸಾಧನೆಯ ತೃಪ್ತಿಕರವಾಗಿಲ್ಲದಿದ್ದರೆ, ಅವರನ್ನು ಜಿಲ್ಲೆಯ 'ಸಿ'. ವಲಯದಲ್ಲಿರುವ ಯಾವುದೇ ಖಾಲಿ ಹುದ್ದೆಗೆ ಸಹ ವರ್ಗಾವಣೆ ಮಾಡಬಹುದು.
(3) ಆದ್ಯತಾ ಕ್ರಮಾಂಕವೇ ಕೌನ್ಸಿಲಿಂಗ್ಗೆ ಮೂಲ ಆಧಾರವಾಗಿರತಕ್ಕದ್ದು.